MIRROR FOCUS

#Agriculture | 1 ಕೆಜಿ ಆಹಾರದಲ್ಲಿ 27  ಮಿಲಿಗ್ರಾಂ ವಿಷ ದೇಹಕ್ಕೆ ಸೇರುತ್ತಿದೆ…! | ಚಿಂತನೆಗೆ ಹಚ್ಚಿದ ಕಾಡುಸಿದ್ದೇಶ್ವರ ಶ್ರೀಗಳ ಸಂದೇಶ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಾಡಿನಲ್ಲಿ ಹಾಲು-ಮಜ್ಜಿಗೆ ಅಂಗಡಿಗಳು ಇರಬೇಕಾದ ಜಾಗದಲ್ಲಿ ಮೆಡಿಕಲ್‌ ಶಾಪ್‌ಗಳು, ಆಸ್ಪತ್ರೆಗಳು ಹೆಚ್ಚಾಗುತ್ತಿವೆ. ಕೃಷಿಕರೇ ಇರುವ ದೇಶದಲ್ಲಿ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ಯೋಚಿಸಬೇಕಾಗಿದೆ ಎಂದು ಕೊಲ್ಹಾಪುರದ ಕನ್ನೇರಿ ಮಠದ ಶ್ರೀ ಕಾಡಸಿದ್ಧಶ್ವರ ಸ್ವಾಮೀಜಿಗಳು ಹೇಳಿದರು.

Advertisement

ಮಂಗಳೂರಿನಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗದ ಆಶ್ರಯದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಟಾನ ಪ್ರಾಯೋಜಕತ್ವದಲ್ಲಿ ಉದಯವಾಣಿ ಮಾಧ್ಯಮ ಸಹಯೋಗದಲ್ಲಿ ಭಾರತೀಯ ಕಿಸಾನ್‌ ಸಂಘ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ನಡೆದ ಗೋಆಧಾರಿತ ಸಾವಯವ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶಾಲವಾಗಿರುವ ಈ ದೇಶದಲ್ಲಿ ಕೃಷಿಯೇ ಪ್ರದಾನವಾಗಿದೆ. ದೇಶದ ಶೇ.50 ರಷ್ಟು ಮಂದಿಗೆ ಉದ್ಯೋಗ ನೀಡುವ ಕ್ಷೇತ್ರವೂ ಕೃಷಿಯಾಗಿದೆ. ದೇಶದ  ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಊಟ ನೀಡುವ ಕ್ಷೇತ್ರವೂ ಕೃಷಿ. ಆದರೆ ಅತಿ ಕಡಿಮೆ ಕಲಿತವರು ಇಲ್ಲಿದ್ದಾರೆ,  ಅತೀ ಹೆಚ್ಚು ಕಲಿತವರು ಬೇರೆ ಕ್ಷೇತ್ರದಲ್ಲಿದ್ದಾರೆ. ಈ ದೇಶದ 1 ಶೇಕಡಾ ಜನರ ಕೈಯಲ್ಲಿ ಈ ದೇಶದ 50 ಶೇಕಡ ಕೃಷಿ ಇದೆ. ಇದರಲ್ಲಿ ಶೇ.80 ರಷ್ಟು ಮಂದಿ ಕಡಿಮೆ ಕೃಷಿಭೂಮಿ ಹೊಂದಿದವರು ಇದ್ದಾರೆ. ಇಂತಹ ಸ್ಥಿತಿ ಇದ್ದರೂ ಇದು ಕೃಷಿಕರ ದೇಶ. ಕೃಷಿ ಸಾಧ್ಯವಿಲ್ಲ ಎನ್ನುವ ಭಾವನೆ ಬೆಳೆಯುತ್ತಿದೆ. ಇಂದಿಗೂ ಪ್ರತೀ ದಿನ 205೦ ಕ್ಕಿಂತಲೂ ಹೆಚ್ಚು ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದರು.

ಈ ದೇಶದ 143 ಕೋಟಿ ಜನಸಂಖ್ಯೆ ಜನಸಂಖ್ಯೆ ದಾಟುತ್ತಿದೆ.  ಇಂದು 32 ಕೋಟಿ ಟನ್‌ ಗಿಂತಲೂ ಅಧಿಕ ಆಹಾರ ಸಂಗ್ರಹವಾಗುತ್ತಿದೆ. ಇದರಲ್ಲಿ ಶೇ23 ರಷ್ಟು ಆಹಾರ ಸಾಮಾಗ್ರಿ ಹಾಳಾಗುತ್ತಿದೆ . ಅಮೇರಿಕಾದಲ್ಲಿ 2 ಕೋಟಿ ಜನರಿಗೆ ಬೇಕಾಗುವ ಅನ್ನ ಹಾಳಾಗುತ್ತಿದೆ. ಒಂದು ಕಾಲದಲ್ಲಿ ಆಹಾರವ ಈ ದೇಶಕ್ಕೆ ಇರಲಿಲ್ಲ.ಆ ಸಮಯದಲ್ಲಿ ಹಸಿರು ಕ್ರಾಂತಿ ಆರಂಭವಾಯಿತು. ಹಸಿರು ಕ್ರಾಂತಿ ಸ್ವೀಕರಿಸಿದ ಬಳಿಕ ಎಲ್ಲಾ ಅನರ್ಥ ಸ್ವೀಕರಿಸಿದ್ದೇವೆ ಎಂತ ಅರ್ಥ. ಕೃಷಿ ಉತ್ಪಾದನೆಯ ಜೊತೆಗೆ ಆಸ್ಪತ್ರೆಗಳೂ ಬೆಳೆಯಿತು, ಜೊತೆಗೆ  ಫಾರ್ಮಸಿಗಳೂ  ಬೆಳೆಯಿತು ಎಂದು ಶ್ರೀಗಳು ಹೇಳಿದರು.

ಏಕೆ ಆಸ್ಪತ್ರೆಗಳು ಬೆಳೆಯಿತು ? ಕೃಷಿ ಸಂಸ್ಕರಣೆ ಕೇಂದ್ರ ಇರಬೇಕಾದ  ಜಾಗದಲ್ಲಿ ಬೇರೆ ಬೇರೆ ಕೇಂದ್ರ ಕಾಣುತ್ತದೆ, ಆಸ್ಪತ್ರೆ ಅಲ್ಲಲ್ಲಿ ಕಾಣುತ್ತದೆ.  ಕೃಷಿಯ ಪರಿಣಾಮ ವೈದ್ಯರು ಹೆಚ್ಚಾಗಿದ್ದಾರೆ. ಇದಕ್ಕೆಲ್ಲಾ ಕಾರಣ ಭೂಮಿಗೆ ವಿಷ ತುಂಬಿರುವುದು ಕಾರಣ.ಇಂದು ಪ್ರತಿ ವ್ಯಕ್ತಿಯ 1 ಕೆಜಿ ಆಹಾರದಲ್ಲಿ  27  ಮಿಲಿಗ್ರಾಂ ವಿಷ ಸೇರುತ್ತದೆ. ಇದರ ಪರಿಣಾಮ ದೇಹದ ಪ್ರತಿರೋಧ ಶಕ್ತಿ ಕಳೆದುಕೊಳ್ಳುತ್ತಿದೆ. ದೇಶದಲ್ಲಿ ಕ್ಯಾನ್ಸರ್ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಪ್ರತೀ ವರ್ಷ 8 ಲಕ್ಷ ಜನ ಸಾಯುತ್ತಿದ್ದಾರೆ. ವಿಶೇಷವಾಗಿ ತರಕಾರಿ ಬೆಳೆಯುವ ಪ್ರದೇಶದಲ್ಲಿ ಅನೇಕರು ರೋಗಿಗಳು ಕಾಣುತ್ತಾರೆ. ಇದೆಲ್ಲಾ ಹಸಿರು ಕ್ರಾಂತಿಯ ಪರಿಣಾಮವಾಗಿದೆ ಎಂದು ಶ್ರೀಗಳು ಉಲ್ಲೇಖಿಸಿದರು.

