ಪ್ರಮುಖ

ಚಿತ್ರರಸಿಕರ ಮನಗೆದ್ದ ಇನಾಮ್ದಾರ್ ಚಿತ್ರದ ‘ಚೆಂದಾನೆ ಚೆಂದ’ ಗೀತೆ | ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ | ಅಕುಲ್ ಅಭಯಂಕರ್ ಸಂಗೀತ

Share

ಇನಾಮ್ದಾರ್ ಚಿತ್ರದ ಟ್ರೈಲರ್ ಹಾಗೂ ಸಿಲ್ಕ್- ಮಿಲ್ಕು ಸಾಂಗ್ ಈಗಾಗಲೆ ರಾಜ್ಯಾದ್ಯಂತ ಪ್ರೇಕ್ಷಕರ ಮನಗೆದ್ದಿದ್ದೆ. ಚಂದನವನದಲ್ಲಿ ಇನಾಮ್ದಾರ್ (Inamdar) ಹವಾ ಹೇಗಿದೆ ಎಂಬುದು ನಿಮಗೀಗಾಗಲೇ ಗೊತ್ತಿದೆ. ಸೆಟ್ಟೇರಿದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಾ, ಸಿನಿದುನಿಯಾದಲ್ಲಿ ಸದ್ದು ಮಾಡುತ್ತಿರುವ ಸಂದೇಶ್ ಶೆಟ್ಟಿ ಆಜ್ರಿ  (Sandesh Shetty Aj) ನಿರ್ದೇಶನದ ಇನಾಮ್ದಾರ್ ಚಿತ್ರವೀಗ ‘ ಚೆಂದಾನೇ ಚೆಂದ’ ಹಾಡಿನ (Song) ಮೂಲಕ ಚಿತ್ರಪ್ರೇಮಿಗಳ ಮನಸೂರೆಗೊಳ್ಳುತ್ತಿದೆ. ವಿಶೇಷ ಅಂದರೆ ವೀರ ಬಾಲು (Veera Balu) ( ರಂಜನ್ ಛತ್ರಪತಿ)  ಹಾಗೂ ಭುವಿ (ಚಿರಶ್ರೀ ಅಂಚನ್) ಜೋಡಿ ಕಾಂತಾರ ಚಿತ್ರದ ಶಿವಲೀಲಾರನ್ನ ನೆನಪಿಸುವಂತೆ ಮಾಡಿದೆ.

Advertisement

ಇಂಟ್ರೆಸ್ಟಿಂಗ್ ಅಂದರೆ  ‘ಸಿಂಗಾರ ಸಿರಿಯೇ’ ಸಾಂಗ್ ರಚಿಸಿ ಶಿವಲೀಲಾ ಜೋಡಿನಾ ಒಂದು ಮಾಡಿದ್ದ ಖ್ಯಾತ ಲಿರಿಸಿಸ್ಟ್ ಪ್ರಮೋದ್ ಮರವಂತೆ, ರಂಜನ್ ಹಾಗೂ ಚಿರಶ್ರೀ ಜೋಡಿಗೆ ‘ ಚೆಂದಾನೇ ಚೆಂದ’ ಹಾಡು ಕಟ್ಟಿದ್ದಾರೆ. ‘ ಜೀವಕ್ಕೆ ಜೀವ ಒಂದಾದ ಭಾವ…ಪ್ರೀತಿಯ ನೀಡೋ ಜೀವಾನೇ ದೈವ’ ಎಂದು ಸಾಗುವ ಈ ಸೊಗಸಾದ ಗೀತೆಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ.

ರಮ್ಯಾ ಭಟ್ ಜೊತೆ ಸೇರಿ ಕಂಠ ಕುಣಿಸಿ ಕಲಾರಸಿಕರ ಹೃದಯ ತಟ್ಟುವಂತೆ ಮಾಡಿದ್ದಾರೆ. ನಿನ್ನೆಯಷ್ಟೇ ಕುಂದಾನಗರಿಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ಈ ಸುಮಧುರ ಸಾಂಗ್, ಬೆಳಗಾವಿಯ ಕುಂದಾದಷ್ಟೇ ರುಚಿ ಎನಿಸಿದೆ. ಕಿವಿಗೆ ಅಷ್ಟೇ ಹಿತವಾಗಿ, ಕಣ್ಣಿಗೆ ಹಬ್ಬದಷ್ಟೇ ಮುದ ನೀಡಿದೆ.

ಇನ್ನೂ ‘ಚೆಂದಾನೇ ಚೆಂದ’ ಗೀತೆ ಇಷ್ಟೊಂದು ಅಂದವಾಗಿ ಕಾಣುವುದಕ್ಕೆ ಎನ್ ಮುರುಳೀಧರ್ ಕ್ಯಾಮರಾ ಕೈಚಳಕವೂ ಕೂಡ ಕಾರಣವಾಗಿದೆ.ಗೀತಾ ಸಾಯಿ ನೃತ್ಯ ಸಂಯೋಜನೆ ಈ ಹಾಡಿಗಿದ್ದು ನ್ಯಾಚುರಲ್ ಆಗಿ ಮೂಡಿಬಂದಿದೆ. ಈ ಹಿಂದೆ ‘ ಸಿಲ್ಕು ಮಿಲ್ಕು’ ಹಾಡಿನ ಮೂಲಕ ಪಡ್ಡೆಹೈಕ್ಳ ಮೈ ಚಳಿ ಬಿಡಿಸಿದ್ದ ಇನಾಮ್ದಾರ್ ಚಿತ್ರ ಇದೀಗ ‘ ಚೆಂದಾನೇ ಚೆಂದ’ ಸಾಂಗ್ ಮೂಲಕ ಸಮಸ್ತ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ಚಿತ್ರದಲ್ಲಿ ನಟಿ ಚಿರಶ್ರೀ ಅಂಚನ್ ಕರಾವಳಿ ಸೀಮೆಯ ಬುಡಕಟ್ಟು ಜನಾಂಗದ ಹೆಣ್ಣುಮಗಳಾಗಿ ಮಿಂಚಿದರೆ, ಉತ್ತರ ಕರ್ನಾಟಕದ ಪ್ರತಿಭೆ ರಂಜನ್ ಛತ್ರಪತಿ ‘ ಇನಾಮ್ದಾರ್’ ಕುಟುಂಬದ ಮಗನ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಅವಿನಾಶ್, ಶರತ್ ಲೋಹಿತಾಶ್ವ, ಥ್ರಿಲ್ಲರ್ ಮಂಜು, ಎಂ.ಕೆ. ಮಠ, ಪ್ರಮೋದ್ ಶೆಟ್ಟಿ, ಸಂದೇಶ್ ಶೆಟ್ಟಿ ಆಜ್ರಿ, ಪ್ರಶಾಂತ್ ಸಿದ್ದಿ, ಎಸ್ತರ್ ನರೋನ್ಹಾ ಸೇರಿದಂತೆ ಹಲವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಕಪ್ಪು ಸುಂದರಿಯ ಸುತ್ತ ಎನ್ನುವ ಟ್ಯಾಗ್ ಲೈನ್ ಹೊತ್ತು ಬರುತ್ತಿರುವ ‘ ಇನಾಮ್ದಾರ್’ ಚಿತ್ರ,  ಶಿವಾಜಿ ಆರಾಧಕರು ಮತ್ತು ಶಿವನ ಆರಾಧಕರ ನಡುವೆ ಹೊತ್ತಿಕೊಳ್ಳುವ ವರ್ಣ ಸಂಘರ್ಷದ ಕಥನವನ್ನೊಳಗೊಂಡಿದೆ. ಈಗಾಗಲೇ ಹೊರಬಿದ್ದಿರುವ ಟೀಸರ್, ಟ್ರೇಲರ್, ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ನಿರಂಜನ್ ಶೆಟ್ಟಿ ತಲ್ಲೂರ್ ಬಂಡವಾಳದಲ್ಲಿ  ತಸ್ಮೈ ಪ್ರೊಡಕ್ಷನ್ ಅಂಡ್ ಶ್ರೀ ಕುಂತಿಯಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದೆ. ಇದೇ ಅಕ್ಟೋಬರ್ 27 ರಂದು ಇನಾಮ್ದಾರ್ ಚಿತ್ರ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.

– ಅಂತರ್ಜಾಲ ಮಾಹಿತಿ

Ever since it was set, it has been in the news for one reason or another, and the song 'Chendane Chenda' from Inamdar directed by Sandesh Shetty Ajri, which is buzzing in Cinidunia, is pleasing the movie lovers. Specially, the pairing of Veera Balu (Ranjan Chhatrapati) and Bhuvi (Chirasree Anchan) is reminiscent of Shivleela from Kantara.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ |

ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ…

6 minutes ago

ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ | ಆಧುನಿಕ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿರುವ ಪಂಬನ್‌ ಸೇತುವೆ |

ದಕ್ಷಿಣ ರೈಲ್ವೆಯು ರೈಲು ವಿಕಾಸ ನಿಗಮ ಸಹಯೋಗದೊಂದಿಗೆ 531 ಕೋಟಿ ರೂಪಾಯಿ ವೆಚ್ಚದಲ್ಲಿ…

12 minutes ago

ಅಡುಗೆ ಗ್ಯಾಸ್ ಬೆಲೆ‌ ಸಿಲಿಂಡರ್‌ಗೆ 50 ರೂ. ಹೆಚ್ಚಳ

ಅಡುಗೆ ಅನಿಲ ಅಥವಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50…

3 hours ago

ಹವಾಮಾನ ವರದಿ | 07-04-2025 | ಕೆಲವೆಡೆ ಇಂದೂ ಮಳೆ ನಿರೀಕ್ಷೆ | ಎ.9 ರಿಂದ ಅಲ್ಲಲ್ಲಿ ಸಾಧಾರಣ ಮಳೆಯ ಸಾಧ್ಯತೆ |

ಇಂದು ಕೆಲವು ಕಡೆ ಮಳೆ ನಿರೀಕ್ಷೆ ಇದೆ. ಈಗಿನಂತೆ ರಾಜ್ಯದ ಎಪ್ರಿಲ್ 9ರಿಂದ…

8 hours ago

ಜೇನು ಹುಳಗಳ ಸಂಖ್ಯೆ ಗಣನೀಯ ಇಳಿಕೆ | ಜೇನು ಕುಟುಂಬ ಉಳಿಸುವ ಅಭಿಯಾನ |

ವಿಶ್ವದ ಪ್ರಮುಖವಾದ 107 ಬೆಳೆಗಳಲ್ಲಿ ಸುಮಾರು 70% ಗೆ ಬೆಳೆಗಳು ಜೇನುನೊಣಗಳಂತಹ ಪರಿಸರ…

9 hours ago

ಹುಲಿಸಂರಕ್ಷಿತ ಪ್ರದೇಶಲ್ಲಿ ರಾತ್ರಿ ಸಂಚಾರ ನಿಷೇಧ | ನಿಷೇಧ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ

ಬಂಡಿಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ  ತೆರವುಗೊಳಿಸಬಾರದು ಎಂದು…

15 hours ago