ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Minister Nirmala Sitharaman) ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಆರಂಭದಲ್ಲಿ ಸರ್ಕಾರದ (Modi Government) ಅಭಿವೃದ್ಧಿ ಕೆಲಸಗಳ ಮಾಹಿತಿಯನ್ನು ನೀಡಿದರು. ಗ್ರಾಮೀಣ(Rural) ಭಾಗದಲ್ಲಿ 3 ಕೋಟಿ ಮನೆಗಳ ನಿರ್ಮಾಣ ಮಾಡಲಾಗಿದೆ. ಅದರಲ್ಲಿ 1 ಕೋಟಿ ಮನೆಗಳ ಮೇಲೆ ಸೌರ ವಿದ್ಯುತ್ ಅಳವಡಿಕೆ ಮಾಡಲಾಗುತ್ತದೆ. ಉಚಿತ ಸೋಲಾರ್ ವಿದ್ಯುತ್ ಘೋಷಿಸಲಾಗಿದೆ. ಮಧ್ಯಮ ವರ್ಗಕ್ಕೆ ವಸತಿ ಯೋಜನೆ ಮೂಲಕ ಮನೆ ನೀಡಲಾಗಿದೆ.
ರೈತರಿಗೆ(Farmer) ಆಧುನಿಕ ತಂತ್ರಜ್ಞಾನದ ಸಹಾಯಕ್ಕಾಗಿ ನ್ಯಾನೋ ಯೂರಿಯಾ ಎಲ್ಲಾ ವಲಯಗಳಿಗೆ ವಿಸ್ತರಣೆ ಮಾಡಲಾಗಿದೆ. ಆತ್ಮನಿರ್ಭರ್ ಆಯಿಲ್ ಸೀಡ್ ಅಭಿಯಾನ ಆರಂಭಿಸಲಾಗಿದೆ. ಎಣ್ಣೆಬೀಜಗಳಲ್ಲಿ ಆತ್ಮನಿರ್ಭರತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ಹೈನುಗಾರಿಕೆ ರೈತರಿಗೆ ಹಾಲು ಹೆಚ್ಚಳಕ್ಕೆ ಯೋಜನೆ. ಡೇರಿಗೆ ಮೂಲಭೂತ ಸೌಕರ್ಯಗಳ ಹೆಚ್ಚಳ ಮಾಡಲಾಗುತ್ತಿದೆ ಎಂದರು. ಮತ್ಸ್ಯ ಸಂಪದ ಯೋಜನೆಯಿಂದ ಮೀನುಗಾರರಿಗೆ ನೆರವು ನೀಡಲಾಗಿದೆ. ಮತ್ಸ್ಯ ಸಂಪದ ಯೋಜನೆ ಮೂಲಕ 55 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ಹೊಂದಲಾಗಿದೆ.
ಅಭಿವೃದ್ಧಿಗಾಗಿ ಸರ್ಕಾರದ ಕೆಲಸ : 10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಬದಲಾವಣೆ ಕಂಡಿದೆ. ಮೋದಿ ನೇತೃತ್ವದಲ್ಲಿ ದೇಶದಲ್ಲಿ ಹಲವು ಬದಲಾವಣೆ, ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಉದ್ಯೋಗ, ಉದ್ದಿಮೆಗೆ ಹಲವು ಅವಕಾಶ ಕಲ್ಪಿಸಲಾಗಿದೆ. 2ನೇ ಅವಧಿಯಲ್ಲಿ ಎಲ್ಲಾ ಜನರ ಅಭಿವೃದ್ಧಿಗಾಗಿ ಸರ್ಕಾರ ಕೆಲಸ ಮಾಡಿದೆ, ಮಾಡುತ್ತಿದೆ.
80 ಕೋಟಿ ಜನರಿಗೆ ಉಚಿತ ಪಡಿತರ : ಉಜ್ವಲ ಭವಿಷ್ಯಕ್ಕೆ ಮೋದಿ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿ ಗೊಳಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ಪ್ರತಿಯೊಬ್ಬರಿಗೂ ಯೋಜನೆ ತಲುಪಿದೆ. ಎಲ್ಲರಿಗೂ ಗ್ಯಾಸ್, ನೀರು, ಬ್ಯಾಂಕ್ ಖಾತೆ ಒದಗಿಸೋ ಗುರಿಯನ್ನು ಸರ್ಕಾರ ಹೊಂದಿದೆ. 80 ಕೋಟಿ ಜನರಿಗೆ ಉಚಿತ ಪಡಿತರ ಒದಗಿಸಲಾಗ್ತಿದೆ. ಅಭಿವೃದ್ಧಿ ಮೂಲಕ ಸಾಮಾಜಿಕ ನ್ಯಾಯಕ್ಕೆ ಪಣ ತೊಟ್ಟಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಹಳ್ಳಿಗಳ ಅಭಿವೃದ್ಧಿ : ಕೊರೋನಾ ನಂತರ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ಜನರಿಗೆ ಹೊಸ ಉದ್ಯೋಗಾವಕಾಶಗಳು ಸಿಕ್ಕಿವೆ. ನಮ್ಮ ಸರ್ಕಾರ ಯುವ ದೇಶದ ಆಕಾಂಕ್ಷೆಗಳನ್ನು ಈಡೇರಿಸಿದೆ. ನಮ್ಮ ಸರ್ಕಾರವು ಹಳ್ಳಿಗಳ ಜನರ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ವಿತ್ತ ಸಚಿವೆ ಹೇಳಿದರು.
– ಅಂತರ್ಜಾಲ ಮಾಹಿತಿ(ನ್ಯೂಸ್ 18)