ಹಸಿರು ಕ್ರಾಂತಿಯ  ಜೊತೆಗೇ ಬೆಳೆದದ್ದು ಬಿಳಿ ಕ್ರಾಂತಿ ಆರಂಭವಾಯಿತು. ಭಾರತದಲ್ಲಿ  65 ಕೋಟಿ ಲೀಟರ್‌ ಹಾಲು ಬೇಡಿಕೆ ಇದೆ. ಇದರಲ್ಲಿ 15 ಕೋಟಿ ಲೀಟರ್‌ ಕೊರತೆ ಇದೆ. ಇದಕ್ಕಾಗಿ ಕೃತಕ ಹಾಲು ಬಳಕೆಯಾಗುತ್ತದೆ. ಇದರ ಪರಿಣಾಮ ಅನೇಕ ಸಮಸ್ಯೆ. ಈ ಹಾಲುಗಳು 22 ರಾಸಾಯನಿಕ ಒಳಗೊಂಡು ಮನೆಗೆ ಬರುತ್ತಿದೆ ಎನ್ನುವುದೂ ಮರೆತಿದೆ ಎಂದು ಶ್ರೀಗಳು ಎಚ್ಚರಿಸಿದರು.

ಇದಕ್ಕೆಲ್ಲಾ ಪರಿಹಾರ ಏನು?. ದೇಶ ಉಳಿಸಬೇಕು, ಭವಿಷ್ಯದ ಮಕ್ಕಳ ಆರೋಗ್ಯ ಉಳೀಸಬೇಕು. ಯಾವತ್ತೂ ಈ ಬಗ್ಗೆ  ಮಾತಾಡುತ್ತಿದ್ದರೆ ಸಾಲದು. ಆಚರಣೆ ಅಗತ್ಯ ಇದೆ. ಇದಕ್ಕಾಗಿಯೇ ಸಾವಯವ ಕೃಷಿಯ ಬಗ್ಗೆ ಸಂವಾದ ಅಗತ್ಯ ಇದೆ ಎಂದು ಕಾಡಸಿದ್ಧಶ್ವರ ಸ್ವಾಮೀಜಿಗಳು ಹೇಳಿದರು.

ದೇಶದಲ್ಲಿ  ಬೇರೆ ಬೇರೆ ವಾತಾವರಣ ಪ್ರದೇಶ ಇದೆ. 120 ಪ್ರಕಾರದ ಕೃಷಿ ವಲಯ ಇದೆ. ಪ್ರತೀ ವಲಯದಲ್ಲಿ ಬೇರೆ ಬೇರೆ ಕೃಷಿ ಇದೆ. ಎಲ್ಲಾ ಕಡೆಯೂ ಸಮಸ್ಯೆಗಳೂ ಇವೆ. ಎಲ್ಲಾ ಕಡೆ ಕಳೆ ನಾಶಕ, ಕ್ರಿಮಿನಾಶಕ ಬಳಕೆಯ ಪರಿಣಾಮ ದೇಶವೇ ಸಮಸ್ಯೆ ಅನುಭವಿಸುತ್ತಿದೆ. ಇದರಿಂದ ಮುಕ್ತವಾಗಲು ಇಂದು ಕೇವಲ 2 ಶೇಕಡಾ ಕೃಷಿಕರು ಮಾತ್ರಾ ಸಾವಯವ ಕೃಷಿ ಮಾಡುತ್ತಿದ್ದಾರೆ. 130 ದಶಲಕ್ಷ ಹೆಕ್ಟೇರ್‌ ನಲ್ಲಿ ಶೇ.2 ರಷ್ಟು ಜನ ಮಾತ್ರಾ ಸಾವಯವ. ಹೀಗೇ ಆದರೆ 2033 ರ ವೇಳೆಗೆ ಈ ದೇಶದ ಮಣ್ಣು ಹಾಳಾಗಲಿದೆ ಎಂದು ವೈಜ್ಞಾನಿಕ ಅಧ್ಯಯನ ಇದೆ. ಇದಕ್ಕಾಗಿಯೇ ಸಾವಯವ ಕೃಷಿ ಅಗತ್ಯ ಇದೆ. ಈ ಮೂಲಕ ದೇಶ ರಕ್ಷಣೆ ಮಾಡಬೇಕಿದೆ ಎಂದು ಕಾಡಸಿದ್ಧಶ್ವರ ಸ್ವಾಮೀಜಿಗಳು ಹೇಳಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂದಿನ ಒಂದು ವರ್ಷ ಕೆಲವು ರಾಶಿಗಳಿಗೆ ಗುರು ಪ್ರವೇಶದಿಂದ ಆಗುವ ತೊಂದರೆಗಳು ಏನು..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

11 hours ago

ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …

ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…

21 hours ago

ಅಡಿಕೆ ಧಾರಣೆ ಏರುಪೇರು ಯಾಕಾಗಿ?

ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…

1 day ago

ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ

ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…

1 day ago

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

1 day ago