ಪ್ಲಾಸ್ಟಿಕ್‌ ಮುಕ್ತ ಗ್ರಾಮಕ್ಕೆ ವಿಶೇಷ ಅಭಿಯಾನ |1 ಕೆಜಿ ಪ್ಲಾಸ್ಟಿಕ್‌ ತಂದು ಕೊಟ್ಟರೆ 1 ಕೆಜಿ ಸಕ್ಕರೆ..!

September 5, 2024
8:07 PM
ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಗ್ರಾಮಸ್ಥರು ಒಂದು ಕೆ,ಜಿ. ಪ್ಲಾಸ್ಟಿಕ್ ಅನ್ನು ಪಂಚಾಯತಿಗೆ ತಂದು ಕೊಟ್ಟರೆ ಅಂತವರಿಗೆ ಪರ್ಯಾಯವಾಗಿ ಒಂದು ಕೆ.ಜಿ. ಸಕ್ಕರೆ ನೀಡುವ ವಿಶೇಷ ಅಭಿಯಾನದ ಬಗ್ಗೆ ಇಲ್ಲಿದೆ..

ದೇಶದೆಲ್ಲೆಡೆ ಸ್ವಚ್ಛ ಭಾರತ್‌ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಂತೆ ಪ್ರತೀ ಊರುಗಳೂ ಸ್ವಚ್ಛವಾಗಬೇಕು. ಅದರ ಜೊತೆಗೇ ಪ್ಲಾಸ್ಟಿಕ್‌ ಮುಕ್ತವಾಗಬೇಕು. ಇದಕ್ಕಾಗಿ ವಿವಿಧ ಕಡೆ ವಿವಿಧ ಯೋಜನೆಗಳನ್ನು ಮಾಡಿ, ಸ್ವಚ್ಛ ಗ್ರಾಮ ಅಭಿಯಾನ ನಡೆಯುತ್ತಿದೆ. ಇಲ್ಲೊಂದು ಗ್ರಾಮದಲ್ಲಿ ಸ್ವಚ್ಛ ಗ್ರಾಮ ಮಾತ್ರವಲ್ಲ ಪ್ಲಾಸ್ಟಿಕ್‌ ಮುಕ್ತ ಗ್ರಾಮವಾಗಿಸಲು ವಿಶೇಷ ಯೋಜನೆಯನ್ನು ರೂಪಿಸಿದ್ದಾರೆ. ಒಂದು ಕೆ ಜಿ ಪ್ಲಾಸ್ಟಿಕ್‌ ಹೆಕ್ಕಿ ತಂದು ಪಂಚಾಯತ್‌ ಗೆ ನೀಡಿದರೆ ಒಂದು ಕೆಜಿ ಸಕ್ಕರೆ ನೀಡುವ ಯೋಜನೆಯನ್ನು ಮಾಡಲಾಗಿದೆ. ಇದೀಗ ಬಹುತೇಕ ಯಶಸ್ವಿಯೂ ಆಗಿದೆ.…..ಮುಂದೆ ಓದಿ….

Advertisement
Advertisement
Advertisement

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಿವಿಧ ಗ್ರಾಮ ಪ೦ಚಾಯತ್ ಗಳಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಯೋಜನೆಯ ಪರಿಕಲ್ಪನೆಯಂತೆ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಇಲ್ಲಿ  ವಿಶೇಷವೆಂದರೆ ಗ್ರಾಮಸ್ಥರು ಒಂದು ಕೆ.ಜಿ. ಪ್ಲಾಸ್ಟಿಕ್ ಹೆಕ್ಕಿ ತಂದು ಪಂಚಾಯತ್‌ ಗೆ ಕೊಟ್ಟರೆ ಅದಕ್ಕೆ ಪ್ರತಿಯಾಗಿ ಒಂದು ಕೆ.ಜಿ. ಸಕ್ಕರೆ ವಿತರಿಸಲಾಗುತ್ತಿದೆ. ಆಳಂದ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರ ವಿನೂತನ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗೇ ವಿವಿಧ ಯೋಜನೆಗಳನ್ನು ಅವರು ರೂಪಿಸಿದ್ದಾರೆ. ಒಟ್ಟಿನಲ್ಲಿ ಪ್ಲಾಸ್ಟಿಕ್‌ ಮುಕ್ತವಾಗಲು ಜನರ ಸಹಭಾಗಿತ್ವ ಅಗತ್ಯ ಎನ್ನುವುದನ್ನು ಅವರು ಹೇಳುತ್ತಾರೆ. ಆರಂಭದಲ್ಲಿ ಪ್ಲಾಸ್ಟಿಕ್‌ ಹೆಕ್ಕುವ ಅಭ್ಯಾಸ ಜನರಿಗೆ ಆದ ನಂತರ ಪ್ಲಾಸ್ಟಿಕ್‌ ಎಸೆಯದಂತೆ ಜಾಗೃತಿ ಮೂಡಿಸುವ ಕೆಲಸವೂ ಜೊತೆಗೇ ಇದೆ ಎನ್ನುತ್ತಾರೆ ಮಾನಪ್ಪ ಕಟ್ಟಿಮನಿ.

Advertisement

ಈ ಅಭಿಯಾನದ ಬಗ್ಗೆ ಗ್ರಾಮಸ್ಥರೂ ಖುಷಿಯಿಂದ ಸಹಕರಿಸುತ್ತಿದ್ದಾರೆ, ತಡಕಲ ಗ್ರಾಮದ ಅನೀಲ್ ಜಮಾದಾರ ಅವರು ಹೇಳುವ ಪ್ರಕಾರ, ” ಗ್ರಾಮ ಸ್ವಚ್ಚತೆಗೆ ಸಂಕಲ್ಪ ಮಾಡಲಾಗಿದ್ದು, ಪ್ಲಾಸ್ಟಿಕ್ ವಿಲೇವಾರಿಗೆ ಕ್ರಮವಹಿಸಲಾಗುತ್ತಿದೆ. ಇದರಿಂದ ಜಾನುವಾರುಗಳು ಪ್ಲಾಸ್ಟಿಕ್ ತಿಂದು ಅಸ್ವಸ್ಥವಾಗುವ ಸಾಧ್ಯತೆಯನ್ನೂ ತಪ್ಪಿಸಿದಂತಾಗುವುದು” ಎನ್ನುತ್ತಾರೆ.

Advertisement

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಮಲ್ಲಿಕಾರ್ಜುನ ಅವರು ಹೇಳುವಂತೆ, ಅಭಿಯಾನಕ್ಕೆ ಜನರ ಸಹಕಾರ ಇದೆ. ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಅಭಿಯಾನದ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗೆ ಪಣ ತೊಟ್ಟಿದ್ದು, ಪ್ಲಾಸ್ಟಿಕ್ ಮುಕ್ತ ಗ್ರಾಮ ನಿರ್ಮಾಣದ ಹೆಜ್ಜೆ ಯಶಸ್ವಿಯಾಗುತ್ತಿದೆ ಎನ್ನುತ್ತಾರೆ.

Advertisement

ಆಳಂದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು ಸತತವಾಗಿ ತಾಲೂಕಿನಲ್ಲಿರುವ 42 ಗ್ರಾಮ ಪಂಚಾಯತ್ ಗಳಲ್ಲಿ ಇಂತದ್ದೊಂದು ಮಹತ್ವದ ಅಭಿಯಾನವನ್ನು ಕಳೆದ ಒಂದೂವರೆ ತಿಂಗಳಿನಿಂದ ನಡೆಸುವ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಕಾಳಜಿಯಿಂದ ನಡೆಸುತ್ತಿರುವ ಈ ಯೋಜನೆಗೆ  ಆರಂಭದಲ್ಲಿ ಜನರ ಸಹಭಾಗಿತ್ವವೂ ಇರಲು,  ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಗ್ರಾಮಸ್ಥರು ಒಂದು ಕೆ,ಜಿ. ಪ್ಲಾಸ್ಟಿಕ್ ಅನ್ನು ಪಂಚಾಯತಿಗೆ ತಂದು ಕೊಟ್ಟರೆ ಅಂತವರಿಗೆ ಪರ್ಯಾಯವಾಗಿ ಒಂದು ಕೆ.ಜಿ. ಸಕ್ಕರೆ ನೀಡುವ ಸಂಕಲ್ಪ ಕೈಗೊಂಡಿದ್ದರು. ಮುಂದೆ ಒಂದು ಕೆ.ಜಿ. ಪ್ಲಾಸ್ಟಿಕ್ ಗೆ ಅರ್ಧ ಕೆ.ಜಿ. ಅಡುಗೆ ಎಣ್ಣೆಯನ್ನೂ ನೀಡುವ ಬಗ್ಗೆಯೂ ಯೋಜಿಸಲಾಗಿದೆ ಎನ್ನುತ್ತಾರೆ.

ಒಟ್ಟಿನಲ್ಲಿ ಪ್ಲಾಸ್ಟಿಕ್‌ ಮುಕ್ತ ಗ್ರಾಮ, ಸ್ವಚ್ಛ ಗ್ರಾಮವನ್ನಾಗಿಸಲು ರಾಜ್ಯದ ಹಲವು ಕಡೆ ಬೇರೆ ಬೇರೆ ಪ್ರಯತ್ನ ನಡೆಯುತ್ತಿದೆ. ಇದೊಂದು ಹೊಸ ಪ್ರಯೋಗವು ಜನರ ಸಹಭಾಗಿತ್ವಕ್ಕೂ ಕಾರಣವಾಗಿದೆ. ಜನರ ಸಹಭಾಗಿತ್ವ ಇದ್ದರೆ ಎಲ್ಲಾ ಯೋಜನೆಗಳು ಯಶಸ್ವಿಯಾಗುವುದರಲ್ಲಿ ಸಂದೇಶಹವಿಲ್ಲ.

Advertisement

The Plastic-Free Village campaign has been initiated in several village panchayats in Aland taluk of Kalaburgi district. This campaign is in alignment with the Swachh Bharat Yojana introduced by the Central Government. A unique aspect of this campaign is that villagers are encouraged to bring one kilogram of plastic to the panchayat, and in return, they receive one kilogram of sugar. This innovative initiative led by the Executive Officer of Alanda Taluk, Manappa Kattimani, has garnered positive feedback and participation from the community.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror