ರಾಜ್ಯ ಸರ್ಕಾರದ ಬೆಲೆ ಏರಿಕೆ ಕಣ್ಣು ಖಾಸಗಿ ಶಾಲೆಗಳ ಮೇಲೆ | ಬೆಲೆ ಏರಿಕೆ ಕ್ರಮಕ್ಕೆ ಸರ್ಕಾರದ ವಿರುದ್ಧ ರುಪ್ಸಾ ಗರಂ | ಪೋಷಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ…?

July 13, 2024
12:53 PM

ಖಾಸಗಿ ಶಾಲೆಗಳು ಹಾಗು ಅನುದಾನಿತ ಶಾಲೆಗಳ  ಮೇಲೆ ಸರ್ಕಾರದ ಕಣ್ಣು ಬಿದ್ದಂತಿದೆ. ಲೈಸೆನ್ಸ್‌ ನವೀಕರಣ ಸೇರಿದಂತೆ ಫೈರ್‌ ಸೇಫ್ಟಿ ಫೀಸ್‌ ಕೂಡ ದುಬಾರಿ ಆಗಿದೆ. ಇದು ಪೋಷಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯೂ ಹೆಚ್ಚಾಗಿದೆ. 

Advertisement
Advertisement

ಈ ಮೊದಲು ಶಾಲೆಯ ಫೈರ್ ಸೇಫ್ಟಿ ನವೀಕರಣ ಶುಲ್ಕ ಒಂದು ಸಾವಿರವಿತ್ತು. ಇದೀಗ ಆ ಶುಲ್ಕವನ್ನು ಬರೋಬ್ಬರಿ 25,500 ರೂಪಾಯಿಗೆ ಏರಿಕೆ ಮಾಡಿದೆ. ಹೊಸ ಶಾಲೆ ಅನುಮತಿಗೆ 40 ರಿಂದ 80 ಸಾವಿರ ಇತ್ತು. ಇದೀಗ ಲಕ್ಷ ದಾಟುತ್ತಿದೆ. ಎಲ್ಲಾ ನಿಯಮ ಪಾಲಿಸಿ ಅನುಮತಿ ಪಡೆಯಲು ವಿಫಲವಾದಲ್ಲಿ, ಈಗಾಗಲೇ ಕಟ್ಟಿರುವ ಎರಡೂವರೆ ಲಕ್ಷ ವಾಪಸ್ ಕೊಡಲ್ಲ ಅನ್ನೋ ಹೊಸ ನಿಯಮ ರೂಪಿಸಿದೆ. ಈ ಬಗ್ಗೆ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಎಲ್ಲಾ ನಿಯಮ ಪಾಲಿಸಿ ಅನುಮತಿ ಪಡೆಯಲು ವಿಫಲವಾದಲ್ಲಿ, ಈಗಾಗಲೇ ಕಟ್ಟಿರುವ ಎರಡೂವರೆ ಲಕ್ಷ ವಾಪಸ್ ಕೊಡಲ್ಲ ಅನ್ನೋ ಹೊಸ ನಿಯಮ ರೂಪಿಸಿದೆ. ರಾಜ್ಯದಲ್ಲಿ 6 ಸಾವಿರ ಅನುದಾನಿತ ಶಾಲೆಗಳು, 18 ಸಾವಿರ ಖಾಸಗಿ ಶಾಲೆಗಳಿವೆ. ಬೆಂಗಳೂರಿನಲ್ಲಿ 6 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿವೆ. ಇದರಲ್ಲಿರುವ ಜಾಗದಲ್ಲಿ ಬಜೆಟ್ ಖಾಸಗಿ ಶಾಲೆಗಳಿಗೆ ಫೈರ್ ಸೇಫ್ಟಿ ನಿಯಮ ಪಾಲನೆ ಕಷ್ಟಸಾಧ್ಯ. ಇದೇ ಕಾನೂನು ಮುಂದಿಟ್ಟುಕೊಂಡು ಶಾಲೆಗಳಿಂದ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಡುವ ಸಾಧ್ಯತೆಯಿದೆ. ಶಿಕ್ಷಣ ಇಲಾಖೆ ಹೊಸ ನಿಯಮ ಹಾಗೂ ವಿವಿಧ ಶುಲ್ಕಗಳ ದರವನ್ನು ಹೆಚ್ಚಳ ಮಾಡಿರುವುದು ಖಾಸಗಿ ಶಾಲೆಗಳಿಗೆ ನುಂಗಲಾರದ ತುತ್ತಾಗಿದೆ. ಸಿಬಿಎಸ್ಇ ಶಾಲೆಗಳಿಗೆ 5 ವರ್ಷಕ್ಕೊಮ್ಮೆ ನವೀಕರಣ ಇದ್ರೆ, ರಾಜ್ಯ ಪಠ್ಯಕ್ರಮದ ಶಾಲೆಗಳು ಪ್ರತಿವರ್ಷ ನವೀಕರಣದ ಕಿರುಕುಳ ನೀಡಲಾಗುತ್ತಿದೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ ರೈತರಿಗೆ 21,000 ಕೋಟಿ ರೂಪಾಯಿ |
September 19, 2024
9:17 PM
by: ದ ರೂರಲ್ ಮಿರರ್.ಕಾಂ
ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಹಾಲು ಉತ್ಪಾದನೆ
September 19, 2024
9:00 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಪ್ರಕರಣ |
September 19, 2024
8:53 PM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಸೂಕ್ಷ್ಮ ಪರಿಸರ ಪ್ರದೇಶ | ವಿವೇಚನಾತ್ಮಕ ನಿರ್ಧಾರ ಕೈಗೊಳ್ಳುವ ಅಗತ್ಯ | ಅರಣ್ಯ ಸಚಿವ ಈಶ್ವರ್ ಖಂಡ್ರೆ
September 19, 2024
8:35 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror