ಮನೆಯ ಸಮೃದ್ದಿ ಮತ್ತು ಸಾತ್ವಿಕತೆಗೆ ಕೆಲವು ಸಲಹೆಗಳು

October 30, 2023
4:46 PM

ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಅನೇಕ ಸಂಸ್ಕೃತಿ, ರೀತಿ-ನೀತಿಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಅದಕ್ಕೆ ಅದರದೇ ಆದ ಕಾರಣಗಳು ಇದೆ. ಆದರೆ ಕಾಲ ಬದಲಾದಂತೆ ಅವುಗಳನ್ನು ನಮ್ಮ ಯುವ ಪೀಳಿಗೆ ಮರೆಯುತ್ತಾ ಬಂದಿದೆ. ಆದರೆ ಅದನ್ನು ಈಗಿನ ಜನ ಆಚರಿಸಬೇಕು.. ಸುಖ ಶಾಂತಿ ನೆಮ್ಮದಿ ನೆಲಸಲು ಇವುಗಳು ಬಹಳ ಅವಶ್ಯ ಅನ್ನೋದು ಹಿರಿಯರ ಅಭಿಪ್ರಾಯ. ಅವುಗಳಲ್ಲಿ ಒಂದಷ್ಟು ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

Advertisement
Advertisement
Advertisement
Advertisement
  • ಒಡೆದಿರುವ ಅಥವಾ ಬಿರುಕು ಬಿಟ್ಟಿರುವ ಕನ್ನಡಿ ಇಡಬೇಡಿ. ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.
  • ಮನೆಯ ಯಾವುದೇ ಸ್ಥಳದ ನಲ್ಲಿಯಲ್ಲಿ ನೀರು ನಿರಂತರ ಸೋರುವಿಕೆ ಇರಬಾರದು,  ಅದರಿಂದ ಹಣ ವ್ಯಯ ಸಂಭವ.
  • ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ ; ಇದರಿಂದ ಮನಸ್ಸನಲ್ಲಿ ಖಿನ್ನತೆ ಉಂಟಾಗುವ ಸಂಭವ.
  • ಸಾಧ್ಯವಾದಷ್ಟು ದೇವರಿಗೆ ಮನೆಯ ಹೂವುಗಳನ್ನೇ ಅರ್ಪಿಸಲು ಪ್ರಯತ್ನ ಮಾಡಿ.
  • ಹೊರಗಡೆಯಿಂದ ತಂದ ಹೂವಿಗೆ ಮನೆಯ ನೀರನ್ನು ಸಿಂಪಡಿಸಬೇಕು. ಶುದ್ಧ ಮಾಡಿ ನಂತರ ಉಪಯೋಗಿಸಬೇಕು. ಇಲ್ಲದಿದ್ದರೆ ಮನೆಯ ಅಡುಗೆ ಸಾಮಗ್ರಿ ಹಾಳಾಗುವ ಸಂಭವ.
  • ನಿಂತ ಗಡಿಯಾರವು ಅಶುಭ ಲಕ್ಷಣ.ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ
  • ದೇವರ ಕೋಣೆಯ ಮೇಲೆ ಅತಿಯಾದ ಭಾರವನ್ನು ಇಡಬಾರದು.ಒಡೆದುಹೋದ ದೇವರ ಮೂರ್ತಿ ಅಥವಾ ಫೋಟೋಗಳನ್ನು ಇಡಬೇಡಿ.
  • ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ-ತಾಯಿಯರಿಗೆ ಕಾಲುಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ.
  • ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು.ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ
  • ದೇವರ ಕೋಣೆಯಲ್ಲಿ ಒಂಟಿ ದೀಪ ಉರಿಸಬಾರದು. ಸಣ್ಣ ದೀಪವಾದರೂ ಅಡ್ಡಿ ಇಲ್ಲ, ಎರಡು ದೀಪಗಳನ್ನು ಇಡಿ.
  • ಚಾಪೆ ಬಳಸುತ್ತಿದ್ದರೆ ಮುಗುಚಿ ಹಾಕಬಾರದು. ಸಂಜೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು.
  • ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿಟ್ಟು ತೆಗೆದುಕೊಳ್ಳುವುದು. ಇದರಿಂದ ವಸ್ತುವಿನಲ್ಲಿ ಇದ್ದ ಕಲಿ ದೋಷ ದೂರವಾಗುವುದು.
  • ಕುಲದೇವರಿಗೆ ;ಇಷ್ಟ ದೇವರಿಗೆ; ಗ್ರಾಮ ದೇವರಿಗೆ ಮನೆಯ ಎಲ್ಲ ಶುಭಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಢಿ ಮಾಡಿ.
  • ಜೇಡರಬಲೆ ಮನೆಯಲ್ಲಿ ಕಟ್ಟಿದ್ದರೆ ತಕ್ಷಣ ನಿವಾರಿಸಿ- ಅದು ಅಶುಭ ತರುವ ಸಂಕೇತ.
  • ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ದೈವಿಕ ಕಳೆ ವೃದ್ಧಿಸುವುದು
  • ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆ ಮಾಡಿದರೆ – ಅದು ಕಷ್ಟಗಳು ಎದುರಾಗುವ ಸಂಕೇತ. ಅವುಗಳ ಪ್ರಾಣ ಹಾನಿ ಆಗದಂತೆ ಅಲ್ಲಿಂದ ಓಡಿಸಬೇಕು.
  • ಜೇನಿನ ಗೂಡು ಮನೆಯಲ್ಲಿ ಕಟ್ಟಬಾರದು. ಸಾಧ್ಯವಾದಷ್ಟು ಮನೆಯೊಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ.
  • ಬಾವುಲಿಗಳು ಮನೆಯ ಸರಹದ್ದಿನಲ್ಲಿ ವಾಸ ಮಾಡದಂತೆ ಎಚ್ಚರವಹಿಸಿ
  • ಹಿರಿಯರು ನಂಬಿಕೊಂಡು ಬಂದ ದೈವಗಳಿಗೆ; ಅವರದೇ ಆದ ಸಂಪ್ರದಾಯಗಳಿಗೆ ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ.
  • ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು . ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು
  • ಬರೀ ನೆಲದಲ್ಲಿ ಮಲಗುವುದಾಗಲಿ ಹರಿದ ವಸ್ತ್ರಗಳನ್ನು ಧರಿಸುವುದು ಮಾಡಬೇಡಿ.
  • ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿಮಾಡಿ.
  • ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ವಿಷ್ಣು ಸಹಸ್ರನಾಮ ಅಥವಾ ನಿಮ್ಮ ಇಷ್ಟದೇವರ ಯಾವುದೇ ಸ್ತೋತ್ರ ಮಂತ್ರ (ಭಜನೆ) ಪಠಿಸಿ ಅಥವಾ ಅದನ್ನು ಮನೆಯಲ್ಲಿ ಕೇಳುವಂತೆ ನಿತ್ಯ ವ್ಯವಸ್ಥೆ ಮಾಡಿ. ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ವೃದ್ಧಿಯಾಗುತ್ತದೆ
  • ಆಗ್ನೇಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು
  •  ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅನ್ನಾದರೂ ಇಡಬೇಕು. ಅಡುಗೆ ಮನೆಯಲ್ಲಿ ಔಷಧಗಳನ್ನ ಇಡಬೇಡಿ. ನೆಗಟಿವ್ ಎನರ್ಜಿ ವಕ್ಕರಿಸುವ ಅಪಾಯವಿರುತ್ತದೆ.
  • ಆಹಾರ ಸೇವಿಸಿದ ನಂತರ ಎಂಜಲು ಮುಸುರೆ ಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೆ ಇಡಬೇಡಿ
  • ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ, ಒಂದು ವೇಳೆ, ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನ ದೂರ ಇಡಿ. ರಾತ್ರಿಹೊತ್ತಿನಲ್ಲಿ ಕನ್ನಡಿ ನೋಡುವುದು ಅಷ್ಟು ಸಮಂಜಸವಲ್ಲ
  • ವರ್ಷಕ್ಕೆ ಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ ಉತ್ತಮ. ಇದರಿಂದ ವಾಸ್ತು ಸದೃಢವಾಗಿರುತ್ತದೆ
  • ವರ್ಷಕ್ಕೆ ಒಮ್ಮೆಯಾದರೂ ಸಮಾಜದ (ಕುಟುಂಬದ) ಗುರುಪೀಠದ ಫಲಮಂತ್ರಾಕ್ಷತೆಯನ್ನು ತರುವುದು.
  • ಮನೆಯ ಹಾಲ್ ನಲ್ಲಿ ಅಕ್ವೇರಿಯಂ ಇದ್ದರೆ, ಆಗ್ನೇಯ(ಸೌಥ್ ಈಸ್ಟ್) ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಒಳ್ಳೆಯದು
  • ಸ್ನಾನವಿಲ್ಲದೆ ಊಟ ಮಾಡುವುದು ಒಳ್ಳೆಯದಲ್ಲ. ಅನ್ನವು ದೇವರಿಗೆ ಸಮಾನ.
  • ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ.ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ.
  • ಹಣದಿಂದ ನಾವು ಏನೆಲ್ಲ ಕೊಂಡು ಕೊಳ್ಳಬಹುದು ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನಲ್ಲ . ಅದು ಸಿಗಬೇಕು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯ ಗಳನ್ನು ಆಚರಿಸಿದಾಗ ಮಾತ್ರ ಸಾಧ್ಯ.

(Source : ಡಿಜಿಟಲ್‌ ಮಾಧ್ಯಮ/ಅಂತರ್ಜಾಲ )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror