ಬಿದಿರಿನ ಬಗೆಗಿನ ಕೆಲವು ಸಂಗತಿಗಳು | ವಾಣಿಜ್ಯ ಬೆಳೆಯಾಗಿ ಬಿದಿರು

May 30, 2024
2:06 PM

ಬಿದಿರು(Bamboo) ಕಾಡು ಬೆಳೆಯಾದರೂ, ಈಗೀಗ ಶೃಂಗಾರಕ್ಕೆಂದು ಅದನ್ನು ಉದ್ಯಾನವನಗಳಲ್ಲೂ ಮನೆಯಂಗಳದಲ್ಲೂ ಬೆಳೆಯುತ್ತಾರೆ. ಇತ್ತೀಚೆಗೆ ರೈತರು(Farmer) ವಾಣಿಜ್ಯ ಬೆಳೆಯಾಗಿ(Commercial crop) ತಮ್ಮ ಜಮೀನಿನಲ್ಲಿ ಬೆಳೆಯಲು ಆರಂಭಿಸಿದ್ದಾರೆ. ಒಳ್ಳೆ ಬೇಡಿಕೆ ಕೂಡ ಇದೆ. ಬಿದಿರಿನ ಔಷಧೀಯ ಗುಣಗಳನ್ನು(Medicinal value) ಅರಿತುಕೊಂಡು ಮಾನವ ಅದನ್ನು ಪ್ರತಿಮನೆಮನೆಯ ಆಪ್ತಬಂಧುವಾಗಿ ಉಪಯೋಗಿಸುವುದನ್ನು ಕಲಿತಿದ್ದಾನೆ.

Advertisement
Advertisement
Advertisement

ಬಿದಿರಿನ ಪ್ರಭೇದಗಳು: ಜಗತ್ತಿನಲ್ಲಿ 550 ಪ್ರಭೇದಗಳ ಬಿದಿರು ಸಸ್ಯಗಳಿವೆಯೆಂದು ಪಟ್ಟಿ ಮಾಡಲಾಗಿದೆ. ಭಾರತದಲ್ಲೇ  136 ಜಾತಿಯ ಬಿದಿರುಗಳು ಇವೆ. ಆದರೆ ನಮಗೆ ಹೆಚ್ಚಾಗಿ ಕಾಣಿಸುವುದು, ಕೇವಲ 40 ಬಗೆಯ ಬಿದಿರುಗಳಷ್ಟೆ. ಬಿದಿರು ಹೂಬಿಡುವುದು, 32 ವರ್ಷಗಳ ನಂತರ, ಮತ್ತೆ 60 ವರ್ಷ,120 ವರ್ಷಗಳ ಕಾಲಬಾಳಿದ ನಂತರ. ಅಮೇಲೆ ಹೂ ಬಿಟ್ಟು ‘ಭತ್ತ’ ಕಟ್ಟಿಕೊಂಡ ಬಳಿಕ, ಒಣಗುವ ಜಾತಿಗಳೂ ಇವೆ. ಬಿದುರಿನಮೇಲೆ ಸಾಮಾನ್ಯವಾಗಿ ನಾವು ಮುಳ್ಳುಗಳನ್ನು ಕಾಣುತ್ತೇವೆ. ಆದರೆ ಮುಳ್ಳಿಲ್ಲದ ಪ್ರಭೇದಗಳೂ ಇವೆ. ಹತ್ತಿರ ಹತ್ತಿರ ಗೆಣ್ಣುಗಳಿರುವ ಬಿದಿರು ಮೆಳೆಗಳಂತೆ, ದೂರ-ದೂರ ಗೆಣ್ಣುಗಳಿರುವ ಬಿದುರಿನ ಮರಗಳೂ ಇವೆ. ಬಿದುರಿನ ಮರಗಳು ಯಾವಾಗಲೂ ಗುಂಪುಗುಂಪಾಗಿ ಬೆಳೆಯುತ್ತವೆ.

Advertisement

ಬಿದಿರಿನ ಬೆಳೆಯ ಮಾಹಿತಿ: ಇವು ದಿನಕ್ಕೆ 3-4 ಅಂಗುಲಗಳಷ್ಟು ಶೀಘ್ರವಾಗಿ ಬೆಳೆಯುತ್ತದೆ. ಎಳೆಬಿದಿರಿನ ಬುಡದಭಾಗವನ್ನು ‘ಕಳಲೆ,’ ಕತ್ತರಿಸಿ, ಪಲ್ಯ, ಸಾಂಬಾರು, ಉಪ್ಪಿನಕಾಯಿ-ಹೀಗೆ ವಿವಿಧ ವ್ಯಂಜನಗಳನ್ನು ತಯಾರಿಸಿಕೊಳ್ಳುವವರಿದ್ದಾರೆ. ಆದರೆ ಕಳಲೆಯನ್ನು ಬಳಸುವ ಮುನ್ನ ಅದನ್ನು ಕನಿಷ್ಠ 3 ದಿನಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನೆನೆಸದೆ ಹಾಗೇ ಬಿಟ್ಟರೆ ವಿಷಕಾರಿಯಾಗಿ ಕೆಲಸಮಾಡುತ್ತದೆ. ಕಳಲೆಯನ್ನು ಸಂಸ್ಕರಿಸಿದ ಬಳಿಕ, ಅದರ ಸಿಪ್ಪೆ ತುಂಡು ಇತ್ಯಾದಿಗಳನ್ನು ಜಾನುವಾರುಗಳ ಬಾಯಿಗೆ ಸಿಕ್ಕದಂತೆ ದೂರಕ್ಕೆ ಒಯ್ದು ಒಂದೆಡೆ ಹೂತುಹಾರುವುದು ಕ್ಷೇಮಕರ. ಬಿದಿರಿನ ಅಕ್ಕಿ, ನಾವು ಸಾಮಾನ್ಯವಾಗಿ ಬಳಸುವ ಅಕ್ಕಿ- ಗೋಧಿಗಳಿಗಿಂತ ಅಧಿಕ ಪೌಷ್ಟಿಕಾಂಶಯುಕ್ತವಾಗಿದೆ.

ಬಿದಿರಿನ ಕುರಿತು ಆಸಕ್ತಿದಾಯಕ ಸಂಗತಿಗಳು:

Advertisement
  1. ಕ್ಷಿಪ್ರ ಬೆಳವಣಿಗೆ: ಬಿದಿರು ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಸಸ್ಯವಾಗಿದೆ. ಇದು 24 ಗಂಟೆಗಳಲ್ಲಿ 47.6 ಇಂಚುಗಳಷ್ಟು ಬೆಳೆದ ದಾಖಲೆ ಇದೆ.
  2.  ಅಧಿಕ ಆಮ್ಲಜನಕ ಬಿಡುಗಡೆ: ಬಿದಿರಿನ ಮರವು ಇತರ ಮರಗಳಿಗಿಂತ 35% ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.
  3.  ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುವಿಕೆ: ಬಿದಿರು ಪ್ರತಿ ವರ್ಷ ಹೆಕ್ಟೇರಿಗೆ 17 ಟನ್ಗಳಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ. ಇಂಗಾಲದ ಪ್ರಮಾಣ ಅಧಿಕವಾಗಿ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯಂತಹ ಗಂಭೀರ ಸಮಸ್ಯೆಗಳಿಗೆ ಅದು ಅತಿ ಪ್ರಮುಖ ಕಾರಣವಾಗುತ್ತಿರುವಾಗ ಸಾಕಷ್ಟು ಪ್ರಮಾಣದ ಕಾರ್ಬನ್ ಹೀರುವ ಬಿದಿರು ಮಹತ್ವದ ಸಸ್ಯವೆನಿಸುತ್ತದೆ.
  4.  ಹೆಚ್ಚು ಗೊಬ್ಬರದ ಅಗತ್ಯವಿಲ್ಲ: ಬಿದಿರು ಬೆಳೆಯಲು ಅಧಿಕ ಗೊಬ್ಬರ, ಪೋಷಕಾಂಶಗಳ ಅಗತ್ಯವಿಲ್ಲ. ಇದು ತನ್ನ ಎಲೆಗಳನ್ನು ಬೀಳಿಸುವ ಮೂಲಕ ಸ್ವಯಂ ಮಲ್ಚ್ ಮಾಡಿಕೊಳ್ಳುತ್ತದೆ. ಅವೇ ಮುಂದೆ ಗೊಬ್ಬರವಾಗಿಯೂ ಕಾರ್ಯ ನಿರ್ವಹಿಸುತ್ತವೆ.
  5.  ಬರ ಸಹಿಷ್ಣು‌ ಸಸ್ಯ: ಬಿದಿರು ಒಣ ಪ್ರದೇಶದಲ್ಲೂ ಹುಲುಸಾಗಿ ಬೆಳೆಯುತ್ತದೆ. ಬರ ಸಹಿಷ್ಣು ಸಸ್ಯಗಳಾಗಿವೆ.
  6.  ವಾಣಿಜ್ಯ ಉದ್ದೇಶದ ಮೃದು ಪ್ರಭೇಧದ ಮರಗಳಿಗೆ ಸೂಕ್ತ ಪರ್ಯಾಯ: 20-30 ವರ್ಷಗಳನ್ನು ತೆಗೆದುಕೊಳ್ಳುವ ಮೃದುವಾದ ಮರಗಳಿಗೆ ಹೋಲಿಸಿದರೆ 3-5 ವರ್ಷಗಳಲ್ಲಿ ಕೊಯ್ಲಿಗೆ ಬರುವ ಸಾಮರ್ಥ್ಯವಿರುವ ಬಿದಿರು ಲಾಭದಾಯಕ.
  7.  ನಿರ್ಮಾಣ ವಸ್ತು: ಬಿದಿರು ಅತ್ಯಂತ ಬಲವಾಗಿದ್ದು, ಕುಟ್ಟು ಹೊಡಿಯದ ಮರವಾಗಿದೆ. ಹಾಗಾಗಿ ಇದನ್ನು ಮನೆ, ಬೇಲಿ ಸೇರಿ‌ ವಿವಿಧ ನಿರ್ಮಾಣ ಕಾರ್ಯಗಳಲ್ಲಿ ಬಳಸಿಕೊಳ್ಳಬಹುದು.
  8.  ಮಣ್ಣಿನ ಸವೆತಕ್ಕೆ ಪರಿಹಾರ: ಬಿದಿರಿನ ಅಸಂಖ್ಯಾತ ಬೇರುಗಳು, ಪ್ರತಿ ವರ್ಷ ವಿಸ್ತರಿಸುವ ಹೊಸ ಹೊಸ ರೈಜೋಮ್‌ಗಳು ವ್ಯಾಪಕ ಜಾಲವನ್ನು ಆವರಿಸಿಕೊಂಡು ಮಣ್ಣಿನ ಸವೆತವನ್ನು ತಡೆಯಲು ಅತ್ಯಂತ ಪರಿಣಾಮಕಾರಿಯಾಗಿವೆ.
  9.  ನೈಸರ್ಗಿಕ ಹವಾನಿಯಂತ್ರಕ: ಬಿದಿರು ಬೇಸಿಗೆಯಲ್ಲಿ ತನ್ನ ಸುತ್ತಲಿನ ಗಾಳಿಯನ್ನು ಸಾಕಷ್ಟು ತಂಪಾಗಿಸುತ್ತದೆ.
  10.  ಮರ ರೂಪಿ ಹುಲ್ಲು: ಬಿದಿರು ಒಂದು ಹುಲ್ಲಿನ ಜಾತಿ ಸಸ್ಯ. ಆದರೂ ಕೂಡ ಇದು ನೋಡಲು ಮರದಂತೆ ಕಾಣುತ್ತದೆ.
  11.  40- 50 ವರ್ಷಕ್ಕೆ ಒಮ್ಮೆ ಹೂ- ಕಾಯಿ (ಧಾನ್ಯ): ಬಿದಿರು ಸಾಮೂಹಿಕವಾಗಿ 40- 50 ವರ್ಷಕ್ಕೆ ಒಮ್ಮೆ ಹೂ ಕಾಯಿ ಬಿಡುತ್ತದೆ. ಇದು ಧಾನ್ಯವಾಗಿ (ಬಿದಿರಕ್ಕಿ) ಉದುರಿದಾಗ ಬಿದಿರು ಕೂಡ ಸಾಮೂಹಿಕವಾಗಿ ಸಾಯುತ್ತದೆ. ಈ ಪ್ರಕ್ರಿಯೆಗೆ ಸಸ್ಯ ವಿಜ್ಞಾನದಲ್ಲಿ ‘gregarious flowering’ ಎಂದು ಕರೆಯುತ್ತಾರೆ.
  12.  ಬಿದಿರಿನ ಕುಲಕಸುಬಿನ ಮೇದರ ಜನಾಂಗ: ಕರ್ನಾಟಕದ ವಿವಿಧ ಪ್ರದೇಶಗಳಲ್ಲಿರುವ ಮೇದರ ಜನಾಂಗ ಹಿಂದೆ ಬಿದಿರಿನ ಕರಕುಶಲ ವಸ್ತುಗಳನ್ನು ತಯಾರು ಮಾಡುವ ಕುಲಕಸುಬನ್ನು ಮಾಡುತ್ತಿದ್ದರು. ಇತ್ತೀಚೆಗೆ ಪ್ಲಾಸ್ಟಿಕ್ ವಸ್ತುಗಳ ಹಾವಳಿಯಲ್ಲಿ ಬಿದಿರಿನ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ಇವರಲ್ಲಿ ಬಹಳಷ್ಟು ಜನ ಬೇರೆ ವೃತ್ತಿಯತ್ತ ಚಿತ್ತ ಹರಿಸಿದ್ದಾರೆ.

 ಮಾಹಿತಿ : ಪರಿಸರ ಪರಿವಾರ

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror