ಪಿಎಂ-ಕುಸುಮ್ ಯೋಜನೆಯ ಭಾಗವಾಗಿ 2.93 ಲಕ್ಷ ಕೃಷಿ ಪಂಪ್ ಸೆಟ್‌ಗಳು ಮತ್ತು ಒಟ್ಟು 1,162.8 ಮೆಗಾವ್ಯಾಟ್ ಸಾಮರ್ಥ್ಯದ 1,156 ಫೀಡರ್‌ಗಳನ್ನು ಸೌರಶಕ್ತಿ ಚಾಲಿತಗೊಳಿಸುವ ಗುರಿಯನ್ನು ಆಂದ್ರಪ್ರದೇಶ ಹೊಂದಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ವಿಜಯಾನಂದ್ ಹೇಳಿದ್ದಾರೆ. ಈ ಬಗ್ಗೆ ಇಲಾಖೆಗಳಿಗೆ ನಿರ್ದೇಶನವನ್ನೂ ನೀಡಿದ್ದಾರೆ.
ಕೇಂದ್ರ ಯೋಜನೆಯಡಿಯಲ್ಲಿ, ಈಗಾಗಲೇ ಗುರುತಿಸಲಾದ 5,842 ಎಕರೆ ಭೂಮಿಯಲ್ಲಿ 1,162.8 ಮೆಗಾವ್ಯಾಟ್ ಸೌರ ಸ್ಥಾವರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ಯೋಜನೆಯ ಅನುಷ್ಠಾನವು ವಿಳಂಬವಿಲ್ಲದೆ ಮುಂದುವರಿಯಲು ಆಯ್ದ ಡೆವಲಪರ್‌ಗಳೊಂದಿಗೆ ವಿದ್ಯುತ್ ಖರೀದಿ ಮತ್ತು ಭೂ ಗುತ್ತಿಗೆ ಒಪ್ಪಂದಗಳಿಗೆ ಸಹಿ ಹಾಕಬೇಕೆಂದು ಅವರು ನಿರ್ದೇಶಿಸಿದರು. 12 ತಿಂಗಳೊಳಗೆ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಆಗಬೇಕು ಎಂದೂ ಅವರು ಹೇಳಿದರು. ಕೃಷಿ ಫೀಡರ್‌ಗಳ ಸೋಲಾರ್ ಗೆ ವರ್ಗಾಯಿಸುವುದರಿಂದ ಸರ್ಕಾರದ ಮೇಲಿನ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುತ್ತದೆ, ರೈತರಿಗೆ ಗುಣಮಟ್ಟದ ಹಾಗೂ ಖಚಿತವಾಗಿ ಹಗಲಿನ ವಿದ್ಯುತ್ ಪೂರೈಕೆಯಾಗುತ್ತದೆ ಎಂದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ…. 

