Advertisement
MIRROR FOCUS

ಶ್ರೀಲಂಕಾದಲ್ಲಿ ಅಡಿಕೆ ನಿಯಂತ್ರಣದ ಸವಾಲು | WHO ವೆಬಿನಾರ್‌ನಲ್ಲಿ ಪ್ರೊ. ಜಯಸಿಂಘೆ

Share

ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಅಪಾಯಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಆಯೋಜಿಸಿದ್ದ ವೆಬಿನಾರ್‌ನಲ್ಲಿ ಶ್ರೀಲಂಕಾದ ತಜ್ಞರು ಅಡಿಕೆ ನಿಯಂತ್ರಣದಲ್ಲಿ ಎದುರಾಗುತ್ತಿರುವ ಪ್ರಮುಖ ಸವಾಲುಗಳನ್ನು ಪ್ರಸ್ತಾಪಿಸಿದರು.

ಶ್ರೀಲಂಕಾದ ಪರದಿನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ರೂವಾನ್ ಡಿ. ಜಯಸಿಂಘೆ ಅವರು ದೇಶವನ್ನು ಪ್ರತಿನಿಧಿಸಿ ಮಾತನಾಡಿ, “ಶ್ರೀಲಂಕಾದಲ್ಲಿ ಪುರುಷರಲ್ಲಿ ಬಾಯಿ ಕ್ಯಾನ್ಸರ್ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದ್ದು, ಧೂಮರಹಿತ ತಂಬಾಕು ಬಳಕೆದಾರರಲ್ಲಿ ಅಡಿಕೆ ಸೇವನೆಯೂ ವ್ಯಾಪಕವಾಗಿದೆ” ಎಂದು ಎಚ್ಚರಿಸಿದರು.

ಪ್ರೊ. ಜಯಸಿಂಘೆ ಪ್ರಕಾರ, ಶ್ರೀಲಂಕಾದಲ್ಲಿ ಅಡಿಕೆ ಸೇವನೆ (ವಿಶೇಷವಾಗಿ ಅಡಿಕೆ ಹುಡಿ) ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳಿಗೆ ಬಳಕೆ ಇರುವುದರಿಂದ, ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಂತ ಕಷ್ಟಕರವಾಗಿದೆ.

ಶ್ರೀಲಂಕಾದಲ್ಲಿ ತಂಬಾಕು ಮತ್ತು ಮದ್ಯವನ್ನು NARTAC (National Authority on Tobacco and Alcohol) ಕಾಯ್ದೆಯಡಿ ನಿಯಂತ್ರಿಸಲಾಗುತ್ತದೆ. ಆದರೆ ಅಡಿಕೆ ಅದರಲ್ಲಿ ಸೇರಿಲ್ಲ. Food Act ಅಡಿಯಲ್ಲಿ ನಿಯಂತ್ರಣ ಪ್ರಯತ್ನಿಸಿದರೂ ಅದರ ವ್ಯಾಖ್ಯಾನದಲ್ಲಿ ಅಡಿಕೆಯು ಸಂಪೂರ್ಣವಾಗಿ ಒಳಗೊಂಡಿಲ್ಲ. ಹೀಗಾಗಿ ಯಾವ ಕಾನೂನಿನಡಿ ಅಡಿಕೆಯನ್ನು ನಿಯಂತ್ರಿಸಬೇಕು ಎಂಬ ಗೊಂದಲ ಮುಂದುವರಿದಿದೆ.

ಕೃಷಿ ಇಲಾಖೆ ಅಡಿಕೆಯನ್ನು “ಗೋಲ್ಡನ್ ಕ್ರಾಪ್” ಎಂದು ಪರಿಗಣಿಸಿ ಅದರ ಬೆಳವಣಿಗೆಯನ್ನು ಉತ್ತೇಜಿಸುತ್ತಿರುವಾಗ, ಆರೋಗ್ಯ ಇಲಾಖೆ ನಿಯಂತ್ರಣಕ್ಕೆ ಯತ್ನಿಸುತ್ತಿರುವುದು ನೀತಿ ಸಂಘರ್ಷಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಅಡಿಕೆ ಅನೌಪಚಾರಿಕ ಉತ್ಪನ್ನವಾಗಿದ್ದು ಸರಬರಾಜು ಜಾಲ ಬಹುತೇಕ ನಿಯಂತ್ರಣವಿಲ್ಲದೆ ಸಾಗುತ್ತಿದೆ. ಇದರಿಂದ ಅನುಷ್ಠಾನ ಇನ್ನಷ್ಟು ಕಠಿಣವಾಗಿದೆ. ಬಹುತೇಕ ಬಡ ಜನರಿಗೆ ಅಡಿಕೆ ಮರಗಳು ಜೀವನಾಧಾರವಾಗಿರುವುದರಿಂದ ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದು ಪ್ರೊ. ಜಯಸಿಂಘೆ  ಹೇಳಿದರು. ಅಡಿಕೆ ಉತ್ಪನ್ನಗಳು ಅಗ್ಗವಾಗಿದ್ದು ಎಲ್ಲೆಂದರಲ್ಲಿ ಸುಲಭವಾಗಿ ದೊರೆಯುವುದರಿಂದ ಬಳಕೆ ತಡೆಯುವುದು ದೊಡ್ಡ ಸವಾಲು ಆಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಜನರಿಗೆ ತಂಬಾಕಿನ ಅಪಾಯ ಹೆಚ್ಚು ಗೊತ್ತಿದ್ದರೂ, ಅಡಿಕೆ ಬಾಯಿ ಕ್ಯಾನ್ಸರ್ ಉಂಟುಮಾಡುವ ಕಾರ್ಸಿನೋಜೆನಿಕ್ ಉತ್ಪನ್ನ ಎಂಬ ಅರಿವು ಕಡಿಮೆ ಎಂದು ಅವರು ಹೇಳಿದರು. ಶ್ರೀಲಂಕಾದಲ್ಲಿ ಅಡಿಕೆಯ ಆರೋಗ್ಯ ಪರಿಣಾಮಗಳ ಕುರಿತು ಸಂಶೋಧನೆಯಲ್ಲಿ ಹಲವು ಗ್ಯಾಪ್‌ಗಳಿವೆ ಎಂದು ಪ್ರೊ. ಜಯಸಿಂಘೆ ತಿಳಿಸಿದರು.  ದೇಶವ್ಯಾಪಿ ದೀರ್ಘಾವಧಿ ಅಧ್ಯಯನಗಳ ಕೊರತೆ, Dose-response ಅಧ್ಯಯನ ಕಡಿಮೆ, ಮಹಿಳೆಯರು, ಬಾಲಕರು, ಗ್ರಾಮೀಣ ಸಮುದಾಯಗಳ ಬಳಕೆ ಕುರಿತ ಅಧ್ಯಯನ ಅಗತ್ಯ ಇದೆ. ತಂಬಾಕು, ಮದ್ಯ, HPV ವೈರಸ್ ಹಾಗೂ oral microbiome ಜೊತೆಗೆ ಸಂಯೋಜಿತ ಪರಿಣಾಮ ಕುರಿತು ಹೆಚ್ಚಿನ ಸಂಶೋಧನೆ ಬೇಕು. cessation  ಮತ್ತು intervention ಅಧ್ಯಯನಗಳು ವಿರಳ ಕೂಡಾ ಬೇಕಾಗಿದೆ.

ಪ್ರೊ. ಜಯಸಿಂಘೆ ಅವರು ಮುಂದಿನ ಸಂಶೋಧನೆಯ ಆದ್ಯತೆಗಳ ಬಗ್ಗೆ ಮಾತನಾಡುತ್ತಾ, ಬೇರೆ ಅಪಾಯಕಾರಕ ಅಂಶಗಳೊಂದಿಗೆ ಅಡಿಕೆಯ ಅಧ್ಯಯನ, ಸ್ಥಳೀಯ ಅಡಿಕೆ ಜಾತಿ ಹಾಗೂ ತಯಾರಿಕೆ ವಿಧಾನಗಳ ಹೋಲಿಕೆ,  Chemical profiling, genotoxicity ಮತ್ತು mechanistic studies ಅಗತ್ಯವಿದೆ. ಅಡಿಕೆಯಲ್ಲಿ heavy metals ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ,  ಬಾಯಿ ಕ್ಯಾನ್ಸರ್ ರೋಗಿಗಳಲ್ಲಿ heavy metals ಅಧಿಕವಾಗಿರುವುದಕ್ಕೆ ಕಾರಣ ಹುಡುಕುವ ಸಂಶೋಧನೆ ಅಗತ್ಯ ಇದೆ.

ಒಟ್ಟಾರೆ, ಶ್ರೀಲಂಕಾದಲ್ಲಿ ಅಡಿಕೆ ಬಳಕೆಯು ಸಾಂಸ್ಕೃತಿಕ, ಆರ್ಥಿಕ ಹಾಗೂ ಕಾನೂನು ಅಡಚಣೆಗಳಿಂದ ನಿಯಂತ್ರಣಕ್ಕೆ ಬಾರದಂತಾಗಿದ್ದು, ತಕ್ಷಣವೇ ನೀತಿ ಹಾಗೂ ಸಂಶೋಧನಾ ಕ್ರಮಗಳನ್ನು ಬಲಪಡಿಸಬೇಕಾಗಿದೆ ಎಂದು WHO ವೆಬಿನಾರ್‌ನಲ್ಲಿ  ಅಭಿಪ್ರಾಯಪಟ್ಟರು.

ಇದನ್ನೂ ಓದಿ…. 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪುತ್ತೂರು ಸುಳ್ಯ ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು, ಬೆಳ್ಳಾರೆ, ಪಂಜ ಸೇರಿದಂತೆ ಹಲವೆಡೆ…

8 hours ago

ಹವಾಮಾನ ವರದಿ | 25-02-2026 | ಕರಾವಳಿ ಮತ್ತು ಮಲೆನಾಡಿನಲ್ಲಿ ತುಂತುರು ಮಳೆ ಸಾಧ್ಯತೆ | ಫೆ.27 ರಿಂದ ಬಿಸಿಲು ಹೆಚ್ಚಳದ ಸೂಚನೆ

ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡು ಜಿಲ್ಲೆಗಳಲ್ಲಿ ತುಂತುರು ಮಳೆ ಮತ್ತು ಮೋಡದ…

11 hours ago

ಹವಾಮಾನ ವರದಿ | 24-02-2026 | ತುಂತುರು ಮಳೆ, ಮೋಡದ ವಾತಾವರಣ ಮುಂದುವರಿಕೆ | ಮಾರ್ಚ್ ಮೊದಲ ವಾರದಿಂದ ಬಿಸಿಲು ಹೆಚ್ಚಳ ಸಾಧ್ಯತೆ

ಕರ್ನಾಟಕದ ವಿವಿಧ ಭಾಗಗಳಲ್ಲಿ ಫೆಬ್ರುವರಿ 25ರ ಬೆಳಿಗ್ಗೆ 8 ಗಂಟೆವರೆಗೆ ತುಂತುರು ಮಳೆ,…

1 day ago

ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ

ಕಡಬ ತಾಲೂಕಿನ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಜನಾ ಮಂಡಳಿ ಉದ್ಘಾಟನೆ…

2 days ago

ಔಷಧ ಕ್ಷೇತ್ರದಲ್ಲಿ ಭಾರತದ ಐತಿಹಾಸಿಕ ಸಾಧನೆ | ಲಸಿಕೆ ತಯಾರಿಕೆಯಲ್ಲಿ ಜಾಗತಿಕ ಮುಂಚೂಣಿ

ಟೆಟಾನಸ್ ಮತ್ತು ಡಿಫ್ತೀರಿಯಾ ಲಸಿಕೆ ಬಿಡುಗಡೆ ವೇಳೆ ಭಾರತ ಲಸಿಕೆ ತಯಾರಿಕೆಯಲ್ಲಿ ಜಾಗತಿಕ…

2 days ago

ಮುಂದಿನ ವರ್ಷದಿಂದ 1–10ನೇ ತರಗತಿಗೆ ‘ನೈತಿಕ ವಿಜ್ಞಾನ’ ಪಠ್ಯ ಪರಿಚಯ | ಸಚಿವ ಮಧು ಬಂಗಾರಪ್ಪ ಘೋಷಣೆ

ಮುಂದಿನ ವರ್ಷದಿಂದ ಕರ್ನಾಟಕದ 1ರಿಂದ 10ನೇ ತರಗತಿಯವರೆಗೆ ‘ನೈತಿಕ ವಿಜ್ಞಾನ’ ಪಠ್ಯ ಪರಿಚಯಿಸಲಾಗುವುದು…

2 days ago