ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!

July 4, 2026
3:44 PM
ಸ್ವಲ್ಪ ಸಿಹಿ ರುಚಿಯ ಹಲಸಿನ ಕಾಯಿಗೆ ವಿವಿಧ ಮಸಾಲೆಗಳನ್ನು ಸೇರಿಸಿ ಕೆಲವೇ ನಿಮಿಷಗಳಲ್ಲಿ ರುಚಿಕರ "ಜಾಕ್‌ಫ್ರೂಟ್ ಸ್ಪೈಸಿ" ಸ್ನ್ಯಾಕ್ ತಯಾರಿಸಬಹುದು. ಉಪ್ಪು ಹಾಕದೇ ಸಹ ಸಿಹಿ-ಖಾರ-ಹುಳಿ ರುಚಿಯ ಅದ್ಭುತ ಅನುಭವ ನೀಡುವ ಸರಳ ರೆಸಿಪಿ ಇದು.

ಮಳೆಗಾಲದಲ್ಲಿ ಹಲಸಿನ ಕಾಯಿ ಸಾಕಷ್ಟು ಲಭ್ಯವಾಗುವ ಸಮಯ. ಸ್ವಲ್ಪ ಸಿಹಿ ರುಚಿಯ ಹಲಸಿನ ಕಾಯಿಯನ್ನು ಬಳಸಿ ಯಾವುದೇ ಎಣ್ಣೆ ಅಥವಾ ಬೇಯಿಸುವ ಪ್ರಕ್ರಿಯೆಯಿಲ್ಲದೆ ಸುಲಭವಾಗಿ ತಯಾರಿಸಬಹುದಾದ ಈ “ಜಾಕ್‌ಫ್ರೂಟ್ ಸ್ಪೈಸಿ” ಆರೋಗ್ಯಕರ ಹಾಗೂ ರುಚಿಕರ ಸ್ನ್ಯಾಕ್ ಆಗಿದೆ. ಸಿಹಿ, ಖಾರ ಮತ್ತು ಹುಳಿಯ ಸಮ್ಮಿಶ್ರ ರುಚಿಯ ಈ ತಿನಿಸು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವಂತದ್ದು.

ಬೇಕಾಗುವ ಸಾಮಗ್ರಿಗಳು

  • ಹಲಸಿನ ಕಾಯಿ – ¾ ಕಪ್ (ಸ್ವಲ್ಪ ಸಿಹಿ ರುಚಿಯದು)
  • ಗರಂ ಮಸಾಲ – 1 ಟೀ ಚಮಚ
  • ಚಾಟ್ ಮಸಾಲ – ½ ಟೀ ಚಮಚ
  • ಒರೆಗಾನೋ – ½ ಟೀ ಚಮಚ
  • ಡ್ರೈ ಮ್ಯಾಂಗೋ ಪೌಡರ್ (ಅಮ್ಚೂರ್) – ½ ಟೀ ಚಮಚ
  • ಜೀರಿಗೆ ಪುಡಿ – 1 ಟೀ ಚಮಚ
  • ಕೊತ್ತಂಬರಿ ಪುಡಿ – ½ ಟೀ ಚಮಚ
  • ಚಿಲ್ಲಿ ಫ್ಲೇಕ್ಸ್ – ¼ ಟೀ ಚಮಚ
  • ಕಾಳುಮೆಣಸಿನ ಪುಡಿ – ¼ ಟೀ ಚಮಚ

ಗಮನಿಸಿ: ಈ ರೆಸಿಪಿಗೆ ಉಪ್ಪು ಅಗತ್ಯವಿಲ್ಲ. ಹಲಸಿನ ಕಾಯಿಯ ಸಹಜ ಸಿಹಿ ರುಚಿ ಮತ್ತು ಮಸಾಲೆಗಳ ಸಂಯೋಜನೆಯೇ ಅದ್ಭುತ ರುಚಿಯನ್ನು ನೀಡುತ್ತದೆ.

ತಯಾರಿಸುವ ವಿಧಾನ :  ಒಂದು ಪಾತ್ರೆಯಲ್ಲಿ ಹಲಸಿನ ಕಾಯಿಯನ್ನು ಹಾಕಿ. ನಂತರ ಮೇಲಿನ ಎಲ್ಲಾ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತಕ್ಷಣವೇ ಸವಿಯಲು ಸಿದ್ಧ! ಯಾವುದೇ ಎಣ್ಣೆ ಅಥವಾ ಹೆಚ್ಚುವರಿ ಪದಾರ್ಥಗಳ ಅಗತ್ಯವಿಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Spicy Jackfruit is a quick, healthy snack made by mixing sweet jackfruit pieces with aromatic spices like garam masala, chaat masala, oregano, cumin, coriander, dry mango powder, chilli flakes, and black pepper. No cooking or extra salt is needed, making it a delicious sweet, spicy, and tangy treat.

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

 

View this post on Instagram

 

A post shared by Rural Mirror (@theruralmirror)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!
September 23, 2026
1:58 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?
September 23, 2026
9:18 AM
by: ದ ರೂರಲ್ ಮಿರರ್.ಕಾಂ
₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’
September 22, 2026
8:02 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ
September 21, 2026
12:57 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror