ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನದ ಆಚರಣೆ ನಡೆಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಚಳುವಳಿ ಗ್ರಾಮೀಣ ಭಾಗದಲ್ಲೂ ಕಾವು ಪಡೆಯಬೇಕಿದೆ. ಇದೇ ಸಂದರ್ಭ ಬಟ್ಟೆ ಚೀಲ ತಯಾರು ಮಾಡುವ ಮೂಲಕ ಮಹಿಳೆಯರೂ ಸ್ವ ಉದ್ಯೋಗದ ಹೆಜ್ಜೆ ಇರಿಸುತ್ತಿದ್ದಾರೆ. ಗ್ರಾಮೀಣ ಭಾಗದ ಈ ಬಟ್ಟೆ ಚೀಲ ತಯಾರಿಕೆಗೆ, ಬಳಕೆಗೆ ಈಗ ಬೆಂಬಲ ಸಿಗಬೇಕಿದೆ.
ಜುಲೈ 3. ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ ಎಂದು ಆಚರಿಸಲಾಗುತ್ತದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯ ಪ್ರಮಾಣವನ್ನು ತಡೆಯಲು ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನಾಗಿ ಆಚರಿಸುತ್ತದೆ. ಮಣ್ಣಲ್ಲಿ ಕರಗದ ಪ್ಲಾಸ್ಟಿಕ್ ಈ ಪರಿಸರದ ಮೇಲೆ ವ್ಯಾಪಕವಾದ ಹಾನಿ ಉಂಟು ಮಾಡುತ್ತಿದೆ. ಈ ಕಾರಣದಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಲೇಬೇಕು ಎಂದು ವಿಶ್ವದೆಲ್ಲೆಡೆ ಸರ್ಕಾರ ಮತ್ತು ನಾಗರಿಕ ಸಮಾಜ ಪ್ಲಾಸ್ಟಿಕ್ ಮರುಬಳಕೆಯ ಗುರಿಯನ್ನು ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಅನೇಕ ನಿರ್ಣಯಗಳನ್ನು ಅಂಗೀಕರಿಸುತ್ತವೆ. ಅಂತಹದ್ದರಲ್ಲಿ ಬಟ್ಟೆ ಚೀಲ ಬಳಕೆಯೂ ಒಂದಾಗಿದೆ.
ಸರ್ಕಾರಗಳು ಯಾವುದೇ ಯೋಜನೆ ಕೈಗೊಂಡರೂ ಅದು ಜಾರಿಯಾಗುವುದು ಜನರಿಂದಲೇ. ಇದಕ್ಕಾಗಿ ಜನರಿಗೆ ಜಾಗೃತಿಯಾಗಬೇಕಿದೆ. ಜನರಲ್ಲೇ ಅರಿವು ಮೂಡಬೇಕಿದೆ. ಗ್ರಾಮೀಣ ಭಾಗದಲ್ಲೂ ಸರ್ಕಾರದ ಇಂತಹ ಯೋಜನೆಗಳಿಗೆ ಗ್ರಾಮೀಣ ಭಾಗದಲ್ಲೂ ಸ್ಪಂದನೆ ದೊರೆತರೆ ಮಾತ್ರ ಪರಿಸರ ಜಾಗೃತಿ, ಅರಿವು, ಉಳಿವು ಸಾಧ್ಯವಿದೆ. ಪ್ಲಾಸ್ಟಿಕ್ ಮುಕ್ತ, ಬಟ್ಟೆ ಚೀಲದ ಈ ಅಭಿಯಾನದಲ್ಲಿ ಮಹಿಳಾ ಘಟಕವೊಂದು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದೀಗ ಬಟ್ಟೆ ಚೀಲ ತಯಾರು ಮಾಡಿ ತಮ್ಮ ಊರಿನ ಅಂಗಡಿಗಳಿಗೆ ನೀಡಲು ತಯಾರಿ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಗ್ರಾಮದ ಅಮರಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ದೀಪ ಸಂಜೀವಿನ ಘಟಕದ ಸಾರಥ್ಯದಲ್ಲಿ ಮಹಿಳೆಯರು ಈಗ ಬಟ್ಟೆ ಚೀಲ ತಯಾರಿಕಾ ಘಟಕವನ್ನು ಆರಂಭಿಸಿದ್ದಾರೆ. ಮಾರ್ಚ್ ಅಂತ್ಯಕ್ಕೆ ಈ ಬಗ್ಗೆ ತರಬೇತಿ ಪಡೆದು ಗ್ರಾಮವನ್ನು ಪ್ಲಾಸಿಕ್ ಮುಕ್ತ ಮಾಡುವ ಕಡೆಗೆ ಹೆಜ್ಜೆ ಇರಿಸುವ ವೇಳೆ ಪ್ಲಾಸ್ಟಿಕ್ ಚೀಲದ ಬದಲಾಗಿ ಬಟ್ಟೆ ಚೀಲ ತಯಾರು ಮಾಡುವ ಗೃಹೋದ್ಯಮವನ್ನು ಆರಂಭ ಮಾಡಿದ್ದಾರೆ. ಗುತ್ತಿಗಾರು ಗ್ರಾಮದ ನಡುಗಲ್ಲು ಹಾಗೂ ಆಸುಪಾಸಿನ ವಿವಿಧ ಕಡೆಗೆ ಸುಮಾರು 30 ಆಸಕ್ತ ಮಹಿಳೆಯರು ಬಟ್ಟೆ ಚೀಲ ತಯಾರಿಕೆಗೆ ಮುಂದೆ ಬಂದಿದ್ದಾರೆ. ಬಟ್ಟೆಯನ್ನು ಮಹಿಳೆಯರಿಗೆ ನೀಡಿ ಅವರು ಚೀಲ ತಯಾರಿಸಿ ನೀಡುವ ಉದ್ದೇಶವನ್ನು ಇಲ್ಲಿ ಹೊಂದಲಾಗಿದೆ. ಗ್ರಾಮದಲ್ಲಿ ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಚೀಲ ಉಪಯೋಗಿಸುವಂತೆ ಪ್ರೇರಪಣೆ ನೀಡುವುದು ಹಾಗೂ ಈ ಮೂಲಕ ಪ್ಲಾಸ್ಟಿಕ್ ಮುಕ್ತ ಮಾಡುವುದು ಇದರ ಉದ್ದೇಶವಾಗಿದೆ.
ಈಗಾಗಲೇ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಟ್ಟೆ ಚೀಲಗಳಿಗೆ ಬೇಡಿಕೆ ಬಂದಿದ್ದು, ಪ್ಲಾಸ್ಟಿಕ್ ಚೀಲ ಮುಕ್ತ ಮಾಡುವ ಜಾಗೃತಿ ಯೋಜನೆಗೆ ಚಾಲನೆ ದೊರೆತಿದೆ, ಅದರ ಜೊತೆಗೇ ವರ್ತಕರೂ ಪ್ರಾಯೋಗಿಕವಾಗಿ ಬಟ್ಟೆ ಚೀಲದ ಬೇಡಿಕೆ ವ್ಯಕ್ತಪಡಿಸಿದ್ದಾರೆ. ಈ ಅಭಿಯಾನವು ಮುಂದೆ ಇಡೀ ಗ್ರಾಮದಲ್ಲಿ ನಡೆಯಬೇಕಿದೆ. ಗ್ರಾಮದ ಹಾಗೂ ಇತರ ಕಡೆಗೂ ಬಟ್ಟೆ ಚೀಲಗಳನ್ನು ತಯಾರಿಸಿ ಕೊಡಲು ಈ ಮಹಿಳಾ ತಂಡ ಉತ್ಸಾಹದಲ್ಲಿದೆ. ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನದ ಅಭಿಯಾನದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮಹಿಳಾ ತಂಡವೂ ಈ ಮೂಲಕ ಗುರುತಿಸಿಕೊಂಡಿದೆ.
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…