ಯುವಪೀಳಿಗೆಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಮಾನವೀಯತೆಯ ಶಿಕ್ಷಣ ನೀಡುವ ಅಗತ್ಯ ತುಂಬಾ ಇದೆ. ಯಾಕೆಂದರೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ರಾಮ ವೃದ್ಧರ ಪ್ರತಿಪೂಜಕ, ಯಾವತ್ತು ಯಾರನ್ನೂ ಕೀಳಾಗಿ ಕಂಡವನಲ್ಲ. ಈ ನಿಟ್ಟಿನಲ್ಲಿ ರಾಮ ನಮಗೆ ಯಾಕೆ ಬೇಕು ಎಂಬ ಪ್ರಶ್ನೆ ನಮ್ಮೊಳಗೆ ಕೇಳಿದಾಗ ರಾಮ ನಮ್ಮೊಳಗಿನ ಪರಮಾತ್ಮ ಎಂಬುದೇ ಅದಕ್ಕಿರುವ ಉತ್ತರ. ಆದರೆ ನಮಗಿನ್ನೂ ಕೂಡ ರಾಮನೇನೆಂಬುದು ಅರ್ಥವಾಗಿಲ್ಲ ಎಂದು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ ಎಂ ಕೆ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ವಿಜ್ಞಾನ ಸಂಘ ಹಾಗೂ ರೆಡ್ ಕ್ರಾಸ್ ಇದರ ಆಶ್ರಯದಲ್ಲಿ ನಡೆದ ಸೀತಾರಾಮ ಸ್ಮರಣೆಯಲ್ಲಿ ‘ಶ್ರೀರಾಮ ಗುಣ ವರ್ಣನೆ’ ಎಂಬ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದರು.
ರಾಮಾಯಣ ಕಾವ್ಯವೂ ಹೌದು, ಗ್ರಂಥವು ಹೌದು. ರಾಮನೆಂದರೆ ತನ್ನ ಆನಂದಕ್ಕಿಂತ ತನ್ನೊಂದಿಗಿರುವವರ ಆನಂದಕ್ಕೆ ಪ್ರಾಮುಖ್ಯತೆ ಕೊಡುವವನು. ಹಾಗಾಗಿಯೇ ಇಪ್ಪತೊಂದು ಶ್ಲೋಕಗಳಲ್ಲಿ ರಾಮನ ಗುಣವನ್ನು ವರ್ಣಿಸಲಾಗಿದೆ. ರಾಮನು ಹೋಲಿಕೆಗೆ ನಿಲುಕದವನು. ರಾಮ ಸರ್ವ ಗುಣ ಸಂಪನ್ನನೂ, ವ್ಯವಹಾರ ಜ್ಞಾನಿ, ಸಕಲರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಅವನಲ್ಲಿತ್ತು. ಪಂಚೇಂದ್ರಿಯಗಳನ್ನು ಗೆದ್ದ ರಾಮ ಯಾರನ್ನು ದ್ವೇಷಿಸಿದವನು, ತನ್ನನ್ನು ದ್ವೇಷಿಸಿದವರನ್ನು ಕೂಡ ಪ್ರೀತಿಸುವ ಗುಣ ಆತನದ್ದು. ಹಾಗಾಗಿ ರಾಮ ಎಲ್ಲರೊಳಗೆ ಇದ್ದಾನೆ. ನಾನು ರಾಮನಾಗಬೇಕೋ, ರಾವಣನಾಗಬೇಕೋ ಎಂಬ ನಿರ್ಧಾರ ನಮ್ಮದು. ಅದಾಗಿಯೂ ರಾಮನ ಗುಣಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಸದಸ್ಯೆ ಶುಭಾ ಅಡಿಗ ವಹಿಸಿದ್ದರು. ವೇದಿಕೆಯ ಮುಂಬಾಗದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ ಎನ್, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್, ಬೋಧಕ ಹಾಗೂ ಬೋಧಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಅಮೃತ ಸ್ವಾಗತಿಸಿ, ನಾಗರತ್ನ ವಂದಿಸಿದರು. ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಲಾವಣ್ಯ ಎಸ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ರಾಮೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮವನ್ನು ಕಾಲೇಜಿನ ಪರಿಚಾರಿಕೆ ಗೀತಾ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕೊನೆಯಲ್ಲಿ ರಾಮ ಭಾವಪೂಜೆ ಹಾಗೂ ರಾಮ ತಾರಕ ಮಂತ್ರದ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಗ್ರಂಥಾಲಯ ಸಹಾಯಕ ಜಯರಾಮ ಪಿ, ಕಾಲೇಜಿನ ಕಚೇರಿ ಸಹಾಯಕ ರಾಜೇಶ್, ಪರಿಚಾರಿಕೆಯರಾದ ಪುಷ್ಪಾ ಹಾಗೂ ತುಳಸಿ ಇವರಿಗೆ ಗೌರವ ಸಮರ್ಪಿಸಲಾಯಿತು.
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…