ಗುತ್ತಿಗಾರಿನಲ್ಲಿ ನಾಡಗೀತೆ ಗಾಯನ ಸ್ಫರ್ಧೆ | ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಕನ್ನಡ ಬೆಳೆಸೋಣ – ಚಂದ್ರಶೇಖರ ಪೇರಾಲು |

January 5, 2024
6:57 PM

ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡುವ ಮೂಲಕ ಕನ್ನಡವನ್ನು ಉಳಿಸುವ, ಬೆಳೆಸುವ ಕಾರ್ಯ ಆಗಬೇಕಿದೆ. ಕನ್ನಡವನ್ನು ಪ್ರೀತಿಸಿ, ಉಳಿಸಿ, ಬೆಳೆಸಬೇಕು ಎಂದು ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್  ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲು  ಹೇಳಿದರು.

Advertisement
Advertisement
Advertisement
Advertisement

ಅವರು ಗುತ್ತಿಗಾರಿನ ಬೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೈಂ ಟ್ ಮೇರಿಸ್ ಚರ್ಚ್ ಗುತ್ತಿಗಾರು ಹಾಗೂ ಬೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆ,ಕೆ.ಎಸ್.ಎಂ.ಸಿ.ಎ. ಗುತ್ತಿಗಾರು ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ “ಕರ್ನಾಟಕ ಸಂಭ್ರಮ ೫೦’ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಹಾಗೂ ಬೆಳ್ತಂಗಡಿ ಧರ್ಮ ಪ್ರಾಂತ್ಯದ ರಜತ ಮಹೋತ್ಸವ ಪ್ರಯುಕ್ತ ಸುಳ್ಯ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಕನ್ನಡ ನಾಡ ಗೀತೆ  ಗಾಯನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಸಭಾಧ್ಯಕ್ಷತೆ ವಹಿಸಿದ ಸೈಂಟ್ ಮೇರಿಸ್ ಚರ್ಚ್ ನ ಧರ್ಮ ಗುರುಗಳಾದ ಫಾದರ್ ಆದರ್ಶ ಜೋಸೆಫ್ ಮಾತನಾಡಿ, ಕನ್ನಡ ನಾಡಿನ ಸೌಂದರ್ಯ,ಕನ್ನಡ ಭಾಷೆಯ ಸೊಬಗು, ಕರ್ನಾಟಕದ ವೈಶಿಷ್ಟ್ಯತೆಯ ಬಗ್ಗೆ ವಿವರಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.

ಮುಖ್ಯಅತಿಥಿಯಾಗಿ ಆಗಮಿಸಿದ ಎಸ್.ಎಸ್.ಪಿ. ಯು ಕಾಲೇಜು ಸುಬ್ರಹ್ಮಣ್ಯದ ಕನ್ನಡ ಮತ್ತು ಸಂಸ್ಕೃತ ಉಪನ್ಯಾಸಕ ರಘು. ಬಿಜೂರ್ ಕನ್ನಡ ಭಾಷೆ ಬೆಳೆದು ಬಂದ ರೀತಿಯ ಬಗ್ಗೆ ಮಾತನಾಡಿದರು.

Advertisement

ಅತಿಥಿಯಾಗಿ ಆಗಮಿಸಿದ ರೂರಲ್ ಮಿರರ್ ಡಿಜಿಟಲ್ ಮೀಡಿಯಾದ ಮುಖ್ಯಸ್ಥ ಮಹೇಶ್ ಪುಚ್ಚಪ್ಪಾಡಿ ಮಾತಾಡಿ ಎಲ್ಲಾ ಭಾಷೆಯನ್ನು ಪ್ರೀತಿಸಿ, ನಮ್ಮ ಸಂಸ್ಕೃತಿ ಭಾಷೆಯಾಗಿ ಕನ್ನಡವನ್ನು ಉಳಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಸೈಂಟ್ ಮೇರಿಸ್ ಚರ್ಚ್ ನ ಟ್ರಸ್ಟಿಗಳಾದ  ಟಿಜಿ ಪಿಎಫ್. ಮತ್ತು , ಸೈಜು , ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ  ಲಿಜೋ ಜೋಸ್  ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮದಲ್ಲಿ ಕೆ ಎಸ್.ಎಂ.ಸಿ.ಎ. ಬೆಳ್ತಂಗಡಿ ಧರ್ಮ ಪ್ರಾಂತ್ಯದ ಅಧ್ಯಕ್ಷ ಬಿಟ್ಟಿ ನೆಡುನಿಲಂ ಸ್ವಾಗತಿಸಿ, ಬೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢಾಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಟೀಸಾ ಜಾನ್ ವಂದಿಸಿದರು. ಪ್ರೌಢ ಶಾಲಾ ವಿಭಾಗದ ಕನ್ನಡ ಶಿಕ್ಷಕಿ ಶಾಂತಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ನಾಡುಗೀತೆ ಗಾಯನ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಹದಿನೈದು ಸಾವಿರ ರೂಪಾಯಿ ನಗದು ಬಹುಮಾನ ,ವ್ಯಯಕ್ತಿಕ ಟ್ರೋಫಿ ,ಸ್ಮರಣಿಕೆಯನ್ನು ಕೆ.ಪಿ.ಯಸ್ ಬೆಳ್ಳಾರೆ ಪಡೆದುಕೊಂಡಿತು. ದ್ವಿತೀಯ ಬಹುಮಾನ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ,ವೈಯಕ್ತಿಕ ಟ್ರೋಫಿ, ಸ್ಮರಣಿಕೆ, ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರು ಹಾಗೂ
ತೃತೀಯಾ ಬಹುಮಾನವನ್ನು ಸರಕಾರಿ ಪ್ರೌಢ ಶಾಲೆ ಮರ್ಕಂಜ ಏಳು ಸಾವಿರ ರೂಪಾಯಿ ನಗದು ಬಹುಮಾನ, ವೈಯಕ್ತಿಕ ಟ್ರೋಪಿ ,ಸ್ಮರಣಿಕೆಯನ್ನು ಪಡೆದುಕೊಂದಿದೆ. ತಾಲೂಕಿನ ಹನ್ನೊಂದು ಶಾಲೆಗಳಿಂದ 110 ವಿದ್ಯಾರ್ಥಿಗಳು ಭಾಗವಹಿಸಿದ್ದರು .

Advertisement

Saint Mary’s Church Guthigar and Blessed Kuriakose English Medium School, K.S.M.C.A. conducted Kannada Nadageete song singing competition.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror