ನಾಟಿ ಕೋಳಿ ಮರಿಗಳು ಸಾಯುವ ಕೆಲವು ಕಾರಣಗಳು | ಅನಿಸಿಕೆ

August 7, 2024
10:12 AM

ಹ್ಯಾಚರಿಗಳಲ್ಲಿ(Hatchery) ಒಂದು ದಿನದ ಮರಿಗೆ Md Vaccination ಮಾಡುತ್ತಾರೆ..(Marek’s disease). ಕೋಳಿಮರಿಯ(Chick) ಕುತ್ತಿಗೆSome of the reasons why transplanted chicks die as I have seen – ಯ ಹಿಂಭಾಗದಲ್ಲಿ ವಿಷೇಷವಾದ ಇಂಜೆಕ್ಟರ್ ಮೂಲಕ ಇಂಜೆಕ್ಟ್(Injection) ಮಾಡುತ್ತಾರೆ. ನಂತರ ಫಾರಂನವರು(Form) ಸರಿಯಾಗಿ ಬ್ರೂಡಿಂಗ್ ಹಾಗೂ ಬೇಕಾದಂತೆ ವ್ಯಾಕ್ಸಿನೇಶನ್ ಮಾಡುವ ಹಾಗೂ ಅಗತ್ಯವುಳ್ಳ ಸತ್ವಭರಿತ ಆಹಾರವನ್ನು(Nutritional food) ಕೃತಕವಾಗಿ ನೀಡುವ ಕಾರಣ ಸಣ್ಣ ಕೋಳಿಮರಿಗಳು ಸಾಯುವ ಪ್ರಮಾಣ ಕೇವಲ ಒಂದು ಶೇಕಡಾ ಆಗಿರುತ್ತದೆ..

Advertisement
Advertisement

ಕೆಲವೊಮ್ಮೆ ಮೊಟ್ಟೆಗಳು ವೀಕ್ ಇದ್ದಾಗ ಎಷ್ಟೇ ಜಾಗ್ರತೆ ಮಾಡಿದರೂ ನಮ್ಮ ಫಾರಂಗಳಲ್ಲಿ 10% ವರೆಗೆ ಮರಿಗಳು ಸಾಯುತ್ತದೆ.. ಆದರೆ ಸಾಕುವ ಕೋಳಿಗಳಿಗೆ ಎಲ್ಲಾ ರೀತಿಯ ಮದ್ದುಗಳು ಮಣ್ಣು ಹಾಗೂ ಹುಲ್ಲಿನ ಮೂಲಕ ಸಿಗುತ್ತವೆ ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ ಈಗಿನ ರಾಸಾಯನಿಕ ಗೊಬ್ಬರಗಳ ಕಾಲದಲ್ಲಿ ಅದೂ ಕೂಡಾ ಸರಿಯಾಗಿ ಕೋಳಿಗಳಿಗೆ ಸಿಗುವುದಿಲ್ಲ. ನಾಟಿ ಹೆಂಟೆಗಳು ಒಮ್ಮೆ ಮೊಟ್ಟೆಯಿಡಲು ಶುರು ಮಾಡಿದ ದಿನದಿಂದ ಅವುಗಳಿಗೆ ಅತ್ಯಗತ್ಯವಾಗಿರುವ ಎಲ್ಲಾ ರೀತಿಯ ಕ್ಯಾಲ್ಶಿಯಮ್ ಮತ್ತು ವಿಟಮಿನ್ ಹಾಗೂ ಪ್ರೋಟೀನ್ ಮದ್ದುಗಳನ್ನು ಒಳ್ಳೆಯ ಆಹಾರದೊಂದಿಗೆ ಸರಿಯಾಗಿ ಕೃತಕವಾಗಿ ನೀಡಿದಾಗ ಮಾತ್ರ ಹೆಚ್ಚು ಫಲಭರಿತ ಮೊಟ್ಟೆಗಳನ್ನು ಕೋಳಿಗಳು ನೀಡುತ್ತವೆ. ಹಾಗೂ ಇಂತಹ ಮೊಟ್ಟೆಗಳಿಂದ ಹೊರಬಂದಂತಹ ಮರಿಗಳು ಹುಟ್ಟಿನಿಂದಲೇ ತುಂಬಾ ಆರೋಗ್ಯದಿಂದಿರುತ್ತದೆ ಹಾಗೂ ಇಂಥಹ ಕೋಳಿಮರಿಗಳ ಸಾವಿನ ಸಂಖ್ಯೆ ತುಂಬಾ ಕಡಿಮೆ ಇರುತ್ತದೆ.

ನಾವು ಮೊಟ್ಟೆ ಇಡುವ ಹೆಂಟೆ ಕೋಳಿಗಳ ಬಗ್ಗೆ ಹೆಚ್ಚು ಗಮನ ಹರಿಸದಿರುವುದರಿಂದ ಅದರಿಂದ ಹುಟ್ಟಿದ ಮರಿಗಳ ಸಾವಿನ ಸಂಖ್ಯೆ ಹೆಚ್ಚಿರುತ್ತದೆ. ನಂತರ ಕಾವಿಗೆ ಕುಳಿತ ನಂತರ ಇದು ಆಗಾಗ್ಗೆ ಎದ್ದು ಬರುವಾಗ ಅದಕ್ಕೆ ಕುಡಿಯುವ ನೀರಿನಲ್ಲಿ ಗ್ಲೂಕೋಸ್ ಅಥವಾ ಇತರೇ ಕ್ಯಾಲ್ಶಿಯಮ್ ಮದ್ದುಗಳನ್ನು ನೀರಿಗೆ ಬೆರೆಸಿಡಬೇಕು. ಹಾಗೂ ಸತ್ವಭರಿತ ಆಹಾರವನ್ನು ನೀಡಬೇಕು. ಇಲ್ಲದಿದ್ದರೆ ಅದು ಸಂಪೂರ್ಣ ಬಳಲುವ ಕಾರಣ ಅದರ ಪರಿಣಾಮ ಹೆಂಟೆಯ ಆರೋಗ್ಯದ ಮೇಲೆ ಮತ್ತು ಮುಂದಿನ ಮೊಟ್ಟೆಗಳ ಮೇಲೆ ಬೀರುತ್ತದೆ. ಹ್ಯಾಚರಿಗಳಲ್ಲಿ ಮೊಟ್ಟೆ ಒಡೆದು ಮರಿಗಳು ಬಂದ ಕೂಡಲೇ ಅದರ ತಲೆಗೆ MD Vaccination ಮಾಡುವ ಮೂಲಕ ಅದಕ್ಕೆ ಮೊದಲ ಮದ್ದು ಕೃತಕವಾಗಿ ಸಿಗುತ್ತದೆ.

ಹಾಗೆಯೇ ನಾಟಿ ಕೋಳಿ ಮರಿಗಳಿಗೆ ಮೊದಲ ಅತ್ಯಗತ್ಯವಾದ ಮದ್ದು ಹೆಂಟೆಯ ಬೆವರಿನ ಮೂಲಕ ಮರಿಗಳಿಗೆ ಸಿಗುತ್ತದೆ. ತಾಯಿ ಹೆಂಟೆ ಸರಿಯಾಗಿ ಆರೋಗ್ಯದಿಂದಿದ್ದರೆ ತಾನೇ ಮರಿಗಳಿಗೆ ಸತ್ವಭರಿತ ಬೆವರಿನ ಆಹಾರ ಸಿಗೋದು. ಅದಕ್ಕಾಗಿ ಹೆಂಟೆ ಕಾವಿನಿಂದ ಏಳುವ ಸಮಯದಲ್ಲಿ ಅದಕ್ಕೆ ಸರಿಯಾದ ಆಹಾರ ಅಗತ್ಯವಾಗಿ ನೀಡಲೇಬೇಕು. ಮುಂದಿನ ಹಂತ ಎಂದರೆ ಫಾರಂಗಳಲ್ಲಿ ಮರಿಗಳಿಗೆ ಕೃತಕ ಶಾಖ ನೀಡುವುದು. ಇಲ್ಲಿ ನೆಲಕ್ಕೆ ಪೇಪರ್ ಅಥವಾ ಭತ್ತದ ಹೊಟ್ಟು ಅಥವಾ ತೆಂಗಿನ ನಾರಿನ ಹುಡಿಯನ್ನು ಹಾಕಿಯೇ ಮೊದಲ 6 ದಿನ ಮರಿಗಳಿಗೆ ಸರಿಯಾಗಿ ಶಾಖ ಸಿಗುವಂತೆ ಮಾಡುತ್ತಾರೆ. ಆದರೆ ನಾಟಿಕೋಳಿಗಳನ್ನು ಇಳಿಸಿದ ನಂತರ ನಾವು ಸಿಮೆಂಟ್ ಅಥವಾ ಮಣ್ಣಿನ ಕಾಲಿ ನೆಲದಲ್ಲಿ ಹೆಂಟೆ ಮತ್ತು ಮರಿಗಳನ್ನು ಬಿಡುತ್ತೇವೆ. ಇದು ದೊಡ್ಡ ತಪ್ಪು. ಯಾಕೆಂದರೆ ಹೆಂಟೆಯ ಶಾಖ ಮರಿಗಳಿಗೆ ಬೇಕಾದಷ್ಟು ಸಿಕ್ಕಿದರೂ ಕಾಲಿ ನೆಲದ ತೇವಾಂಶ ಅದನ್ನು ಝೀರೋ ಮಾಡುತ್ತದೆ.

ಬಕ್ಕಿನ ಗೋಣಿ ಕೋಳಿ ಅಡಿಗೆ ಹಾಕಿದರೂ ಹೆಂಟೆ ಕೋಳಿ ದೊಡ್ಡ ಪ್ರಮಾಣದಲ್ಲಿ ನೀರು ನೀರು ಹಿಕ್ಕೆ ಹಾಕಿ ಗೋಣಿಯನ್ನು ಹಾಳು ಮಾಡುವ ಕಾರಣ ನಾವು ಬರೇ ನೆಲದಲ್ಲಿ ಬಿಟ್ಟು ಬಿಡುತ್ತೇವೆ. ಹಾಗೆಯೇ ಬತ್ತದ ಹೊಟ್ಟು ಹಾಕಿದರೆ ಅದನ್ನು ಕೆದಕಿ ಅಲ್ಲಿಟ್ಟಿರುವ ನೀರು ಹಾಗೂ ಆಹಾರವನ್ನು ಹಾಳು ಮಾಡುವ ಕಾರಣ ಬರೇ ನೆಲದಲ್ಲಿ ಬಿಡುತ್ತೇವೆ. ಇದೂ ಕೂಡ ಸರಿಯಾದ ಶಾಖ ಸಿಗದೇ ಮರಿಗಳು ಸಾಯುವ ಒಂದು ಕಾರಣ. ಹಿಂದಿನ ಕಾಲದಲ್ಲಿ ಕೇವಲ ಅಕ್ಕಿಯ ಚೂರುಗಳಿಂದ (ನಿಂಗಲ್) ಮರಿಗಳನ್ನು ದೊಡ್ಡದು ಮಾಡುತ್ತಿದ್ದರು. ಈಗಿನ ಕಾಲದಲ್ಲಿ ಅದು ಕೂಡ ಮರಿಗಳಿಗೆ ಸಾಕಾಗುವುದಿಲ್ಲ. ಬೇರೆಯೇ ರೀತಿಯಲ್ಲಿ ಅದರ ಬೆಳವಣಿಗೆಗೆ ಬೇಕಾದ ಸತ್ವಭರಿತ ಆಹಾರವನ್ನು ಕೃತಕವಾಗಿಯೇ ನೀಡಬೇಕಾಗುತ್ತದೆ. ಇನ್ನೊಂದು ಮುಖ್ಯ ಕಾರಣ ಕೋಳಿ ಮರಿಗಳ ಆಯುಷ್ಯ. ಅದಕ್ಕೆ ಪರಿಹಾರ ಇಲ್ಲವೇ ಇಲ್ಲ. ಉಳಿದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದುವರೆದರೆ ಖಂಡಿತವಾಗಿಯೂ 75 ಶೇಕಡಾ ಮರಿಗಳನ್ನು ಉಳಿಸಿ ಬೆಳೆಸಬಹುದು..

Advertisement
ಬರಹ :
ಸತೀಶ್ ಡಿ ಶೆಟ್ಟಿ ನಡಿಗುತ್ತು

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಾನುವಾರುಗಳನ್ನು ಅರಣ್ಯದಲ್ಲಿ ಮೇವು | ಆದೇಶವನ್ನು ಹಿಂಪಡೆಯುವಂತೆ ರೈತರು ಒತ್ತಾಯ
July 28, 2025
10:30 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಅರಣ್ಯ ಇಲಾಖೆಯಿಂದ 11.50 ಕೋಟಿ ಸಸಿ ನೆಡುವ ಗುರಿ
July 28, 2025
10:23 PM
by: ದ ರೂರಲ್ ಮಿರರ್.ಕಾಂ
ರಾಮನ ಆದರ್ಶ ಸರ್ವಕಾಲಿಕ : ರಾಘವೇಶ್ವರ ಶ್ರೀ
July 28, 2025
8:34 PM
by: The Rural Mirror ಸುದ್ದಿಜಾಲ
ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು
July 28, 2025
8:24 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group