ಪರಿಸರ ರಕ್ಷಣೆಗೆ ಭೂಮಿ ಖರೀದಿಗೆ ಮುಂದಾದ ಸಂಸ್ಥೆ | 2035 ರ ವೇಳೆಗೆ 10,000 ಎಕರೆ ಹಸಿರು ಹೊದಿಕೆಯ ಗುರಿ…! |

June 11, 2023
11:13 AM

ಜೂನ್‌ ತಿಂಗಳು ಆರಂಭವಾಗುತ್ತಿದ್ದಂತೆಯೇ ಪರಿಸರದ ಕಾಳಜಿಗಳು ಕಾಣುತ್ತವೆ. ಎಲ್ಲೆಡೆಯೂ ಪರಿಸರ ರಕ್ಷಣೆಯದೇ ಸುದ್ದಿ. ಹಸಿರು ಮಾತಿನದೇ ಚರ್ಚೆ. ಆದರೆ ಇಲ್ಲೊಂದು ಸಂಸ್ಥೆ, ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಕಂಪನಿ, ತನ್ನ ಮೂಲ ಉದ್ದೇಶದ ಜೊತೆಗೆ ಲಾಭ ರಹಿತವಾಗಿ ಪರಿಸರ ರಕ್ಷಣೆಗೆ ಭೂಮಿ ಖರೀದಿಗೆ ಮುಂದಾಗಿದೆ. 2035 ರ ವೇಳೆಗೆ ಪಶ್ಚಿಮ ಘಟ್ಟಗಳಲ್ಲಿ 10,000 ಎಕರೆ ಭೂಮಿಯನ್ನು ಸಂರಕ್ಷಿಸುವ ಗುರಿಯನ್ನು ಇರಿಸಿಕೊಂಡಿದೆ.

Advertisement

ಅರಣ್ಯನಾಶಕ್ಕೆ ಸಂಬಂಧಿಸಿದಂತೆ ಬ್ರೆಜಿಲ್ ನಂತರ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. 2022 ರಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರವು ಕಡಿಮೆ ಮಾಡಿದೆ ಎನ್ನುವ ಆರೋಪ ಇದೆ. ವಿಶ್ವದಲ್ಲಿ ಗ್ಲೋಬಲ್‌ ವಾರ್ಮಿಂಗ್‌ ಸುದ್ದಿ ಮಾಡುತ್ತಿದೆ. ಹವಾಮಾನದಲ್ಲಿ ಗಂಭೀರ ಏರುಪೇರುಗಳು ಕಾಣುತ್ತಿವೆ. ಈಚೆಗೆ ದೇಶದಲ್ಲಿ  ಅರಣ್ಯ ಪ್ರದೇಶದ ಬೆಳವಣಿಗೆಯು ಎಂಟು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ.

ಈ ನಡುವೆ ಬೆಂಗಳೂರು ಮೂಲದ ಸ್ಟಾರ್ಟ್ಅಪ್  ಕಂಪನಿಯೊಂದು ತನ್ನ ಲಾಭದ ಉದ್ದೇಶ ಬಿಟ್ಟು ಪರಿಸರವನ್ನು ರಕ್ಷಿಸಲು ಗ್ರಾಮೀಣ ಭಾಗದಲ್ಲಿ ಅಥವಾ ಅರಣ್ಯದ ಬಳಿ  ಖಾಸಗಿ ಭೂಮಿಯನ್ನು ಖರೀದಿಸಲು ಚಿಂತನೆ ನಡೆಸಿದೆ. ಅಲ್ಲಿ  ಮನೆಗಳನ್ನು ನಿರ್ಮಿಸುವ ಬದಲು ಹಸಿರು ಹೊದಿಕೆ ಮತ್ತು ನೈಸರ್ಗಿಕವಾಗಿಯೇ ಪರಿಸರ ರಕ್ಷಿಸಲು ಭೂಮಿಯನ್ನು ಖರೀದಿಸುವ ಮೂಲಕ ಉದ್ದೇಶ ಹೊಂದಿದೆ. ಉದ್ಯಮಿ ನಿಶಾಂತ್ ಪ್ರಸನ್ನ ಮತ್ತು ಪರಿಸರವಾದಿ ಅಭಿಷೇಕ್ ಜೈನ್ ಸ್ಥಾಪಿಸಿದ ಬೆಂಗಳೂರು ಮೂಲದ ಮೈಸಿಲಿಯಮ್(Mycelium) ಸಂಸ್ಥೆ ಅರಣ್ಯಗಳ ಪಕ್ಕದಲ್ಲಿರುವ ಖಾಸಗಿ ಭೂಮಿಯನ್ನು ಸಂರಕ್ಷಣೆಗಾಗಿ ಖರೀದಿಸುತ್ತಿದೆ.  ಇದಕ್ಕಾಗಿ ಜನರ ನೆರವನ್ನೂ ಪಡೆಯುತ್ತದೆ. ಆದರೆ  ಈ ಸಮೂಹಗಳ ಸದಸ್ಯರು ಭೂಮಿಯನ್ನು ತಮಗಾಗಿ ಖರೀದಿ ಮಾಡುವುದಿಲ್ಲ, ಜನರ ಕೊಡುಗೆ, ಸಹಾಯಕ್ಕೆ  ಪ್ರತಿಯಾಗಿ ಮೈಸಿಲಿಯಮ್‌ನಲ್ಲಿ ಇಕ್ವಿಟಿಯನ್ನು ನೀಡಲಾಗುತ್ತದೆ.

ಸಂಸ್ಥೆಯು ಅರಣ್ಯ ಅನುಭವಗಳನ್ನು ಒದಗಿಸುವುದು, ಚಾರಣಗಳನ್ನು ಆಯೋಜಿಸುವುದು ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತದೆ.ಇದರ ಜೊತೆಗೆ ಅರಣ್ಯದ ಸಮೀಪವಿರುವ ಭೂಮಿಯಲ್ಲಿ ಸಾವಯವ ಉತ್ಪನ್ನಗಳನ್ನು ಬೆಳೆಯುತ್ತದೆ ಮತ್ತು ಅದಕ್ಕೆ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.ಈ ಮೂಲಕ ಬರುವ ಆದಾಯದಿಂದ ಮತ್ತೆ ಪರಿಸರ ಬೆಳೆಸುವ ಯೋಜನೆ ಹೊಂದಿದೆ. 2035 ರ ವೇಳೆಗೆ ಪಶ್ಚಿಮ ಘಟ್ಟಗಳಲ್ಲಿ 10,000 ಎಕರೆ ಭೂಮಿಯನ್ನು ಸಂರಕ್ಷಿಸುವುದು ಅವರ ಗುರಿಯಾಗಿದೆ.

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group