ಕೃಷಿ ಸಂಬಂಧಿತ ಕೋರ್ಸ್‌ಗಳಿಗೆ ಹೆಚ್ಚುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ | ಕೇರಳದಿಂದಲೇ ಅಧಿಕ ವಿದ್ಯಾರ್ಥಿನಿಯರು..! |

June 11, 2024
8:30 PM
ಸಮೀಕ್ಷೆಯ ಪ್ರಕಾರ, ಕೃಷಿ ಕೋರ್ಸ್‌ಗಳಲ್ಲಿ ಮಹಿಳಾ ವಿದ್ಯಾರ್ಥಿಗಳ ದಾಖಲಾತಿಯು 2017 ರಲ್ಲಿ 27% ಹಾಗೂ 2023 ರಲ್ಲಿ 50% ಕ್ಕೆ ಏರಿದೆ.ಇದು ಭಾರತದಲ್ಲಿ ಗಮನಾರ್ಹ ಶೈಕ್ಷಣಿಕ ಬದಲಾವಣೆಯನ್ನು ತೋರಿಸುತ್ತಿದೆ.ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯ ಕಡೆಗಿನ ಆಸಕ್ತಿಯೂ ನಿಧಾನವಾಗಿ ಬೆಳೆಯುತ್ತಿದೆ.

ಕೃಷಿ ಹಾಗೂ ಕೃಷಿ ಸಂಬಂಧಿತ ಕೋರ್ಸ್‌ಗಳಲ್ಲಿ ಈಗ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಕಾಲೇಜುಗಳು 74% ಮಹಿಳಾ ದಾಖಲಾತಿಗಳನ್ನು ಪಡೆಯುತ್ತವೆ. ಅದರಲ್ಲಿ ಕೇರಳವು ಅತಿ ಹೆಚ್ಚು ವಿದ್ಯಾರ್ಥಿನಿಯರನ್ನು ಹೊಂದಿದೆ ನಂತರದ ಸ್ಥಾನ ಹಿಮಾಚಲ ಪ್ರದೇಶದ ವಿದ್ಯಾರ್ಥಿನಿಯರಿಗಿದೆ. 

ದೇಶದಲ್ಲಿ ಸುಮಾರು 76 ಕೃಷಿ ವಿಶ್ವವಿದ್ಯಾಲಯಗಳನ್ನು ಹತ್ತಿರದಿಂದ ಗಮನಿಸಿದ  ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಸಮೀಕ್ಷೆಯ ಪ್ರಕಾರ, ಕೃಷಿ-ಸಂಬಂಧಿತ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯು 2017 ರಲ್ಲಿ 27% ಇದ್ದರೆ  2023 ರಲ್ಲಿ 50% ಕ್ಕೆ ಏರಿದೆ.

ಅಂಕಿಅಂಶಗಳ ಪ್ರಕಾರ, ಕೃಷಿ ಕೋರ್ಸ್‌ಗಳಲ್ಲಿ 74% ಮಹಿಳಾ ವಿದ್ಯಾರ್ಥಿಗಳೊಂದಿಗೆ ಕೇರಳವು ಅತಿ ಹೆಚ್ಚು ವಿದ್ಯಾರ್ಥಿನಿಯರನ್ನು ಹೊಂದಿದೆ, ನಂತರ ಹಿಮಾಚಲ ಪ್ರದೇಶ, ತಮಿಳುನಾಡು, ತೆಲಂಗಾಣ, ಮಣಿಪುರ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ , ಉತ್ತರಾಖಂಡ, ನಾಗಾಲ್ಯಾಂಡ್ ಮತ್ತು ಒಡಿಶಾ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಕೃಷಿ  ಕೋರ್ಸ್‌ಗಳಲ್ಲಿ 50% ಕ್ಕಿಂತ ಹೆಚ್ಚಿನ ಮಹಿಳಾ ವಿದ್ಯಾರ್ಥಿಗಳನ್ನು ಹೊಂದಿದೆ.

2019-20 ರಿಂದ 2023-24 ರ ಶೈಕ್ಷಣಿಕ ವರ್ಷಗಳಲ್ಲಿ ಕೌನ್ಸೆಲಿಂಗ್ ಅವಧಿಯಲ್ಲಿ ಗಮನಿಸಿದಂತೆ ಮಹಿಳಾ ಅಭ್ಯರ್ಥಿಗಳು ಕೃಷಿ ಎಂಜಿನಿಯರಿಂಗ್, ಜೈವಿಕ ತಂತ್ರಜ್ಞಾನ, ಆಹಾರ ತಂತ್ರಜ್ಞಾನ, ಪಶುವೈದ್ಯಕೀಯ, ತೋಟಗಾರಿಕೆ ಮತ್ತು ಡೈರಿ ತಂತ್ರಜ್ಞಾನದಂತಹ ಕೋರ್ಸ್‌ಗಳಿಗೆ ಆದ್ಯತೆ ನೀಡುತ್ತಾರೆ.

ಹುಡುಗಿಯರಿಗೆ ಸರ್ಕಾರವೂ ಕೂಡಾ ಕೃಷಿ ಕೋರ್ಸ್‌ಗಳಿಗೆ ಆದ್ಯತೆ ನೀಡುವ ಉದ್ದೇಶ ಏಕೆಂದರೆ, ಲಿಂಗ ಸಮಾನತೆ ಮತ್ತು ಕೃಷಿ ಸಂಸ್ಥೆಗಳಲ್ಲಿ ಮಹಿಳಾ ಸಬಲೀಕರಣ, ಹುಡುಗಿಯರಲ್ಲಿ ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡುವ ಉದ್ದೇಶ ಮತ್ತು ಕೃಷಿ ಕ್ಷೇತ್ರದಲ್ಲಿ ಮಹಿಳೆಯರನ್ನು  ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಗೆ ಪ್ರಯತ್ನ ಮಾಡಲಾಗುತ್ತಿದೆ.

Advertisement

ಈಗಾಗಲೇ ಕೃಷಿ ವಿಷಯ ಆಯ್ಕೆ ಮಾಡಿರುವ 29% ರಷ್ಟು ಮಹಿಳಾ ವಿದ್ಯಾರ್ಥಿಗಳು ಅಧ್ಯಯನದ ನಂತರ ಆಹಾರ, ಬೀಜ ಮತ್ತು ಕೃಷಿ-ಸಂಬಂಧಿತ ಕಂಪನಿಗಳನ್ನು ಆಯ್ಕೆ ಮಾಡುತ್ತಾರೆ ಮತ್ತು 24% ರಷ್ಟು ಸ್ಪರ್ಧಾತ್ಮಕ ಸರ್ಕಾರಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ಭಾರತದಲ್ಲಿ ಉನ್ನತ ವ್ಯಾಸಂಗವನ್ನು ಮುಂದುವರಿಸುವ ಮಹಿಳಾ ವಿದ್ಯಾರ್ಥಿಗಳು 22% ಆಗಿದ್ದರೆ, 13% ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಸುಮಾರು 7% ಮಹಿಳಾ ವಿದ್ಯಾರ್ಥಿಗಳು ಸ್ಟಾರ್ಟ್‌ಅಪ್‌ಗಳನ್ನು ಹೊಂದಿದ್ದಾರೆ ಮತ್ತು 3% ಹುಡುಗಿಯರು ಕೃಷಿಯೇತರ ವಲಯದಲ್ಲಿ ಮುಂದುವರೆದಿದ್ದಾರೆ, ಆದರೆ 0.2% ಮಹಿಳಾ ವಿದ್ಯಾರ್ಥಿಗಳು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಡೇಟಾ ಹೇಳುತ್ತದೆ. ಹೀಗಾಗಿ ಕೃಷಿ ವಿಭಾಗದಲ್ಲಿ ವಿದ್ಯಾರ್ಥಿನಿಯರಿಗೂ ಸಾಕಷ್ಟು ಅವಕಾಶಗಳು ಇದೆ.

According to a survey by the Indian Council of Agricultural Research (ICAR), the number of female students enrolling in agriculture-related courses surged from 27% in 2017 to nearly 50% in 2023. This significant increase highlights the growing interest and participation of women in the agricultural sector, which is essential for sustainable development and innovation. ICAR, the apex body overseeing 76 agricultural universities and 131 institutes across various agricultural domains in India, underscores this trend as a positive indicator of gender diversity and inclusivity in higher education.

Source: ICAR

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೊಟ್ಟೆಯಲ್ಲಿ ಅಪಾಯಕಾರಿ ಕ್ಯಾನ್ಸರ್ ಅಂಶ ಪತ್ತೆ ಎಂಬ ಊಹಪೋಹಗಳಿಗೆ ಬ್ರೇಕ್
December 16, 2025
7:16 AM
by: ರೂರಲ್‌ ಮಿರರ್ ಸುದ್ದಿಜಾಲ
ನೇಪಾಳದಲ್ಲೂ ಕಾಡುವ “ಅಡಿಕೆ” | ಆಮದು-ರಫ್ತು ಪ್ರಕ್ರಿಯೆಯ ಮೇಲೆ ನಿಗಾ |
December 15, 2025
7:20 AM
by: ದ ರೂರಲ್ ಮಿರರ್.ಕಾಂ
ಎತ್ತಿನಹೊಳೆ ಹಾಗೂ ಕಾವೇರಿ ನೀರಿಗೆ ಹೆಚ್ಚಿನ ಆದ್ಯತೆ
December 15, 2025
7:02 AM
by: ದ ರೂರಲ್ ಮಿರರ್.ಕಾಂ
ಪಶ್ಚಿಮಘಟ್ಟದಲ್ಲಿ ಕಾಣಸಿಗುವ ಸಿಂಗಳೀಕ | ಕೆನೋಪಿ ಬ್ರಿಡ್ಜ್ ವ್ಯವಸ್ಥೆ ಪೂರ್ಣ
December 15, 2025
6:58 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror