ಎಲ್ಲವೂ ಬದಲಾಗುತ್ತಿದೆ – ಮಣ್ಣು ನಿಸ್ಸಾರವಾಗುತ್ತಿದೆ | ಹೈಬ್ರಿಡ್ ಬೀಜಗಳು ಮೇಳೈಸಿವೆ…! |

March 3, 2023
2:54 PM

ಬದಲಾವಣೆ ಜಗದ ನಿಯಮ.. ಹಾಗಂತ ಎಲ್ಲವೂ ಬದಲಾದರೆ..? ಇಡೀ ಜಗತ್ತೇ ಬದಲಾಗುತ್ತದೆ. ದಿನಿತ್ಯದ ಚಟುವಟಿಕೆಯಲ್ಲೂ ಬದಲಾವಣೆ ಕಾಣುತ್ತದೆ. ಆದರೆ ಅದು ಎಷ್ಟು ಸೂಕ್ತ. ಈ ಬದಲಾವಣೆಯಿಂದ ಪರಿಸರದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ. ಅದನ್ನು ಪರಿಸರರಕ್ಕೆ ತಡೆದುಕೊಳ್ಳುವ ಶಕ್ತಿ ಇದೆಯೇ..? ಅದರಿಂದ ನಮ್ಮ ಮೇಲೆ ಯಾವ ರೀತಿಯಾದ ಪರಿಣಾಮ ಬೀರಬಹುದು.. ? ಈ ಎಲ್ಲಾ ಬದಲಾವಣೆಗಳ ಬಗ್ಗೆ ಸಂಜಯ್ ಹೊಯ್ಸಳ ಅವರು ಬರೆದ ಲೇಖನ ಇಂದಿಗೆ ಖಂಡಿತ ಪ್ರಸ್ತುತ ಎಂದೇ ಹೇಳಬಹುದು.

Advertisement

ಭೂಮಿ ಮೇಲೆ ಮಾನವ ಎಂಬ ಒಂದೇ ಒಂದು ಜೀವಿಯ ಸಂಖ್ಯೆ ಬಿಲಿಯನ್ ಲೆಕ್ಕದಲ್ಲಿ ಏರಿದಂತೆ ಉಳಿದ ಅಸಂಖ್ಯಾತ ಜೀವಿಗಳು ಒಂದೊಂದೆ ಶಾಶ್ವತವಾಗಿ ಕಣ್ಮರೆಯಾಗುತ್ತಿವೆ. ಹಿಂದೆ ಕೃಷಿ ಭೂಮಿಯಲ್ಲೂ ಎಲ್ಲೆಲ್ಲೂ‌ ಕಾಣುತ್ತಿದ್ದ ನರಿ, ಮೊಲ, ಕಾಡು ಬೆಕ್ಕು, ಕಬ್ಬೆಕ್ಕು, ಕಬ್ರುಜೋಳ (ಸಹಸ್ರಪದಿ), ಸಾವಿರ ಸಾವಿರ ಸಂಖ್ಯೆಯ ಸರೀಸೃಪಗಳು, ಲಕ್ಷೋಪಾದಿಯ ವೈವಿಧ್ಯಮಯ ಹಕ್ಕಿಗಳು…  ‘ತುಂಬಿದ ಕೊಡ’ದಂತ ಕೃಷಿ ಭೂಮಿಯಲ್ಲಿ ಸಂತೃಪ್ತವಾಗಿದ್ದವು. ಇಂದು ಗಿಡ ಮರಗಳಿಲ್ಲದೆ ಬರಿದಾದ ಉದ್ದುದ್ದದ ‘ಖಾಲಿ ಕೊಡ’ದಂತ ಕೃಷಿ ಭೂಮಿಯಲ್ಲಿ ಮಣ್ಣು ಬಿಟ್ಟರೇ ಬೇರೇನೂ ಇಲ್ಲದಾಗಿದೆ! ಆ ಮಣ್ಣು ಕೂಡ ದಿನೇ ದಿನೆ ನಿಸ್ಸಾರವಾಗುತ್ತಿದೆ!!

ವ್ಯವಸಾಯದ ಪ್ರತಿ ಹಂತದಲ್ಲೂ ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸಿಕೊಂಡು ನಡೆಯುತ್ತಿದ್ದ ಸಾಂಪ್ರದಾಯಿಕ ಕೃಷಿ ಪದ್ದತಿಯ ಜಾಗವನ್ನು ಯಾಂತ್ರಿಕ ಕೃಷಿ ಆವರಿಸಿಕೊಂಡ ನಂತರ ತಿಪ್ಪೆ ಗೊಬ್ಬರ, ಕೃಷಿ ಭೂಮಿಯಲ್ಲಿ ಬೆಳೆಯುತ್ತಿದ್ದ ತರೇವರಿ ಗಿಡಮರಗಳು, ವೈವಿಧ್ಯಮಯ ಬೆಳೆಗಳು, ಉದ್ಯಮ ಸ್ವರೂಪ ಕಾಣದ ಕೃಷಿಯೊಂದಿಗೆ ಬೆರತುಹೋಗಿದ್ದ ಹೈನುಗಾರಿಕೆ… ಎಲ್ಲವೂ ಬದಲಾಗಿ  ಪ್ರತಿಹಂತದಲ್ಲೂ ರಾಸಾಯನಿಕ ಕೃಷಿ, ಏಕಬೆಳೆ ಕೃಷಿ, ಮೂಲ ತಳಿಯ ತರೇವಾರಿ ಬೀಜ ತಳಿಗಳ‌ ಜಾಗದಲ್ಲಿ ಏಕರೀತಿಯ ಹೈಬ್ರೀಡ್ ಬೀಜಗಳು ಮೇಳೈಸಿದವು.

ಎಲ್ಲಾ ಕ್ಷೇತ್ರದಲ್ಲಿಯೂ ಲಾಭವೇ ಮುಖ್ಯವಾಗಿರುವಾಗ, ಆರ್ಥಿಕತೆಯೇ ಬದುಕೆಂಬ ‘ಕತೆ’ಯ ಜೀವಾಳವಾಗಿರುವಾಗ ಇವೆಲ್ಲವೂ ಅನಿವಾರ್ಯ ಎನ್ನುವಂತಾಗಿರುವುದು ಮಾತ್ರ ಸತ್ಯ! ಉಳಿದವರು ಎಲ್ಲವನ್ನು ಉಡಾಯಿಸಿ ಅಕ್ರಮ, ಭ್ರಷ್ಟತೆಯ ಮೂಲಕ ಐಶಾರಾಮಿ ಜೀವನ ನಡೆಸುವಾಗ, ರೈತರು ಮಾತ್ರ ‘ಪರಿಶುದ್ಧ’ ವಾಗಿರಬೇಕೆಂಬುದು ಎಷ್ಟು ನ್ಯಾಯ!? ಹಾಗಾಗಿ ಈ ವಿಷಯದಲ್ಲಿ ಎಲ್ಲಾ ಹಂತದಲ್ಲೂ ಬದಲಾವಣೆಯಾಗಬೇಕಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |
April 28, 2025
10:21 PM
by: The Rural Mirror ಸುದ್ದಿಜಾಲ
ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
April 28, 2025
7:02 AM
by: The Rural Mirror ಸುದ್ದಿಜಾಲ
ಬೆಳಗಾವಿಯಲ್ಲಿ 3 ದಿನಗಳ ಮಾವು, ಜೇನು ಮೇಳ | ರೈತರಿಂದ ಪ್ರದರ್ಶನ, ಗ್ರಾಹಕರಿಗೆ ನೇರ ಮಾರಾಟ
April 26, 2025
9:54 PM
by: The Rural Mirror ಸುದ್ದಿಜಾಲ
ರಬ್ಬರ್ ತೋಟಗಳ ಮಾಹಿತಿ ಸಂಗ್ರಹ | ರಬ್ಬರ್ ತೋಟಗಳ ಜಿಯೋ-ಮ್ಯಾಪಿಂಗ್
April 25, 2025
9:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group