ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ3 ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ನಾಗರಪಂಚಮಿಯಂದು ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಆಡಳಿದ ಮಂಡಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀ ದೇವರಿಗೆ ಇಸ್ರೋ ಹೆಸರಿನಲ್ಲಿ ಸೇವೆ ನೆರವೇರಿಸಿತು.
ಭಾರತದ ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿಯ ಚಂದ್ರಯಾನ 3 ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ನಿರ್ಮಿಸಲಿ ಮತ್ತು ಇದರೊಂದಿಗೆ ನಮ್ಮ ರಾಷ್ಟ್ರದ ಹೆಸರು ಪ್ರಪಂಚದಲ್ಲೆ ಅಗ್ರಗಣ್ಯವಾಗಲಿ ಎಂದು ಕುಕ್ಕೆ ಸುಬ್ರಹ್ಮಣ್ಯನಿಗೆ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ನೇತೃತ್ವದಲ್ಲಿ ದೇವಳದ ಆಡಳಿತ ಮಂಡಳಿ, ಊರ ಹಿರಿಯರು ಮತ್ತು ಸಾರ್ವಜನಿಕ ಭಕ್ತರು ನಾಗರಪಂಚಮಿಯ ಪುಣ್ಯ ದಿನ ಕುಕ್ಕೆ ಸುಬ್ರಹ್ಮಣ್ಯನಲ್ಲಿ ಪ್ರಾರ್ಥನೆ ಸಲ್ಲಿಸಿದರು.ಅಲ್ಲದೆ ಇಸ್ರೋ ಸಂಸ್ಥೆಯ ಪರವಾಗಿ ನಾಗರಾಜನಿಗೆ ಹಾಲು ಅರ್ಪಿಸಿದರು. ಶ್ರೀ ದೇವಳದ ಆಡಳಿತ ಮಹಾಪೂಜೆ ಮತ್ತು ನಾಗ ತಂಬಿಲ(ಕಾರ್ತಿಕ ಪೂಜೆ) ಸೇವೆ ಸಮರ್ಪಿಸಿ ಚಂದ್ರಯಾನ 3 ಯಶಸ್ಸಿಗೆ ದೇವಳದ ಆಡಳಿತ ಮಂಡಳಿ ಮತ್ತು ಊರ ಹಿರಿಯರು,ಭಕ್ತರು ಪ್ರಾರ್ಥಿಸಿದರು.
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಎಸ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಪಿಜಿಎಸ್‌ಎನ್ ಪ್ರಸಾದ್, ಮನೋಹರ ರೈ, ಲೋಕೇಶ್ ಮುಂಡುಕಜೆ, ವನಜಾ.ವಿ.ಭಟ್, ಶೋಭಾ ಗಿರಿಧರ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
Special Pooja and Seva in Kukke Subrahmanya for success of #Chandrayaan3 #Chandrayaan3Mission #Chandrayaan_3 @chandrayaan_3 pic.twitter.com/FnXwql3CFd
— theruralmirror (@ruralmirror) August 21, 2023