ರಾಜ್ಯ ಸರಕಾರದ ನೂತನ ಯೋಜನೆಯಂತೆ ಮಾಸಿಕ 200 ಯೂನಿಟ್ ನ ಉಚಿತ ಕೊಡುಗೆ ಘೋಷಿಸಿದೆ. ಗೃಹ ಜ್ಯೋತಿʼ #GruhaJyothi ಯೋಜನೆ ಜಾರಿಯಾಗುತ್ತಲೇ ಬೆಸ್ಕಾಂ ಇನ್ನೊಂದು ಕಡೆಯಲ್ಲಿ ಅಲರ್ಟ್ ಆಗಿದೆ. ಇದರ ಬೆನ್ನಲ್ಲೇ ಬೆಸ್ಕಾಂ #Bescom ವಿದ್ಯುತ್ ಕಳ್ಳತನ ಹಾಗೂ ದುರುಪಯೋಗ ತಡೆಯಲು ವಿಶೇಷ ಸ್ಕ್ಯಾಡ್ ಅನ್ನ ಅಲರ್ಟ್ ಗೊಳಿಸಿದೆ. ಈ ಮೂಲಕ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 11 ಸ್ಥಳಗಳಲ್ಲಿ ವಿಶೇಷ ಜಾಗೃತ ದಳವನ್ನು ನಿಯೋಜಿಸಿ ಕಾರ್ಯೋನ್ಮುಖಗೊಳಿಸಿದೆ. ಈ ಮೂಲಕ ವಿದ್ಯುತ್ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಬೆಸ್ಕಾಂ ಮೊದಲ ಹೆಜ್ಜೆ ಇಟ್ಟಿದೆ.
ವಿದ್ಯುತ್ ಕಳ್ಳತನಕ್ಕೆ ತಕ್ಕ ಶಾಸ್ತಿ: ವಿದ್ಯುತ್ ರೀಡಿಂಗ್ ಮೀಟರ್ ನಲ್ಲಿ ಹಸ್ತಕ್ಷೇಪ ನಡೆಸಿ ಯಾಂತ್ರಿಕವಾಗಿ ಚಾಲ್ತಿಯಲ್ಲಿರುವ ಮೀಟರ್ ಅನ್ನ ಸ್ಥಗಿತಗೊಳ್ಳುವಂತೆ ಮಾಡುವ ಮೂಲಕ ಹೆಚ್ಚುವರಿ ಕರೆಂಟ್ ಬಾರದಂತೆ ಅಥವಾ ಕಡಿಮೆ ವಿದ್ಯುತ್ ಬಿಲ್ ಬರುವಂತೆ ಮಾಡುವುದು ಮತ್ತು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವುದು. ಪೂರ್ವನುಮತಿ ಇಲ್ಲದೇ ಪ್ರವಹಿಸುವ ವಿದ್ಯುತ್ ಕಂಬಗಳಿಂದ ಸಂಪರ್ಕ ಪಡೆಯುವುದು, ಇದು ಕಾನೂನಿನ್ವಯ ಗಂಭೀರ ಅಪರಾಧವಾಗಿದೆ. “ಭಾರತೀಯ ವಿದ್ಯುತ್ ಕಾಯ್ದೆ 2003”ರ ಅನ್ವಯ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ.
ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಸಂಪಾಜೆ ಗ್ರಾಮ ಪಂಚಾಯತ್…
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 852.6 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದ್ದು,…
ಬೆಂಗಳೂರಿನಲ್ಲಿ ಈ ಹಿಂದೆ ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ…
ರಾಜ್ಯದ ಜೇನುತುಪ್ಪಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹಾಗೂ ಮಾರುಕಟ್ಟೆ ಒದಗಿಸಲು ತೋಟಗಾರಿಕಾ ಇಲಾಖೆಯಿಂದ…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶದಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ…
ವಿದ್ಯುತ್ ಸರಬರಾಜು ಕಂಪನಿಗಳಿಗೆ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಪಾವತಿಸಬೇಕಾಗಿದ್ದ …