#GruhaJyothi | ವಿದ್ಯುತ್ ಕಳ್ಳತನ ಮಾಡಿದಿರೀ ಜೋಕೆ | ‘ಗೃಹ ಜ್ಯೋತಿ’ ಜಾರಿಯಾಗುತ್ತಲೇ ಜಾಗೃತ ದಳ ನಿಯೋಜನೆ

July 1, 2023
7:53 PM

ರಾಜ್ಯ ಸರಕಾರದ ನೂತನ ಯೋಜನೆಯಂತೆ ಮಾಸಿಕ 200 ಯೂನಿಟ್ ನ ಉಚಿತ ಕೊಡುಗೆ ಘೋಷಿಸಿದೆ. ಗೃಹ ಜ್ಯೋತಿʼ #GruhaJyothi ಯೋಜನೆ  ಜಾರಿಯಾಗುತ್ತಲೇ ಬೆಸ್ಕಾಂ ಇನ್ನೊಂದು ಕಡೆಯಲ್ಲಿ ಅಲರ್ಟ್ ಆಗಿದೆ. ಇದರ ಬೆನ್ನಲ್ಲೇ ಬೆಸ್ಕಾಂ #Bescom ವಿದ್ಯುತ್ ಕಳ್ಳತನ ಹಾಗೂ ದುರುಪಯೋಗ ತಡೆಯಲು ವಿಶೇಷ ಸ್ಕ್ಯಾಡ್ ಅನ್ನ ಅಲರ್ಟ್ ಗೊಳಿಸಿದೆ. ಈ ಮೂಲಕ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 11 ಸ್ಥಳಗಳಲ್ಲಿ ವಿಶೇಷ ಜಾಗೃತ ದಳವನ್ನು ನಿಯೋಜಿಸಿ ಕಾರ್ಯೋನ್ಮುಖಗೊಳಿಸಿದೆ. ಈ ಮೂಲಕ ವಿದ್ಯುತ್ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಬೆಸ್ಕಾಂ ಮೊದಲ ಹೆಜ್ಜೆ ಇಟ್ಟಿದೆ.

ವಿದ್ಯುತ್ ಕಳ್ಳತನಕ್ಕೆ ತಕ್ಕ ಶಾಸ್ತಿ: ವಿದ್ಯುತ್ ರೀಡಿಂಗ್ ಮೀಟರ್ ನಲ್ಲಿ ಹಸ್ತಕ್ಷೇಪ ನಡೆಸಿ ಯಾಂತ್ರಿಕವಾಗಿ ಚಾಲ್ತಿಯಲ್ಲಿರುವ ಮೀಟರ್ ಅನ್ನ ಸ್ಥಗಿತಗೊಳ್ಳುವಂತೆ ಮಾಡುವ ಮೂಲಕ ಹೆಚ್ಚುವರಿ ಕರೆಂಟ್ ಬಾರದಂತೆ ಅಥವಾ ಕಡಿಮೆ ವಿದ್ಯುತ್ ಬಿಲ್ ಬರುವಂತೆ ಮಾಡುವುದು ಮತ್ತು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವುದು. ಪೂರ್ವನುಮತಿ ಇಲ್ಲದೇ ಪ್ರವಹಿಸುವ ವಿದ್ಯುತ್ ಕಂಬಗಳಿಂದ ಸಂಪರ್ಕ ಪಡೆಯುವುದು, ಇದು ಕಾನೂನಿನ್ವಯ ಗಂಭೀರ ಅಪರಾಧವಾಗಿದೆ. “ಭಾರತೀಯ ವಿದ್ಯುತ್ ಕಾಯ್ದೆ 2003”ರ ಅನ್ವಯ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ.

ಸಹಾಯವಾಣಿ:ಕಾನೂನು ವಿರೋಧಿ ಚಟುವಟಿಕೆ ನಡೆಸಿ ವಿದ್ಯುತ್ ಕಳ್ಳತನ ನಡೆಸುತ್ತಿದ್ದಲ್ಲಿ ಅಂತಹವರ ಮಾಹಿತಿಯನ್ನು ಸಾರ್ವಜನಿಕರು ನೀಡಬಹುದಾಗಿದೆ. ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಆಗಿರುತ್ತದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು
March 6, 2026
8:22 PM
by: ದ ರೂರಲ್ ಮಿರರ್.ಕಾಂ
ರಾಜ್ಯ ಬಜೆಟ್‌ 2026-27: ಕೃಷಿ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಯೋಜನೆಗಳ ಘೋಷಣೆ
March 6, 2026
8:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 06-03-2026 | ಕರಾವಳಿಯಲ್ಲಿ ಮೋಡ ಕವಿದ ಆಕಾಶ, ಕೆಲವೆಡೆ ತುಂತುರು ಮಳೆಯ ಸಾಧ್ಯತೆ
March 6, 2026
4:13 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror