ದೇಶದ ಸೈನಿಕರಿಗೆ ಗೌರವ ಸಲ್ಲಿಸಿ ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ನಾಳೆ ಬೆಳಗ್ಗೆ ಪಕ್ಷಾತೀತವಾಗಿ ವಿಶೇಷ ಜಾಥಾ ಆಯೋಜಿಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನೆಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಅವರು, ನಾಳೆ ಬೆಳಗ್ಗೆ 9.30ಕ್ಕೆ ಕೆ.ಆರ್. ಸರ್ಕಲ್ ನಿಂದ ರಾಷ್ಟ್ರೀಯ ತ್ರಿವರ್ಣ ಧ್ವಜ ಹಿಡಿದು ವಿಧಾನಸೌಧ ಮುಂಭಾಗದಿಂದ ಕೆಸಿಎಸ್ ವೃತ್ತದವರೆಗೂ ವಿಶೇಷ ಜಾಥಾ ನಡೆಸಲಾಗುವುದು ಎಂದರು. ಇದು ಪಕ್ಷಾತೀತವಾಗಿದ್ದು, ಸರ್ವರಿಗೂ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಆಹ್ವಾನ ನೀಡುತ್ತಿದ್ದೇನೆ. ಕನ್ನಡಪರ ಸಂಘಟನೆಗಳು, , ಚಲನಚಿತ್ರ ರಂಗ, ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಜಾಥಾದಲ್ಲಿ ಭಾಗವಹಿಸಿ, ದೇಶದ ಪ್ರಸ್ತುತ ಪರಿಸ್ಥಿತಿಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel