ಬಿದಿರು(Bamboo) ಕಾಡು ಬೆಳೆಯಾದರೂ, ಈಗೀಗ ಶೃಂಗಾರಕ್ಕೆಂದು ಅದನ್ನು ಉದ್ಯಾನವನಗಳಲ್ಲೂ ಮನೆಯಂಗಳದಲ್ಲೂ ಬೆಳೆಯುತ್ತಾರೆ. ಇತ್ತೀಚೆಗೆ ರೈತರು(Farmer) ವಾಣಿಜ್ಯ ಬೆಳೆಯಾಗಿ(Commercial crop) ತಮ್ಮ ಜಮೀನಿನಲ್ಲಿ ಬೆಳೆಯಲು ಆರಂಭಿಸಿದ್ದಾರೆ. ಒಳ್ಳೆ ಬೇಡಿಕೆ ಕೂಡ ಇದೆ. ಬಿದಿರಿನ ಔಷಧೀಯ ಗುಣಗಳನ್ನು(Medicinal value) ಅರಿತುಕೊಂಡು ಮಾನವ ಅದನ್ನು ಪ್ರತಿಮನೆಮನೆಯ ಆಪ್ತಬಂಧುವಾಗಿ ಉಪಯೋಗಿಸುವುದನ್ನು ಕಲಿತಿದ್ದಾನೆ.
ಬಿದಿರಿನ ಪ್ರಭೇದಗಳು: ಜಗತ್ತಿನಲ್ಲಿ 550 ಪ್ರಭೇದಗಳ ಬಿದಿರು ಸಸ್ಯಗಳಿವೆಯೆಂದು ಪಟ್ಟಿ ಮಾಡಲಾಗಿದೆ. ಭಾರತದಲ್ಲೇ 136 ಜಾತಿಯ ಬಿದಿರುಗಳು ಇವೆ. ಆದರೆ ನಮಗೆ ಹೆಚ್ಚಾಗಿ ಕಾಣಿಸುವುದು, ಕೇವಲ 40 ಬಗೆಯ ಬಿದಿರುಗಳಷ್ಟೆ. ಬಿದಿರು ಹೂಬಿಡುವುದು, 32 ವರ್ಷಗಳ ನಂತರ, ಮತ್ತೆ 60 ವರ್ಷ,120 ವರ್ಷಗಳ ಕಾಲಬಾಳಿದ ನಂತರ. ಅಮೇಲೆ ಹೂ ಬಿಟ್ಟು ‘ಭತ್ತ’ ಕಟ್ಟಿಕೊಂಡ ಬಳಿಕ, ಒಣಗುವ ಜಾತಿಗಳೂ ಇವೆ. ಬಿದುರಿನಮೇಲೆ ಸಾಮಾನ್ಯವಾಗಿ ನಾವು ಮುಳ್ಳುಗಳನ್ನು ಕಾಣುತ್ತೇವೆ. ಆದರೆ ಮುಳ್ಳಿಲ್ಲದ ಪ್ರಭೇದಗಳೂ ಇವೆ. ಹತ್ತಿರ ಹತ್ತಿರ ಗೆಣ್ಣುಗಳಿರುವ ಬಿದಿರು ಮೆಳೆಗಳಂತೆ, ದೂರ-ದೂರ ಗೆಣ್ಣುಗಳಿರುವ ಬಿದುರಿನ ಮರಗಳೂ ಇವೆ. ಬಿದುರಿನ ಮರಗಳು ಯಾವಾಗಲೂ ಗುಂಪುಗುಂಪಾಗಿ ಬೆಳೆಯುತ್ತವೆ.
ಬಿದಿರಿನ ಬೆಳೆಯ ಮಾಹಿತಿ: ಇವು ದಿನಕ್ಕೆ 3-4 ಅಂಗುಲಗಳಷ್ಟು ಶೀಘ್ರವಾಗಿ ಬೆಳೆಯುತ್ತದೆ. ಎಳೆಬಿದಿರಿನ ಬುಡದಭಾಗವನ್ನು ‘ಕಳಲೆ,’ ಕತ್ತರಿಸಿ, ಪಲ್ಯ, ಸಾಂಬಾರು, ಉಪ್ಪಿನಕಾಯಿ-ಹೀಗೆ ವಿವಿಧ ವ್ಯಂಜನಗಳನ್ನು ತಯಾರಿಸಿಕೊಳ್ಳುವವರಿದ್ದಾರೆ. ಆದರೆ ಕಳಲೆಯನ್ನು ಬಳಸುವ ಮುನ್ನ ಅದನ್ನು ಕನಿಷ್ಠ 3 ದಿನಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನೆನೆಸದೆ ಹಾಗೇ ಬಿಟ್ಟರೆ ವಿಷಕಾರಿಯಾಗಿ ಕೆಲಸಮಾಡುತ್ತದೆ. ಕಳಲೆಯನ್ನು ಸಂಸ್ಕರಿಸಿದ ಬಳಿಕ, ಅದರ ಸಿಪ್ಪೆ ತುಂಡು ಇತ್ಯಾದಿಗಳನ್ನು ಜಾನುವಾರುಗಳ ಬಾಯಿಗೆ ಸಿಕ್ಕದಂತೆ ದೂರಕ್ಕೆ ಒಯ್ದು ಒಂದೆಡೆ ಹೂತುಹಾರುವುದು ಕ್ಷೇಮಕರ. ಬಿದಿರಿನ ಅಕ್ಕಿ, ನಾವು ಸಾಮಾನ್ಯವಾಗಿ ಬಳಸುವ ಅಕ್ಕಿ- ಗೋಧಿಗಳಿಗಿಂತ ಅಧಿಕ ಪೌಷ್ಟಿಕಾಂಶಯುಕ್ತವಾಗಿದೆ.
ಬಿದಿರಿನ ಕುರಿತು ಆಸಕ್ತಿದಾಯಕ ಸಂಗತಿಗಳು:
ಮಾಹಿತಿ : ಪರಿಸರ ಪರಿವಾರ
ಅಡಿಕೆಯ ಮೇಲೆ ಕ್ಯಾನ್ಸರ್‌ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…
ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು…
ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಯವರ ಆದೇಶದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು…
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…