ಬದಲಾವಣೆ ಜಗದ ನಿಯಮ.. ಹಾಗಂತ ಎಲ್ಲವೂ ಬದಲಾದರೆ..? ಇಡೀ ಜಗತ್ತೇ ಬದಲಾಗುತ್ತದೆ. ದಿನಿತ್ಯದ ಚಟುವಟಿಕೆಯಲ್ಲೂ ಬದಲಾವಣೆ ಕಾಣುತ್ತದೆ. ಆದರೆ ಅದು ಎಷ್ಟು ಸೂಕ್ತ. ಈ ಬದಲಾವಣೆಯಿಂದ ಪರಿಸರದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ. ಅದನ್ನು ಪರಿಸರರಕ್ಕೆ ತಡೆದುಕೊಳ್ಳುವ ಶಕ್ತಿ ಇದೆಯೇ..? ಅದರಿಂದ ನಮ್ಮ ಮೇಲೆ ಯಾವ ರೀತಿಯಾದ ಪರಿಣಾಮ ಬೀರಬಹುದು.. ? ಈ ಎಲ್ಲಾ ಬದಲಾವಣೆಗಳ ಬಗ್ಗೆ ಸಂಜಯ್ ಹೊಯ್ಸಳ ಅವರು ಬರೆದ ಲೇಖನ ಇಂದಿಗೆ ಖಂಡಿತ ಪ್ರಸ್ತುತ ಎಂದೇ ಹೇಳಬಹುದು.
ಭೂಮಿ ಮೇಲೆ ಮಾನವ ಎಂಬ ಒಂದೇ ಒಂದು ಜೀವಿಯ ಸಂಖ್ಯೆ ಬಿಲಿಯನ್ ಲೆಕ್ಕದಲ್ಲಿ ಏರಿದಂತೆ ಉಳಿದ ಅಸಂಖ್ಯಾತ ಜೀವಿಗಳು ಒಂದೊಂದೆ ಶಾಶ್ವತವಾಗಿ ಕಣ್ಮರೆಯಾಗುತ್ತಿವೆ. ಹಿಂದೆ ಕೃಷಿ ಭೂಮಿಯಲ್ಲೂ ಎಲ್ಲೆಲ್ಲೂ ಕಾಣುತ್ತಿದ್ದ ನರಿ, ಮೊಲ, ಕಾಡು ಬೆಕ್ಕು, ಕಬ್ಬೆಕ್ಕು, ಕಬ್ರುಜೋಳ (ಸಹಸ್ರಪದಿ), ಸಾವಿರ ಸಾವಿರ ಸಂಖ್ಯೆಯ ಸರೀಸೃಪಗಳು, ಲಕ್ಷೋಪಾದಿಯ ವೈವಿಧ್ಯಮಯ ಹಕ್ಕಿಗಳು… ‘ತುಂಬಿದ ಕೊಡ’ದಂತ ಕೃಷಿ ಭೂಮಿಯಲ್ಲಿ ಸಂತೃಪ್ತವಾಗಿದ್ದವು. ಇಂದು ಗಿಡ ಮರಗಳಿಲ್ಲದೆ ಬರಿದಾದ ಉದ್ದುದ್ದದ ‘ಖಾಲಿ ಕೊಡ’ದಂತ ಕೃಷಿ ಭೂಮಿಯಲ್ಲಿ ಮಣ್ಣು ಬಿಟ್ಟರೇ ಬೇರೇನೂ ಇಲ್ಲದಾಗಿದೆ! ಆ ಮಣ್ಣು ಕೂಡ ದಿನೇ ದಿನೆ ನಿಸ್ಸಾರವಾಗುತ್ತಿದೆ!!
ವ್ಯವಸಾಯದ ಪ್ರತಿ ಹಂತದಲ್ಲೂ ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸಿಕೊಂಡು ನಡೆಯುತ್ತಿದ್ದ ಸಾಂಪ್ರದಾಯಿಕ ಕೃಷಿ ಪದ್ದತಿಯ ಜಾಗವನ್ನು ಯಾಂತ್ರಿಕ ಕೃಷಿ ಆವರಿಸಿಕೊಂಡ ನಂತರ ತಿಪ್ಪೆ ಗೊಬ್ಬರ, ಕೃಷಿ ಭೂಮಿಯಲ್ಲಿ ಬೆಳೆಯುತ್ತಿದ್ದ ತರೇವರಿ ಗಿಡಮರಗಳು, ವೈವಿಧ್ಯಮಯ ಬೆಳೆಗಳು, ಉದ್ಯಮ ಸ್ವರೂಪ ಕಾಣದ ಕೃಷಿಯೊಂದಿಗೆ ಬೆರತುಹೋಗಿದ್ದ ಹೈನುಗಾರಿಕೆ… ಎಲ್ಲವೂ ಬದಲಾಗಿ ಪ್ರತಿಹಂತದಲ್ಲೂ ರಾಸಾಯನಿಕ ಕೃಷಿ, ಏಕಬೆಳೆ ಕೃಷಿ, ಮೂಲ ತಳಿಯ ತರೇವಾರಿ ಬೀಜ ತಳಿಗಳ ಜಾಗದಲ್ಲಿ ಏಕರೀತಿಯ ಹೈಬ್ರೀಡ್ ಬೀಜಗಳು ಮೇಳೈಸಿದವು.
ಎಲ್ಲಾ ಕ್ಷೇತ್ರದಲ್ಲಿಯೂ ಲಾಭವೇ ಮುಖ್ಯವಾಗಿರುವಾಗ, ಆರ್ಥಿಕತೆಯೇ ಬದುಕೆಂಬ ‘ಕತೆ’ಯ ಜೀವಾಳವಾಗಿರುವಾಗ ಇವೆಲ್ಲವೂ ಅನಿವಾರ್ಯ ಎನ್ನುವಂತಾಗಿರುವುದು ಮಾತ್ರ ಸತ್ಯ! ಉಳಿದವರು ಎಲ್ಲವನ್ನು ಉಡಾಯಿಸಿ ಅಕ್ರಮ, ಭ್ರಷ್ಟತೆಯ ಮೂಲಕ ಐಶಾರಾಮಿ ಜೀವನ ನಡೆಸುವಾಗ, ರೈತರು ಮಾತ್ರ ‘ಪರಿಶುದ್ಧ’ ವಾಗಿರಬೇಕೆಂಬುದು ಎಷ್ಟು ನ್ಯಾಯ!? ಹಾಗಾಗಿ ಈ ವಿಷಯದಲ್ಲಿ ಎಲ್ಲಾ ಹಂತದಲ್ಲೂ ಬದಲಾವಣೆಯಾಗಬೇಕಿದೆ.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…