#NiphaVirus | ಹರಡುತ್ತಿರುವ ನಿಫಾ ವೈರಸ್‌ | ಕೃಷಿಕರಿಗೂ ತಂದಿದೆ ಆತಂಕ |

September 18, 2023
11:59 AM
ಕೇರಳದ ಕೋಝಿಕ್ಕೋಡಿನ  ಬಾಳುಶ್ಶೇರಿ ಕ್ಷೇತ್ರದ ಗುಡ್ಡಗಾಡು ಪ್ರದೇಶದಲ್ಲಿ ಭತ್ತದ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ಭಾಗದಲ್ಲಿ ಅಡಿಕೆ ಹಾಗೂ ಹಣ್ಣಿನ ಕೃಷಿಯೂ ಇದೆ. ಇದೀಗ ನಿಫಾ ವೈರಸ್‌ ಹರಡಲು ಬಾವಲಿಗಳು ಕಾರಣ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಕೃಷಿಕರೂ ಆತಂಕಕ್ಕೆ ಒಳಗಾಗಿದ್ದಾರೆ.

ಕೇರಳದ ಕೋಝಿಕ್ಕೋಡ್‌ ಜಿಲ್ಲೆಯಲ್ಲಿ ಹರಡುತ್ತಿರುವ ನಿಫಾ ವೈರಸ್‌ ಬಗ್ಗೆ ಈಗ ಕೃಷಿಕರೂ ಆತಂಕಕ್ಕೆ ಒಳಗಾಗಿದ್ದಾರೆ. ಬಾವಲಿಗಳ ಕಾಟ ಹೆಚ್ಚಾಗಿರುವ ಪ್ರದೇಶದಲ್ಲಿ ಈಗ ಅಡಿಕೆ ಸಹಿತ ಕೃಷಿ ಕೆಲಸಕ್ಕೂ ಆತಂಕವಾಗಿದೆ.

ನಿಫಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ  ಕೃಷಿಕರಿಗೆ ಸವಾಲಾಗಿ ಪರಿಣಮಿಸಿದೆ. ಬಾವಲಿಗಳ ಕೃಷಿಗೂ ಹೆಚ್ಚಾಗಿ ತೊಂದರೆ ಕೊಡುತ್ತವೆ. ಅಡಿಕೆ, ಬಾಳೆ, ತೆಂಗು ಕೃಷಿಯಲ್ಲೂ ಬಾವಲಿಗಳ ಓಡಾಟ ಇರುತ್ತದೆ. ನಿಫಾ ವೈರಸ್‌ ಬಾವಲಿ ಮೂಲಕ ಹರಡುತ್ತದೆ ಎನ್ನುವ ಸುದ್ದಿಯು ಕೇರಳದ ಕೋಝಿಕ್ಕೋಡ್‌ ಪ್ರದೇಶದ ಕೃಷಿಕರಿಗೆ ಆತಂಕಕ್ಕೆ ಕಾರಣವಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಕೋಝಿಕ್ಕೋಡ್‌ ಜಿಲ್ಲೆಯಲ್ಲೂ ಅಡಿಕೆ ಸ್ವಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈಗ ವೈರಸ್‌ ಹರಡುವ ಪ್ರದೇಶದಲ್ಲೂ ಅಡಿಕೆ ಕೃಷಿ ಇರುವುದರಿಂದ ಈಗ ಅಡಿಕೆ ಬಾವಲಿ ಕಚ್ಚಿ ಕೆಳಗೆ ಬೀಳಿಸುತ್ತದೆ. ಈ ಅಡಿಕೆಯನ್ನು ಹೆಕ್ಕುವ ಸಂದರ್ಭ ಕೃಷಿಕರಿಗೆ ಭಯದ ವಾತಾವರಣ ಉಂಟಾಗಿದೆ. ವೈರಾಣು ಹರಡುವ ಭೀತಿಯಿಂದ ಅಡಿಕೆ ಸಂಗ್ರಹಿಸಲು ಸಾಧ್ಯವಾಗದ ಪರಿಸ್ಥಿತಿ ಇಲ್ಲಿ ಇದೆ. ಬಾಳೆ ಕೃಷಿ ಸೇರಿದಂತೆ ಹಣ್ಣಿನ ಕೃಷಿಗಳನ್ನು ಬೆಳೆಸುವವರೂ ಇದೇ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ನಿಫಾ ಭೀತಿಯಿಂದ ಹಣ್ಣುಗಳ ಬೆಲೆಯೂ ಇಳಿಕೆಯಾಗಿದೆ. ವಿಶೇಷವಾಗಿ ಕೋಝಿಕ್ಕೋಡಿನ  ಬಾಳುಶ್ಶೇರಿ ಕ್ಷೇತ್ರದ ಗುಡ್ಡಗಾಡು ಪ್ರದೇಶದಲ್ಲಿ ಭತ್ತದ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ಭಾಗದಲ್ಲಿ ಅಡಿಕೆ ಹಾಗೂ ಹಣ್ಣಿನ ಕೃಷಿಯೂ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್
ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!
March 4, 2026
10:20 PM
by: ಮಿರರ್‌ ಡೆಸ್ಕ್
ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!
March 4, 2026
12:01 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror