ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಪಿಡೇ ರೇಟೆಡ್ 19 ವರ್ಷ ವಯೋಮಾನದ ಚೆಸ್ ಚಾಂಪಿಯನ್ ಶಿಪ್ ನಲ್ಲಿ ದಕ್ಷಿಣ ಕನ್ನಡದ ಚೆಸ್ ಆಟಗಾರ ರವೀಶ್ ಕೋಟೆ ತೃತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಒಟ್ಟು 4 ಮಂದಿ ಆಟಗಾರರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರಲ್ಲಿ ರವೀಶ್ ಕೋಟೆ ಒಬ್ಬರು.…… ಮುಂದೆ ಓದಿ……
ರವೀಶ್ ಕೋಟೆ ಅವರು 1865 ರೇಟಿಂಗ್ ಹೊಂದಿದ್ದು ಕಳೆದ ಹಲವು ವರ್ಷಗಳಿಂದ ಉತ್ತಮ ಚೆಸ್ ಆಟಗಾರರಾಗಿದ್ದು, ವಿವಿದೆಡೆ ಸ್ಫರ್ಧಿಸಿದ್ದಾರೆ. ಇವರು ಪುತ್ತೂರು ಜೀನಿಯಸ್ ಚೆಸ್ ಸ್ಕೂಲ್ ನ ಸತ್ಯ ಪ್ರಸಾದ್ ಕೋಟೆಯವರಲ್ಲಿ ಹಾಗೂ ಮಂಗಳೂರಿನ ರಾವ್ಸ್ ಚೆಸ್ ಕಾರ್ನರ್ (ಆರ್‌ಸಿಸಿ) ಇಲ್ಲಿ ತರಬೇತಿ ಪಡೆಯುತ್ತಿದ್ದು, ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾರೆ. ಸುಳ್ಯದ ಎಣ್ಮೂರು ಬಳಿಯ ರಮೇಶ್ ಕೋಟೆ ಹಾಗೂ ಶುಭಮಂಗಳ ಅವರ ಪುತ್ರ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel