ಕಾರ್ಮಿಕರ ಉಚಿತ ಬಸ್ ಪಾಸ್ ಅವಧಿ ಮಾರ್ಚ್ 31 ಕ್ಕೆ ಅಂತ್ಯಗೊಂಡಿದ್ದು ನವೀಕರಣ ಮಾಡದಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಹೌದು, ಆರೇ ತಿಂಗಳಲ್ಲಿ ಕಾರ್ಮಿಕರ ಉಚಿತ ಬಸ್ ಪಾಸ್‌ಗೆ ತಿಲಾಂಜಲಿ ನೀಡ್ತಾ..? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವಿಸಿವೆ.
ಕಾರ್ಮಿಕ ವರ್ಗದವರ ಓಡಾಟಕ್ಕೆ ಉಚಿತ ಬಸ್ ಪಾಸ್ ಭಾಗ್ಯವನ್ನ ರಾಜ್ಯ ಸರ್ಕಾರ ಘೋಷಿಸಿತ್ತು. ನಗರ ಹಾಗೂ ಗ್ರಾಮೀಣ ಭಾಗದಿಂದ 45 ಕಿ.ಮೀ ದೂರದವರೆಗೆ ಓಡಾಡಲು ಉಚಿತ ಬಸ್ ಪಾಸ್ ನೀಡಲಾಗಿತ್ತು. ಆರಂಭದಲ್ಲಿ ಬಿಎಂಟಿಸಿ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ನಲ್ಲೂ ಓಡಾಟಕ್ಕೆ ಪಾಸ್ ವಿಸ್ತರಿಸಲಾಗಿತ್ತು. ಬಸ್ ಪಾಸ್ ಅವಧಿ ಮಾರ್ಚ್ 31 ಕ್ಕೆ ಅಂತ್ಯಗೊಂಡಿದ್ದು ನವೀಕರಣ ಮಾಡದಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ ಅಂತ ತಿಳಿದು ಬಂದಿದೆ.
ಹೀಗಾಗಿ ಹೊಸ ಗ್ಯಾರಂಟಿಯ ಜೊತೆಗೆ ಕಾರ್ಮಿಕರ ಬಸ್ ಪಾಸ್ ವಿಸ್ತರಿಸುವಂತೆ ಕಾರ್ಮಿಕರು ಬೇಡಿಕೆ ಇಟ್ಟಿದ್ದಾರೆ. 1 ಲಕ್ಷ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಿಸಲಾಗಿತ್ತು. ಮಾರ್ಚ್ 31 ರಿಂದಲೇ ಪಾಸ್ ನವೀಕರಿಸದಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಇದರಿಂದ ಕಾರ್ಮಿಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel