#KukkeSubrahmanya | ಕುಮಾರಧಾರಾ ನದಿ ಬಳಿಯಲ್ಲಿ ಕುಸಿಯುತ್ತಿರುವ ರಸ್ತೆ | ತಕ್ಷಣ ಗಮನಹರಿಸಲು ಸ್ಥಳೀಯರ ಒತ್ತಾಯ |

August 5, 2023
1:19 PM
ಕುಕ್ಕೆ ಸುಬ್ರಹ್ಮಣ್ಯದಿಂದ ಪುತ್ತೂರು- ಮಂಜೇಶ್ವರಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆಯು ಕುಮಾರಧಾರ ನದಿ ಬಳಿಯಲ್ಲಿ ಮಣ್ಣು ಸಡಿಲಗೊಂಡು ಕುಸಿಯಲು ಆರಂಭವಾಗಿದೆ. ತಕ್ಷಣವೇ ಈ ಬಗ್ಗೆಇಲಾಖೆಗಳು ಗಮನಹರಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಿಂದ ಪುತ್ತೂರು- ಮಂಜೇಶ್ವರಕ್ಕೆ ಸಂಪರ್ಕಿಸುವ ಕರ್ನಾಟಕ ರಾಜ್ಯ ಹೆದ್ದಾರಿ ರಸ್ತೆಯು ಕುಮಾರಧಾರ ನದಿ ಬಳಿಯಲ್ಲಿ ಮಣ್ಣು ಸಡಿಲಗೊಂಡು ಕುಸಿಯಲು ಆರಂಭವಾಗಿದೆ. ತಕ್ಷಣವೇ ಈ ಬಗ್ಗೆಇಲಾಖೆಗಳು ಗಮನಹರಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement
Advertisement

ಕುಮಾರಧಾರಾ ನದಿ ನೀರು ಏರಿಕೆಯಾದ ತಕ್ಷಣವೇ ಮಣ್ಣು ಕುಸಿತ ಸಂಭವಿಸುತ್ತಿದೆ. ಹೀಗಾಗಿ  ರಸ್ತೆ ಕುಸಿದು ಕುಮಾರಧಾರ ನದಿ ನೀರಿನ ಪಾಲಾಗುವ ಸಾಧ್ಯತೆ ಇದೆ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮಂಜೇಶ್ವರ ರಸ್ತೆ ಸಂಪರ್ಕ ಕಡಿತ ಆಗುವ ಭೀತಿ ಎದುರಾಗಿದೆ.
ಜೂನ್ ಜುಲೈ ತಿಂಗಳಲ್ಲಿ ಸುರಿದ ಮಳೆ ನೀರು ಭೂಮಿಯಲ್ಲಿ ಇಂಗುತ್ತದೆ ಆಗಸ್ಟ್ ತಿಂಗಳಲ್ಲಿ ಬಂದ ನೀರು ಮಣ್ಣನ್ನು ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ, ಆದ್ದರಿಂದ ಅಸುಪಸಿನ ಮನೆಗಳಿಗೂ  ಹಾನಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕುಸಿತಗೊಂಡಿರುವ ರಸ್ತೆ | Photo Credit : Vishwanath Naduthota

ಇದೇ ಭಾಗದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಮನೆ ಕುಸಿದು ಎರಡು ಪುಟ್ಟಮಕ್ಕಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ,
ಸುಬ್ರಹ್ಮಣ್ಯ ಮಂಜೇಶ್ವರ ಸಂಪರ್ಕಿಸುವ ರಾಜ್ಯ ರಸ್ತೆಯಲ್ಲಿ ಕುಮಾರಧಾರ ಬಳಿ ಸೇತುವೆ ಇದ್ದು ಈ ಸೇತುವೆಯು ವರ್ಷಂಪತಿ ಹಲವಾರು ಬಾರಿ ಮುಳುಗಡೆಯಾಗಿ, ಪುತ್ತೂರು,ಬಳ್ಪ, ಪಂಜ ಈ ಭಾಗದಿಂದ ಬರುವ ಹಲವಾರು ವಿದ್ಯಾರ್ಥಿಗಳಿಗೆ, ಹಾಗೂ ಸಾರ್ವಜನಿಕರಿಗೆ ತೀರಾ ತೊಂದರೆ ಆಗುತ್ತಿದೆ.( ವಿಡಿಯೋ ವರದಿ…..)

ಕಳೆದ ವಾರ ಬಂದ ಬಾರಿ ಮಳೆಗೆ ರಸ್ತೆ ಸಂಪೂರ್ಣ ಮುಳುಗಡೆಯಾಗಿತ್ತು ಕಾಲೇಜ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹರಸಾಹಸ ಪಟ್ಟು ನದಿ ನೀರನ್ನು ದಾಟಿ ಪರೀಕ್ಷೆ ಬರೆದಂತ ಘಟನೆ ನಡೆದಿದೆ.ಈ ರಸ್ತೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಹಾಗೂ ಸುಳ್ಯದ ಶಾಸಕರು ಇದರ ಬಗ್ಗೆ ಗಮನಹರಿಸಿ ಸೇತುವೆ ಹಾಗೂ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಬೇಕು ಹಾಗೂ ಭೂಕುಸಿತಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು, ಇಲ್ಲದೆ ಹೋದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪುತ್ತೂರು ಮಂಜೇಶ್ವರ ಕರ್ನಾಟಕ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯು ಕಡಿತುಕೊಳ್ಳುವ ಭೀತಿ ಇದೆ ಎಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಇಂಜಾಡಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮೋಹನದಾಸ್ ರೈ ಹೇಳಿದ್ದಾರೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಿಂಧು ಜಲ ಒಪ್ಪಂದ ಅಮಾನತು – ದೇಶದ ಹಲವು ರಾಜ್ಯಗಳ ರೈತರಿಗೆ ಅನುಕೂಲ
May 20, 2025
7:53 PM
by: The Rural Mirror ಸುದ್ದಿಜಾಲ
ಕಾಡಿನಲ್ಲಿ ಶೇಖರಿಸಿದ್ದ ಅಡಿಕೆ ವಶ | 327 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌ |
May 20, 2025
4:17 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ಭಾರಿ ಮಳೆ | ಬೆಂಗಳೂರು ಮಹಾನಗರ ಪಾಲಿಕೆ, SDRFನಿಂದ ರಕ್ಷಣಾ ಕಾರ್ಯ
May 20, 2025
3:59 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20.05.2025 |ಮೇ. 21ರಿಂದ ಕರಾವಳಿ ಭಾಗದಲ್ಲಿ ಮಳೆ ಕಡಿಮೆ ನಿರೀಕ್ಷೆ
May 20, 2025
11:56 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group