ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |
Share
ವಿಶ್ವದೆಲ್ಲೆಡೆ ತಾಪಮಾನ ಏರಿಕೆಯಾಗುತ್ತಿದೆ. ಇದಕ್ಕೆ ಪರಿಹಾರದ ಬಗ್ಗೆ ಎಲ್ಲೆಡೆಯೂ ಚರ್ಚೆಯಾಗುತ್ತಿದೆ. ತಾಪಮಾನ ಇಳಿಕೆಗೆ ಪರಿಸರ ರಕ್ಷಣೆ , ಜಲಸಂರಕ್ಷಣೆ, ಮಾಲಿನ್ಯ ನಿಯಂತ್ರಣ.. ಇದೆಲ್ಲಾ ಎಲ್ಲೆಡೆಯೂ ನೀಡುವ ಪರಿಹಾರ ಮಾರ್ಗಗಳು. ಆದರೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮೈಸೂರಿನ ಡಾ. ಖಾದರ್ ವಲ್ಲಿ ದೂದೇಕುಲ ಅವರು ಹೇಳುವ ಪರಿಹಾರ ಮಾರ್ಗ “ಆಹಾರದಲ್ಲಿ ಬದಲಾವಣೆ ತನ್ನಿರಿ” ಎಲ್ಲದಕ್ಕೂ ಪರಿಹಾರ ಸಾಧ್ಯವಿದೆ ಎನ್ನುತ್ತಾರೆ. ಮೈಸೂರಿನಲ್ಲಿ ನೆಲೆಯೂರಿ ಸಿರಿಧಾನ್ಯಗಳ ಮಹತ್ವವನ್ನು ಸಾರುವ ಕಾರ್ಯದಲ್ಲಿ ತೊಡಗಿರುವ, ಆರೋಗ್ಯ ವಿಜ್ಞಾನದ ಸಂತ ಎಂದೇ ವಿಶ್ವದಾದ್ಯಂತ ಕರೆಸಿಕೊಳ್ಳುವ ಡಾ. ಖಾದರ್ ವಲ್ಲಿ ದೂದೇಕುಲ ಅವರು ಈಚೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ವೇಳೆ , ದ ರೂರಲ್ ಮಿರರ್.ಕಾಂ ಅವರ ಜೊತೆ ನಡೆಸಿ ಮಾತುಕತೆಯ ಸಾರಾಂಶ ಇಲ್ಲಿದೆ…… …….ಮುಂದೆ ಓದಿ…..
Advertisement
Advertisement
Advertisement
ಸಿರಿಧಾನ್ಯ ಅಥವಾ ಮಿಲ್ಲೆಟ್ಸ್ ಬಗ್ಗೆ ದೇಶದಲ್ಲಿ ಜಾಗೃತಿ, ಅಭಿಯಾನಗಳು ನಡೆದ ಬಳಿಕ ಈಗ ಜನರಲ್ಲಿ ಜಾಗೃತಿ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ ಡಾ.ಖಾದರ್,
ದೇಶದ ಜನರಲ್ಲಿ ಕಳೆದ ಕೆಲವು ವರ್ಷಗಳಿಂದ ಮಿಲ್ಲೆಟ್ಸ್ (ಸಿರಿಧಾನ್ಯ) ಆರೋಗ್ಯಕ್ಕೆ ಪೂರಕವಾಗಿದೆ ಎಂದು ಸತ್ಯ ತಿಳಿಯುತ್ತಿದೆ. ಈ ಸತ್ಯದ ಬಗ್ಗೆ ವೈಜ್ಞಾನಿಕವಾಗಿಯೂ ನಿರೂಪಣೆ ಮಾಡಲಾಗಿದೆ. ಅನೇಕ ರೋಗಿಗಳು ಸಿರಿಧಾನ್ಯ ಬಳಕೆ ಮಾಡಿ ಆರೋಗ್ಯವಂತರಾಗಿದ್ದಾರೆ, ಆರೋಗ್ಯವಂತರಾಗುತ್ತಿದ್ದಾರೆ. ಮಿಲ್ಲೆಟ್ಸ್(ಸಿರಿಧಾನ್ಯಗಳು) ಸೇರಿದ ಹಲವು ಧಾನ್ಯಗಳು ಇವೆ. ಇಡೀ ಪ್ರಪಂಚದಲ್ಲಿ 200 ಧಾನ್ಯಗಳು ಇವೆ. ಅವುಗಳಲ್ಲಿ ಈಗ ಸಾಮಾನ್ಯವಾಗು ಭಾರತದಲ್ಲಿ 5 ಬಗೆಯವು ಮಾತ್ರಾ ಎಂದು ಹೇಳಲಾಗುತ್ತಿದೆ. ಆದರೆ ಅದಲ್ಲ, ಅದೊಂದು ತಪ್ಪು ಕಲ್ಪನೆಯಾಗಿದೆ. ಇಡೀ ಪ್ರಪಂಚದಲ್ಲಿರುವ 200 ಬಗೆಯ ಧಾನ್ಯಗಳನ್ನೂ ಮಾನವ ಜಾತಿ ಬಳಕೆ ಮಾಡುತ್ತಿತ್ತು. ಮಿಲ್ಲೆಟ್ಸ್ ಸುಮಾರು 6 ಸಾವಿರ ಹುಲ್ಲುಗಳಿಂದ ಆಯಾ ಪ್ರದೇಶಕ್ಕೆ ಅನುಗುಣವಾಗಿ ಬೆಳೆಯಲಾಗುತ್ತದೆ. ತೇವಾಂಶದಿಂದಲೇ ಬೆಳೆಯುವ ಪ್ರದೇಶಗಳೂ ಇವೆ, ನೀರಿಲ್ಲದೇ ಬೆಳೆಯುವ ಪ್ರಬೇಧಗಳೂ ಇವೆ, ತಾಪಮಾನವನ್ನು ಸಹಿಸಿಕೊಳ್ಳುವ ಪ್ರಬೇಧವೂ ಇದೆ. ಒಟ್ಟಾರೆಯಾಗಿ ಶೇ.90 ರಷ್ಟು ಭೂಮಿಯ ಪ್ರದೇಶದಲ್ಲಿ ಸಿರಿಧಾನ್ಯಗಳು(ಮಿಲ್ಲೆಟ್ಸ್) ಬೆಳೆಯಬಹುದಾಗಿದೆ.
Advertisement
ಆಹಾರ ಭದ್ರತೆಯ ಕೊರತೆ ಕಾಡಬಹುದು ಎನ್ನುವ ಮಾತಿದೆ, ಅದು ಹೇಗೆ ಮತ್ತು ಅದಕ್ಕೆ ಪರಿಹಾರ ಯಾವುದು..? ಎಂಬ ಪ್ರಶ್ನೆಗೆ ಮಾತನಾಡುವ ಡಾ.ಖಾದರ್ ಅವರು,
ವೈಜ್ಞಾನಿಕವಾಗಿ ಹಾಗೂ ಆರೋಗ್ಯದ ಬಗ್ಗೆಯೂ ಕೆದಕುತ್ತಾ ಹೋದರೆ, ಹಿಂದೆ ಎಲ್ಲರೂ ಬಳಸುತ್ತಿದ್ದ ಆಹಾರ ಮಿಲ್ಲೆಟ್ಸ್. ಆದರೆ ಹಸಿರು ಕ್ರಾಂತಿಯ ಕಾರಣದಿಂದ ಈ ಆಹಾರ ಪದ್ಧತಿ ಬದಲಾಯಿತು. ಅಕ್ಕಿ, ಗೋಧಿ ಆ ಸ್ಥಾನ ತುಂಬಿತು. ಆದರೆ ಅಕ್ಕಿ ಹಾಗೂ ಗೋಧಿ ಬೆಳೆಯಲು ಸಲೀಸಲಾಗಿ ಆಗುವುದಿಲ್ಲ. ಅದರದ್ದೇ ಪರಿಧಿ ಇದೆ, ನೀರು, ಪೋಷಕಾಂಶ ಬೇಕು. ಅದರದ್ದೇ ಆದ ಗುಣಧರ್ಮ, ಪರಿಸರವೂ ಬೇಕು. ಉಷ್ಣಾಂಶ ಹೆಚ್ಚಾದರೆ ಭತ್ತ, ಗೋಧಿ ಬೆಳೆಯುವುದಿಲ್ಲ. ಈ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಾಗ್ತಾ ಇದೆ. ಏಕೆಂದರೆ ಇಳುವರಿ ಕಡಿಮೆಯಾಗುತ್ತಿದೆ. ಈಗ 70 ಕೋಟಿ ಅಕ್ಕಿ-ಗೋಧಿ ಬೆಳೆಯುತ್ತಿದ್ದರು, 15 ವರ್ಷದ ಹಿಂದಿನ ದಾಖಲೆ ನೋಡಿದರೆ ಈಗ ಕಡಿಮೆಯಾಗುತ್ತಿದೆ ಈ ಪ್ರಮಾಣ. ತಾಪಮಾನ ಹೆಚ್ಚಾರೆ ಇನ್ನೂ ಕಡಿಮೆಯಾಗುತ್ತಿದೆ. ಊಟದ ವ್ಯವಸ್ಥೆ ಬದಲಾಯಿಸಬೇಕು ಎನ್ನುವುದು ಗೊತ್ತಾಗುತ್ತದೆ. ಹಾಗಿದ್ದರೆ ಅದಕ್ಕೆ ಪರ್ಯಾಯವಾಗಿ ಮಿಲ್ಲೆಟ್ ಬದಲಾಯಿಸಲು ಸಾಧ್ಯವಿದೆ. ಹಾಗಾಗಿ ಮಿಲ್ಲೆಟ್ಸ್ ಪ್ರತೀ ದೇಶದ ಆಹಾರವಾದರೆ ,ಈಗಿನ ಎಲ್ಲಾ ಸಮಸ್ಯೆಗೂ ಪರಿಹಾರ ಇದೆ.
…….ಮುಂದೆ ಓದಿ…..
ಈಗ ಎಷ್ಟು ಪ್ರಮಾಣದಲ್ಲಿ ಮಿಲ್ಲೆಟ್ಸ್ ಬೆಳೆಯಲಾಗುತ್ತಿದೆ, ಬಳಕೆ ಹೇಗಿದೆ ಎಂಬುದರ ಬಗ್ಗೆ ಮಾತನಾಡುವ ಡಾ.ಖಾದರ್,
25-30 ವರ್ಷಗಳಿಂದ ಅಧ್ಯಯನ ಮಾಡಿದಾಗ ಇಡೀ ಪ್ರಪಂಚದಲ್ಲಿ ಮಿಲ್ಲೆಟ್ಸ್ ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಅದನ್ನು ವಾಪಾಸ್ ಮಾನವರು ಬಳಕೆ ಮಾಡಬೇಕು. ಆರೋಗ್ಯ ಸ್ಥಿತಿಯನ್ನು ಮತ್ತೆ ತರಬೇಕಾದರೆ ಮಿಲ್ಲೆಟ್ಸ್ ಮಾತ್ರಾ ಸಾಧ್ಯ. ಈಗ ಇಡೀ ಪ್ರಪಂಚದ ಉತ್ಪಾದನೆ 2 ಕೋಟಿ ಟನ್ ಮಾತ್ರಾ. ಅದರಲ್ಲೂ ಭಾರತದಲ್ಲೇ ಹೆಚ್ಚು ಉತ್ಪಾದನೆ, ಅಂದರೆ ಇನ್ನೂ ಅವಕಾಶ ಇದೆ. ಈಗ ಬಳಕೆ ಆರಂಭವಾಗಿದೆ.
Advertisement
ಆಹಾರ ಭದ್ರತೆ ಸಮಸ್ಯೆ ಹೇಗೆ? ಆರೋಗ್ಯ ಸಮಸ್ಯೆಗೂ ಪರಿಹಾರ ಏನು ಎಂಬುದಕ್ಕೆ ಸರಳ ಉಪಾಯ ಹೇಳಿವ ಡಾ.ಖಾದರ್ ಅವರು,
ಆಹಾರದ ಭದ್ರತೆ ಕೊರತೆ ಖಂಡಿತಾವಾಗೂ ಕಾಡಬಹುದು. ಅಕ್ಕಿ-ಗೋಧಿ ಮಾತ್ರಾ ನಂಬಿದರೆ ನಿಶ್ಚಿತವಾಗೂ ಸಮಸ್ಯೆ ಇದೆ. ಕಳೆದ 10 ವರ್ಷಗಳಿಂದ ಅಕ್ಕಿ-ಗೋಧಿ ಇಳುವರಿ ಕಡಿಮೆಯಾಗಿದೆ. ಅಂದರೆ ಜನ ಸಂಖ್ಯೆ ಹೆಚ್ಚಳವಾಗಿದೆ. ಉತ್ಪಾದನೆಯು ತಾಪಮಾನದ ಕಾರಣದಿಂದ ಕಡಿಮೆಯಾಗಿದೆ. ಹಾಗಾಗಿ ಆಹಾರ ಭದ್ರತೆ ಉಂಟಾಗಬೇಕು. ಅದಕ್ಕೆ ಪರಿಹಾರ ಮಿಲ್ಲೆಟ್ಸ್ ಒಂದೇ.ಆಧುನಿಕ ರೋಗಗಳಿಗೂ ಅಕ್ಕಿ-ಗೋಧಿಯೂ ಕಾರಣ ಕಾರಣ. ಅದಕ್ಕೆ ಮಿಲ್ಲೆಟ್ಸ್ ಬಳಕೆ ಬರಬೇಕು, ಕಾಯಿಲೆಗಳನ್ನು ದೂರ ಮಾಡಲು ಸಾಧ್ಯವಿದೆ.
ಸರ್ಕಾರ ಏನೇನು ಮಾಡಿದೆ, ಏನು ಮಾಡಬಹುದು? ಎನ್ನುವುದಕ್ಕೂ ಡಾ.ಖಾದರ್ ಸಲಹೆ ನೀಡುವುದು ಹೀಗೆ,
ಆಹಾರದಲ್ಲಿ ಬದಲಾವಣೆ ಮಾಡಿದಾಗ ಆರೋಗ್ಯ ಸಮಸ್ಯೆ, ತಾಪಮಾನ ಸಮಸ್ಯೆ, ಪರಿಸರದ ಸಮಸ್ಯೆಯೂ ಕಡಿಮೆಯೂ ಆಗುತ್ತದೆ. ಉಷ್ಣತೆ ಏರಿದಾಗ ಗೋಧಿ ಬೆಳೆಯಲು ಆಗುವುದಿಲ್ಲ. ಆದರೆ ಸಿರಿಧಾನ್ಯಗಳು 10 ಡಿಗ್ರಿಯಿಂದ 40 ಡಿಗ್ರಿಯವರೆಗಿನ ವಾತಾವರಣದಲ್ಲಿ ಬೆಳೆಯುತ್ತದೆ. ಇನ್ನು ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು, ರೈತರೂ ಗಮನಹರಿಸಿಬೇಕು. ಭಾರತವು ಮಿಲ್ಲೆಟ್ ಬಗ್ಗೆ ಮಾತನಾಡುದ ಮೊದಲ ದೇಶ. ಈಗ ಭಾರತದ ಸರ್ಕಾರವು ಈ ಜನವರಿಯಿಂದ ಮಿಲಿಟರಿ ಪಡೆಗೆ 30 ಶೇಕಡಾ ಮಿಲ್ಲೆಟ್ಸ್ ರೇಶನ್ ನೀಡುತ್ತಿದೆ. ಸರ್ಕಾರದ ಉತ್ತಮವಾದ ಕೆಲಸ ಇದಾಗಿದೆ.
