ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ ಈಜೀಪುರ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ ಯಶಸ್ವಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಆಯುಕ್ತ ಕೆ.ಎನ್.ರಮೇಶ್ ತಿಳಿಸಿದ್ದಾರೆ.
ಈಜಿಪುರದಲ್ಲಿರುವ ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣೆ ಘಟಕಕ್ಕೆ ಭೇಟಿ ನೀಡಿ ಘಟಕದ ಕಾರ್ಯವೈಖರಿಯನ್ನು ಅವರು ಪರಿಶೀಲನೆ ನಡೆಸಿದರು. 2024 ರ ಮಾರ್ಚ್‌ನಿಂದ ಈ ಘಟಕ ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 8 ವಾರ್ಡ್‌ಗಳಿಂದ ಸುಮಾರು 160 ರಿಂದ 170 ಮೆಟ್ರಿಕ್ ಟನ್ ತ್ಯಾಜ್ಯ ಬರಲಿದೆ. ಘಟಕದಲ್ಲಿ 35 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಈ ತ್ಯಾಜ್ಯವನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕ್ಯಾಪ್ಸೂಲ್‌ಗಳ ಮೂಲಕ ರವಾನಿಸಲಾಗುತ್ತದೆ ಎಂದು ಕೆ.ಎನ್. ರಮೇಶ್ ತಿಳಿಸಿದರು. ಘಟಕದಲ್ಲಿ 7 ಕ್ಯಾಫ್ಸೂಲ್ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ಕ್ಯಾಪ್ಸೂಲ್ ವಾಹನಕ್ಕೆ ಎರಡು ಕಂಟೈನರ್‌ಗಳು ಇರಲಿವೆ. ವಾರ್ಡ್‌ಗಳಿಂದ ಆಟೋ ಟಿಪ್ಪರ್‌ಗಳ ಮೂಲಕ ಬರುವ ತ್ಯಾಜ್ಯವನ್ನು ಕಂಪ್ರೆಸ್ ಮಾಡಿ ತುಂಬುವುದರಿಂದ 1 ಕ್ಯಾಫ್ಸೂಲ್‌ನಲ್ಲಿ 16 ರಿಂದ 18 ಟನ್ ತ್ಯಾಜ್ಯವನ್ನು ತುಂಬಹುದಾಗಿದ್ದು, ಇದರಿಂದ ಕಡಿಮೆ ವಾಹನಗಳನ್ನು ಬಳಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..

