ಬಟ್ಟೆ ಗಲೀಜಾಗಿದೆ ಎಂದು ಮೆಟ್ರೋದ ಒಳಗೆ ಬಿಡದ ಸಿಬ್ಬಂದಿ | ರೈತನನ್ನು ಅವಮಾನಿಸಿದ್ದಕ್ಕೆ ಸಹಪ್ರಯಾಣಿಕರ ಆಕ್ರೋಶ | ಮೆಟ್ರೋ ಸಿಬ್ಬಂದಿ ವಜಾ

February 26, 2024
12:24 PM
ಬಟ್ಟೆ ಗಲೀಜಾಗಿದೆ ಎಂದು ರೈತನನ್ನು ಮೆಟ್ರೋದಲ್ಲಿ ಪ್ರಯಾಣಕ್ಕೆ ಅನುಮತಿ ನೀಡಲಿಲ್ಲ. ಇದೀಗ ಈ ವಿಡಿಯೋ ವೈರಲ್‌ ಆಗಿದೆ. ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ರೈತ(Farmer) ಬೆಳೆದ ಅನ್ನವನ್ನು ತಿಂದು ಕೊಬ್ಬಿರುವ ಕೆಲ ಅಧಿಕಾರಿಗಳು(Officer) ಅವರ ದುರಹಂಕಾರ, ದರ್ಪವನ್ನು ರೈತರ ಮೇಲೆಯೇ ತೋರುತ್ತಿರುವುದು ಅಸಹನೀಯ. ರೈತ ಮಣ್ಣಿನೊಂದಿಗೆ ಬದುಕುವವನು. ಅವನ ಮೈ, ಬಟ್ಟೆ ಕೊಳೆಯಾದರೇನೇ ನಾವೆಲ್ಲಾ ಅನ್ನ ತಿನ್ನಬಹುದು. ಬಟ್ಟೆ ಮಣ್ಣಾಗಿದೆ, ಮೈ ಕೊಳೆಯಾಗಿದೆ ಎಂದು ರೈತನನ್ನು ಮೆಟ್ರೋ (Namma Metro) ಸಿಬ್ಬಂದಿ ನಿಲ್ದಾಣದ ಒಳಗೆ ಬಿಡಲು ನಿರಾಕರಿಸಿದ ಘಟನೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಬಿಎಂಆರ್‌ಸಿಎಲ್‌ (BMRCL) ಸಿಬ್ಬಂದಿಯ ಅತಿರೇಕದ ವರ್ತನೆಯ ವೀಡಿಯೋ ಪ್ರಯಾಣಿಕರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಬಳಿಕ ಸಹಪ್ರಯಾಣಿಕರು ಸಿಬ್ಬಂದಿ ಬಗ್ಗೆ ತಲೆಕೆಡಿಸಿಕೊಳ್ಳದೆ, ವ್ಯಕ್ತಿಯನ್ನು ಮೆಟ್ರೋದಲ್ಲಿ ಕರೆದೊಯ್ದಿದ್ದಾರೆ. ಅಲ್ಲದೇ ಮೆಟ್ರೋ ಸಿಬ್ಬಂದಿ ವಿರುದ್ಧ ಸಹಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಟ್ಟೆ ಕ್ಲೀನ್ ಇಲ್ಲವೆಂದು ವ್ಯಕ್ತಿಯನ್ನು ಒಳಗೆ ಬಿಡದ ಮೆಟ್ರೋ (Namma Metro) ಸಿಬ್ಬಂದಿಯನ್ನುಈಗ  ವಜಾಗೊಳಿಸಲಾಗಿದೆ ಎಂದು ಎಂಡಿ ಮಹೇಶ್ವರನ್ ಹೇಳಿದ್ದಾರೆ.

Advertisement

ವೀಡಿಯೋವನ್ನು ಜನ ಬಿಎಂಆರ್‌ಸಿಎಲ್‌ ಟ್ಯಾಗ್ ಮಾಡಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಟಿಪ್ ಟಾಪ್ ಆಗಿ ರೆಡಿಯಾಗಿ ಬಂದರೆ ಮಾತ್ರ ಮೇಟ್ರೋದೊಳಗೆ ಎಂಟ್ರಿ, ಇಲ್ಲವಾದರೆ ಎಂಟ್ರಿ ಇಲ್ಲವೇ? ವಿಐಪಿಗಳಿಗೆ ಮಾತ್ರ ಮೆಟ್ರೋ ಸೌಲಭ್ಯವೇ ಎಂದು ಪ್ರಶ್ನಿಸಿದ್ದಾರೆ. ಅತಿರೇಕದ ವರ್ತನೆ ತೋರಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಘಟನೆ ತಡವಾಗಿ ಬೆಳಕಿಗೆ ಬಂತು. ಇದು ಯಾವುದೇ ಕಾರಣಕ್ಕೂ ಕ್ಷಮಿಸುವಂತದ್ದಲ್ಲ. ಕೂಡಲೇ ಘಟನೆಗೆ ಕಾರಣರಾದವರನ್ನ ಟರ್ಮಿನೇಟ್ ಮಾಡಲಾಗಿದೆ. ಘಟನೆಯನ್ನ ಬಿಎಂಆರ್‍ಸಿಎಲ್ ಖಂಡಿಸುತ್ತಿದೆ ಎಂದು ಬಿಎಂಆರ್ ಸಿಎಲ್ ಪಿಆರ್ ಒ ಯಶವಂತ ಚೌಹಾಣ್ ಖಾಸಗಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

– ಅಂತರ್ಜಾಲ ಮಾಹಿತಿ

Namma Metro is an inclusive public transport. The Rajajinagar incident is probed & the services of the security supervisor is terminated. BMRCL regrets the inconvenience caused to the Passenger.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕ್ಯಾಂಪ್ಕೊ ಬ್ರ್ಯಾಂಡ್ ಅಡಿಕೆ ಅಂತರಾಷ್ಟ್ರೀಯ ಮಟ್ಟಕ್ಕೆ
March 29, 2025
11:04 PM
by: ದ ರೂರಲ್ ಮಿರರ್.ಕಾಂ
ಬಂಡಿಪುರ ಅರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಚರ್ಚಿಸಿ ನಿರ್ಧಾರ | ಅರಣ್ಯ ಸಚಿವ ಈಶ್ವರ್ ಖಂಡ್ರೆ
March 29, 2025
9:58 AM
by: The Rural Mirror ಸುದ್ದಿಜಾಲ
ಬೇಸಿಗೆ ಹಿನ್ನೆಲೆ | ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಬಿಡುಗಡೆ ಕುರಿತು ಚರ್ಚೆ
March 29, 2025
9:54 AM
by: The Rural Mirror ಸುದ್ದಿಜಾಲ
ವಿಶೇಷ ಕಾಫಿ ಉತ್ಪನ್ನಗಳ ಬಿಡುಗಡೆ | ಡಿಪ್ ಕಾಫಿ ಬ್ಯಾಗ್ ಗಳನ್ನು ಪರಿಚಯಿಸಿದ ಕಾಫಿ ಬೋರ್ಡ್
March 29, 2025
9:49 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group