Advertisement
ಮುಂದೆ ಇರುವ ದೊಡ್ಡ ಅವಕಾಶ ಕೃಷಿಕರಿಗೆ. ಕೃಷಿಕರು ಹೇಗೆ ಬೆಳೆಯಬಹುದು, ನೆರವು ಏನು ಬೇಕಾಗಿದೆ ? ಈ ಬಗ್ಗೆ ಮಾತನಾಡುವ ಡಾ.ಖಾದರ್,
ಕೃಷಿಕರು ಸಿರಿಧಾನ್ಯಗಳನ್ನು ಬೆಳೆಯಲು ಆಸಕ್ತಿ ವಹಿಸಬೇಕು. ಇದುವರೆಗೂ ಸಿರಿಧಾನ್ಯ ಬೆಳೆಯುವ ರೈತರು ಕಾಣದಾಗಿದ್ದರು. ಈಗ ಬೆಳೆಯುವವರು ಬೆಳಕಿಗೆ ಬಂದಿದ್ದಾರೆ. ಬರಡು ಭೂಮಿಯಲ್ಲಿ ಕೂಡಾ ಬೆಳೆಯಬಹುದಾದ ಬೆಳೆ ಇದು. ಹೀಗಾಗಿ ಗಮನಹರಿಸಬೇಕಾದ್ದು ಅಗತ್ಯ. ಇದಕ್ಕಾಗಿಯೇ ಸಚಿವಾಲಯವನ್ನೂ ಸರ್ಕಾರ ಸ್ಥಾಪನೆ ಮಾಡಬೇಕು. ನೀರಾವರಿ ಕಡಿಮೆ ಇದ್ದಾಗಲೂ ಈ ಬೆಳೆ ಬೆಳೆಯಬಹುದಾದ್ದರಿಂದ ಗಮನಹರಿಸಬಹುದು. ಮಿಲ್ಲೆಟ್ಸ್ ಬೆಳೆಯ ಕಾರಣದಿಂದ ನೀರಿನ ಸಂರಕ್ಷಣೆ, ಪರಿಸರ ಅಭಿವೃದ್ಧಿ, ಕೃಷಿ ಉಳಿಸುವ, ಮಣ್ಣಿನ ಸಂರಕ್ಷಣೆ ಸಾಧ್ಯವಿದೆ. ನೀರಿನ ಮಿತ ಬಳಕೆ ಹಾಗೂ ಕಡಿಮೆ ನೀರನ್ನು ಮಿಲ್ಲೆಟ್ಸ್ ಬಳಕೆ ಮಾಡುವುದರಿಂದ ಇತರ ಗಿಡ ಬೆಳೆಯುತ್ತದೆ, ನೀರು ಉಳಿಯುತ್ತದೆ. ನದಿ ಉಳಿಯುತ್ತದೆ. ಪರಿಸರವೂ ಉಳಿಯುತ್ತದೆ. ಕಾಲಕಾಲಕ್ಕೆ ಮಳೆಯಾಗಬಹದು .ಹೀಗಾಗಿ ತಾಪಮಾನವೂ ಕ್ರಮೇಣ ಇಳಿಕೆ ಸಾಧ್ಯವಿದೆ .
(ಸಂದರ್ಶನದ ಸಂಪೂರ್ಣ ವಿಡಿಯೋ ನಿರೀಕ್ಷಿಸಿ…)
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ
ಕೃಷಿಕ ಹಾಗೂ ಕೃಷಿ ಪತ್ರಕರ್ತ |
2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.