ಬೃಹತ್‌ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ವಶಕ್ಕೆ ಪಡೆದ ತನಿಖಾ ತಂಡ |

June 10, 2024
11:32 PM
ಅಡಿಕೆ ಕಳ್ಳಸಾಗಾಣಿಕೆ ಪ್ರಕರಣದ ತನಿಖೆ ನಡೆಯುತ್ತಿದೆ. ಈಚೆಗೆ ವಿದೇಶದಿಂದ ಬೃಹತ್‌ ಪ್ರಮಾಣದಲ್ಲಿ ಅಡಿಕೆ ಆಮದಾಗಿತ್ತು.

ಅಕ್ರಮವಾಗಿ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿ ಆಮದು-ರಫ್ತು ಲೈಸನ್ಸ್‌ ಹೊಂದಿರುವ ಸಂಸ್ಥೆಯ ನಿರ್ದೇಶಕರೊಬ್ಬರನ್ನು ತನಿಖಾ ತಂಡವು ವಶಕ್ಕೆ ತೆಗೆದುಕೊಂಡಿದೆ. ಕಳೆದ ಹಲವು ಸಮಯಗಳಿಂದ ತಪ್ಪು ಮಾಹಿತಿ ನೀಡಿ ಅಡಿಕೆ ಆಮದು ನಡೆಯುತ್ತಿತ್ತು. ಈಚೆಗೆ ಕಸ್ಟಮ್ಸ್‌ನ ಗುಪ್ತಚರ ಮತ್ತು ತನಿಖಾ ದಳವು 9.65 ಕೋಟಿ ರೂಪಾಯಿಯ 189.6 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆಯನ್ನು ವಶಪಡಿಸಿಕೊಂಡಿತ್ತು.

Advertisement

ಅಡಿಕೆ ಕಳ್ಳಸಾಗಣೆ ಪ್ರಕರಣದಲ್ಲಿ ತನಿಖೆ ನಡೆಸಲು ಆಮದುದಾರರು ಮತ್ತು ರಫ್ತುದಾರರಿಗೆ ಹಲವಾರು ಸಮನ್ಸ್‌ಗಳು ಮತ್ತು ಹುಡುಕಾಟ ನಡೆಸುತ್ತಿದ್ದ ಕಸ್ಟಮ್ಸ್‌ನ ವಿಶೇಷ ಗುಪ್ತಚರ ಮತ್ತು ತನಿಖಾ ದಳವು ಇದೀಗ ಆಮದು-ರಫ್ತು ಲೈಸನ್ಸ್‌ ಹೊಂದಿರುವ ಸಂಸ್ಥೆಯ ನಿರ್ದೇಶಕರೊಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದೆ.

ಯುಎಇಯಿಂದ ಭಾರತಕ್ಕೆ ಕಳ್ಳಸಾಗಣೆಯಾದ ಅಡಿಕೆಯ ವಾರೀಸುದಾರರಾದ ಘಾಟ್‌ಕೋಪರ್‌ನ  ಮುಖೇಶ್ ಮಾಧವಿ ಭಾನುಶಾಲಿ.  ತಪ್ಪು ಮಾಹಿತಿ ನೀಡಿ ಅಡಿಕೆ ಕಳ್ಳಸಾಗಣೆ ಮಾಡಲಾಗಿತ್ತು. ಡಾಬರು ಹೆಸರಿನಲ್ಲಿ ಅಡಿಕೆ ಸಾಗಾಟ ನಡೆದಿತ್ತು. ಈ  ಪ್ರಕರಣದಲ್ಲಿ ಮುಂದ್ರಾ ಸೇರಿದಂತೆ ವಿವಿಧ ಬಂದರುಗಳಲ್ಲಿ ಕಸ್ಟಮ್ಸ್  ತನಿಖೆಗಳನ್ನು ಪ್ರಾರಂಭಿಸಿದೆ, ಎಲ್ಲಾ ಪ್ರಕರಣದಲ್ಲಿ ತೆರಿಗೆ ತಪ್ಪಿಸಿ ಅಡಿಕೆ ಸಾಗಾಣಿಕೆ ಮಾಡಲಾಗಿತ್ತು.ಈ ಪ್ರಕರಣದಲ್ಲಿ ಸುಮಾರು 11.63 ಕೋಟಿ  ರೂಪಾಯಿ ತೆರಿಗೆ ವಂಚಿಸಲು ಯತ್ನಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಅಕ್ರಮವಾಗಿ ಸಾಗಾಟವಾಗಿ ಬಹುಪಾಲು ಅಡಿಕೆಯು ಗುಟ್ಕಾ ಉದ್ಯಮದಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ದೇಶಿಯ ಅಡಿಕೆ ಪೂರೈಕೆಯ ಕೊರತೆಯ ಹಿನ್ನೆಲೆಯಲ್ಲಿ ಅಡಿಕೆ ಕಳ್ಳಸಾಗಾಣಿಕೆ ಮೂಲಕ ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಸಾಕಷ್ಟು ಪ್ರಮಾಣದಲ್ಲಿದ್ದರೂ, ಕಡಿಮೆ ದರದಲ್ಲಿ ವಿದೇಶಿ ಅಡಿಕೆ ಆಮದು ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಗಂಭೀರವಾಗಿ ತನಿಖೆ ಆರಂಭವಾಗಿದೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ
ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |
April 2, 2025
9:31 PM
by: The Rural Mirror ಸುದ್ದಿಜಾಲ
ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!
April 2, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group