ಬಿಎಸ್​ವೈ ಮಗ, ಉಮೇಶ್ ಕತ್ತಿ ಪುತ್ರ, ಸೋದರನಿಗೆ ಟಿಕೆಟ್; ಶಾ ಪ್ರಕಾರ ಕುಟುಂಬ ರಾಜಕಾರಣ ಎಂದರೇನು?

May 1, 2023
3:09 PM

ಬಿಜೆಪಿ ಕುಟುಂಬ ರಾಜಕಾರಣ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದೆ. ಆದ್ರೂ ಈ ಬಾರಿ ಮಾಜಿ ಸಚಿವ ಉಮೇಶ್ ಕತ್ತಿ ಪುತ್ರ, ಸೋದರನಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಇತ್ತ ಆನಂದ್ ಮಾಮನಿ ಪತ್ನಿ ರತ್ನಾ ಮಾಮನಿ, ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೇರಿದಂತೆ ಹಲವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಬೆಳಗಾವಿ ಲೋಕಸಭಾ ಉಪ ಚುನಾವಣೆ ವೇಳೆ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ನೀಡಲಾಗಿತ್ತು. ಆದ್ರೆ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿತ್ತು. ಟಿಕೆಟ್ ತಪ್ಪಿದ್ದಕ್ಕೆ ನಾವು ಕುಟುಂಬ ರಾಜಕಾರಣ ಮಾಡಲ್ಲ ಎಂದು ಹೇಳಿದ್ದ ಬಿಜೆಪಿ ತೇಜಸ್ವಿ ಸೂರ್ಯ ಅವರಿಗೆ ಅವಕಾಶ ನೀಡಿತ್ತು.

Advertisement

ಕೆಲವರ ಮಕ್ಕಳಿಗೆ ಟಿಕೆಟ್, ಒಂದಿಷ್ಟು ಕುಟುಂಬಗಳಿಗೆ ಯಾಕೆ ಅವಕಾಶ ಇಲ್ಲ. ಹಾಗಾದ್ರೆ ಕುಟುಂಬ ರಾಜಕಾರಣ ಅಥವಾ ಪರಿವಾರವಾದ ಎಂದರೇನು ಎಂಬ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಿದ್ದಾರೆ.

ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಪರಿವಾರವಾದ ಎಂದರೇನು? ಯಾಕೆ ಕೆಲವರಿಗೆ ಅವಕಾಶ ಸಿಕ್ತು ಎಂಬುದರ ಬಗ್ಗೆ ವಿವರವಾಗಿ ಹೇಳಿದ್ದಾರೆ.

ಅಮಿತ್ ಶಾ ಹೇಳಿದ ವ್ಯಾಖ್ಯಾನ

ಪರಿವಾರವಾದ/ಕುಟುಂಬ ರಾಜಕಾರಣದ ಬಗ್ಗೆ ನಮ್ಮ ಮತ್ತು ನಿಮ್ಮ ನಡುವಿನ ವ್ಯಾಖ್ಯಾನ ಭಿನ್ನವಾಗಿದೆ. ನನ್ನ ಪ್ರಕಾರ ಪರಿವಾರದವಾದ ಅದ್ರೆ ಒಬ್ಬ ವ್ಯಕ್ತಿ ಮುಖ್ಯಮಂತ್ರಿಯಾದ್ರೆ, ನಂತರ ಅತನೇ ಮಗ ಸಿಎಂ ಆಗೋದು. ಒಬ್ಬ ಪಕ್ಷದ ಅಧ್ಯಕ್ಷನಾದ್ರೆ ನಂತರ ಅವನೇ ಮಗನೇ ಆ ಸ್ಥಾನಕ್ಕೆ ಬರೋದು.

ಯಡಿಯೂರಪ್ಪ ನಂತರ ಬಸವರಾಜ್ ಬೊಮ್ಮಾಯಿ ಸಿಎಂ ಆದರು. ಚುನಾವಣೆಗೆ ಸ್ಪರ್ಧೆ ಮಾಡಿದ್ರು ಅಂತ ಅದನ್ನು ಪರಿವಾರವಾದ ಅಥವಾ ಕುಟುಂಬ ರಾಜಕಾರಣ ಎಂದು ಹೇಳಲು ಆಗಲ್ಲ.

karnataka assembly election 2023 savadatti bjp candidate ratna mamani political profile stg mrqರತ್ನಾ ಮಾಮನಿ, ಬಿಜೆಪಿ ಅಭ್ಯರ್ಥಿ

ಉದಾಹರಣೆಗಳನ್ನ ಮುಂದಿಟ್ಟ ಅಮಿತ್ ಶಾ

ಕಾಂಗ್ರೆಸ್​ನಲ್ಲಿ ಜವಾಹರ್ ಲಾಲ್ ನೆಹರು ಬಳಿಕ ಇಂದಿರಾ ಗಾಂಧಿ ಬಂದರು. ತದನಂತ ರಾಜೀವ್ ಗಾಂಧಿ, ಸೋನಿಯಾ ಗಾಂಧಿ. ಈಗ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಂದಿದ್ದಾರೆ. ಇದನ್ನು ಕುಟುಂಬ ರಾಜಕಾರಣ ಎಂದು ಹೇಳುತ್ತೇವೆ. ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್ ಹೀಗೆ ಒಂದೇ ಕುಟುಂಬ ಪಕ್ಷದ ಮೇಲೆ ಹಿಡಿತ ಸಾಧಿಸೋದು ಕುಟುಂಬ ರಾಜಕಾರಣ ಆಗುತ್ತದೆ ಎಂದು ಹೇಳುತ್ತಾ ಹಲವು ಉದಾಹರಣೆಗಳನ್ನು ನೀಡಿದರು.

ಪಕ್ಷದ ನಿಯಂತ್ರಣ ಕುಟುಂಬದ ಬಳಿ ಇರಬಾರದು

ಎಲ್​ಕೆ ಅಡ್ವಾಣಿ ಅವರ ಬಳಿಕ ಆ ಸ್ಥಾನಕ್ಕೆ ಮೋದಿ ಅವರು ಬಂದರು. ನಂತರ ನಾನು ಪಕ್ಷದ ಅಧ್ಯಕ್ಷನಾದೆ. ಈಗ ಜೆಪಿ ನಡ್ಡಾ ಅವರು ನಮ್ಮ ಪಕ್ಷದ ಅಧ್ಯಕ್ಷರು. ಮುಂದೆ ನಡ್ಡಾ ಬಳಿಕ ಬೇರೆ ಜನರು ಬರುತ್ತಾರೆ. ಎಲ್ಲಿಯೂ ಒಂದೇ ಕುಟುಂಬದವರು ಪಕ್ಷದ ಅಧ್ಯಕ್ಷರು ಆಗಿಲ್ಲ ಎಂದರು. ಯಾವುದೇ ಪಕ್ಷದ ನಿಯಂತ್ರಣ ಒಂದು ಕುಟುಂಬದ ಬಳಿಯಲ್ಲಿ ಇರಬಾರದು ಎಂದು ಅಭಿಪ್ರಾಯಪಟ್ಟರು.

amit shah interview, amit shah politics, congress family politics, bjp family politics, kannada news, karnataka news, ಅಮಿತ್ ಶಾ ಸಂದರ್ಶನ, ಕುಟುಂಬ ರಾಜಕಾರಣದ ಅರ್ಥ ಸೋನಿಯಾ ಗಾಂಧಿ

ಒಬ್ಬ ಶಾಸಕನ ಪುತ್ರನಿಗೆ ಚುನಾವಣೆ ಎದುರಿಸುವ ಸಾಮರ್ಥ್ಯ ಇದ್ರೆ ಸ್ಪರ್ಧಿಸಿ ಗೆಲ್ಲಲಿ. ಕರ್ನಾಟಕದಲ್ಲಿ ಕೆಲವರಿಗೆ ಟಿಕೆಟ್ ಸಿಕ್ಕಿದೆ. ಒಂದಿಷ್ಟು ಜನರಿಗೆ ಸಿಕ್ಕಿಲ್ಲ. ಐದು ಜನರಿಗೆ ಸಿಕ್ಕಿದ್ರೆ, 25 ಜನಕ್ಕೆ ಸಿಕ್ಕಿರಲ್ಲ ಎಂದು ಹೇಳಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ
April 13, 2025
7:42 AM
by: The Rural Mirror ಸುದ್ದಿಜಾಲ
2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ
April 13, 2025
6:38 AM
by: ದ ರೂರಲ್ ಮಿರರ್.ಕಾಂ
ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ
ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ
April 12, 2025
8:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group