ರಾಜ್ಯಕ್ಕೆ ಕೇಂದ್ರದಿಂದ ಸಿಗದ ಬರ ಪರಿಹಾರ | ಬರ ಪರಿಹಾರಕ್ಕಾಗಿ ಕೇಂದ್ರದ ವಿರುದ್ಧ ಸುಪ್ರೀಂ ಮೊರೆ ಹೋದ ಸಿದ್ದರಾಮಯ್ಯ ಸರ್ಕಾರ | ಸರ್ಕಾರದ ನಡೆಯ ವಿರುದ್ಧ ಬಿಜೆಪಿ ಗರಂ |

March 23, 2024
11:55 PM

 ರಾಜ್ಯದಲ್ಲಿ ಭೀಕರ ಬರ ಎದುರಾದ ಪರಿಣಾಮ ರೈತರು(Farmer) ಸಂಕಷ್ಟ ಎದರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (Central Government) ಬರ ಪರಿಹಾರ ಕೊಡುತ್ತಿಲ್ಲ. ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದ್ದು, ಮಧ್ಯಪ್ರವೇಶಿಸಿ ಬರ ಪರಿಹಾರ (Drought Relief Fund) ಬಿಡುಗಡೆ ಮಾಡಿಸುವಂತೆ ಸುಪ್ರೀಂ ಕೋರ್ಟ್​ಗೆ (Supreme Court) ರಾಜ್ಯ ಸರ್ಕಾರ ಅರ್ಜಿ ಸಲ್ಲಿಕೆ ಮಾಡಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ (CM Siddaramaiah) ಮಾಹಿತಿ ನೀಡಿದರು. ರಾಜ್ಯ ಸರ್ಕಾರ (State Government) ಬಹಳ ದಿನಗಳ‌ ಕಾಲ ಕಾದು ಅನಿವಾರ್ಯವಾಗಿ ಇಂದು ಸುಪ್ರೀಂಗೆ ರಿಟ್ ಪಿಟಿಷನ್ ಹಾಕಲಾಗಿದೆ. ಶನಿವಾರ ಬೆಳಗ್ಗೆ 9 ಗಂಟೆಗೆ ನಮ್ಮ ಅರ್ಜಿ ಫೈಲ್ ಆಗಿದೆ. ಕೇಂದ್ರ ಸರ್ಕಾರವು ತಕ್ಷಣವೇ ಎನ್​​​ಡಿಆರ್​ಎಫ್ ಹಣವನ್ನು (NDRF Fund) ಬಿಡುಗಡೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.

Advertisement
Advertisement
ಆರ್ಕ್ಟಿಕಲ್ 32ರ ಅಡಿಯಲ್ಲಿ ಮ್ಯಾಂಡಮಸ್ (Mandamus) ಕೇಂದ್ರಕ್ಕೆ ಕೊಡಿ ಅಂತ ಪಿಟಿಷನ್ ಹಾಕಿದ್ದೇವೆ. ಸದ್ಯ ಸುಪ್ರೀಂ ಕೋರ್ಟ್​​ಗೆ ಒಂದು ವಾರಗಳ ಕಾಲ ರಜೆಯಿದೆ. ರಜೆ‌ ಮುಗಿದ ಮೇಲೆ ಕೇಸ್ ತಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

223 ಬರಪೀಡಿತ ತಾಲೂಕಗಳ ಘೋಷಣೆ : ಕೇಂದ್ರ ಸರ್ಕಾರ ಅತಿವೃಷ್ಟಿ, ಅನಾವೃಷ್ಟಿ ಆದಾಗ ರಾಜ್ಯ ಸರ್ಕಾರಕ್ಕೆ ಸ್ಪಂದಿಸಬೇಕು. ಅದಕ್ಕಾಗಿ ವಿಪತ್ತು ನಿರ್ವಹಣೆ ಕಾಯ್ದೆ ತರಲಾಗಿದೆ. ಈ ಕಾಯ್ದೆ ಕೂಡ ಅದನ್ನೇ ಹೇಳುತ್ತದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, 223 ತಾಲೂಕನ್ನು‌ ಬರಪೀಡಿತ ಅಂತ ಘೋಷಣೆ‌ ಮಾಡಲಾಗಿದೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ‌ ಕೃಷಿ,ತೋಟಗಾರಿಕಾ ಬೆಳೆ ನಷ್ಟವಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.

Advertisement

ರಾಜ್ಯದಿಂದ ಕೇಂದ್ರಕ್ಕೆ ಮೂರು ಮನವಿ ಸಲ್ಲಿಕೆ : ಇದುವರೆಗೂ ನಾವು ಕೇಂದ್ರ ಸರ್ಕಾರಕ್ಕೆ ಒಟ್ಟು ಮೂರು ಮನವಿಯನ್ನು ಕೊಟ್ಟಿದ್ದೇವೆ. ಮೊದಲನೇ‌ ಮನವಿ ಕೊಟ್ಟ ಒಂದು ವಾರದಲ್ಲಿ ಕೇಂದ್ರದ ತಂಡ ಬರಬೇಕು ಅಂತಿದೆ. ರಾಜ್ಯಕ್ಕೆ ಬಂದ ತಂಡ ಕೇಂದ್ರಕ್ಕೆ ವರದಿ ನೀಡಿದೆ.‌ ವರದಿ ಕೊಟ್ಟ ಒಂದು ತಿಂಗಳಲ್ಲಿ‌ ರಾಜ್ಯಗಳಿಗೆ ಅನುದಾನ ಕೊಡಬೇಕು‌ ಅಂತ ಕಾಯ್ದೆಯಲ್ಲಿದೆ. ಕೇಂದ್ರದ ತಂಡ ಅಕ್ಟೋಬರ್ ‌ 20ಕ್ಕೆ ವರದಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಪ್ರಧಾನಿಗೂ ಮನವಿ : ನಮ್ಮ ಕೃಷಿ, ತೋಟಗಾರಿಕಾ, ಗ್ರಾಮೀಣಾಭಿವೃದ್ಧಿ ‌ಸಚಿವರು ದೆಹಲಿಗೆ ಹೋಗಿದ್ದಾರೆ. ಆದ್ರೆ ಭೇಟಿಗೆ ಸಿಗದ ಕಾರಣ ಅಧಿಕಾರಿಗಳಿಗೆ ವಿಚಾರ ಹೇಳಿದ್ದಾರೆ. ಹಾಗೇ ನಾನು ಪತ್ರವನ್ನು ಬರೆದಿದ್ದೇನೆ. ನಾನು ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಡಿಸೆಂಬರ್ 19ಕ್ಕೆ ಭೇಟಿ ಮಾಡಿ, ಎನ್​ಡಿಆರ್​ಎಫ್​ ಹಣ ಬಿಡುಗಡೆ ಮಾಡುವಂತೆ ಮಾಡಲಾಗಿತ್ತು. ಡಿಸೆಂಬರ್ 20ರಂದು ಅಮಿತ್ ಶಾ ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ವಿವರಿಸಲಾಗಿತ್ತು. ಆಗ ಡಿಸೆಂಬರ್ 23ರಂದು ಸಭೆ ಕರೆಯಲಾಗಿದ್ದು, ಅಲ್ಲಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುದು ಎಂದು ಹೇಳಿದ್ರು. ಪ್ರಧಾನಿಗಳು ಬೆಂಗಳೂರಿಗೆ ಬಂದಾಗ್ಲೂ ಈ ವಿಷಯವನ್ನು ಗಮನಕ್ಕೆ ತರಲಾಗಿತ್ತು ಎಂಬ ವಿಷಯವನ್ನು ತಿಳಿಸಿದರು.

Advertisement
ರಾಜ್ಯ ಸರ್ಕಾರದಿಂದ 650 ಕೋಟಿ ರೂಪಾಯಿ ನೆರವು : ಆದಷ್ಟು ಬೇಗ ಬಿಲ್ ಕ್ಲಿಯರ್ ಆಗಲಿದೆ ಎಂದು ಪ್ರಧಾನಿಗಳು ಹೇಳಿದ್ದರು. ರೈತರು ಕಷ್ಟದಲ್ಲಿ ಇದ್ದಾರೆ ಅಂತ 33 ಲಕ್ಷ ರೈತರಿಗೆ 650 ಕೋಟಿ ರೂ ನೀಡಿದ್ದೇವೆ. ಮೇವು ಬೆಳೆಯಲು 40 ಕೋಟಿ, ಕುಡಿಯುವ ನೀರಿಯಾಗಿ 870 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಿದ್ದರಾಮಯ್ಯನ ಹೇಳಿದರು.
ಬಿಜೆಪಿ ಗರಂ
ಈ ನಡುವೆ ರಾಜ್ಯ ಸರ್ಕಾರದ ನಡೆಯ ವಿರುದ್ಧ ಬಿಜೆಪಿ ಗರಂ ಆಗಿದೆ. ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಅನುದಾನದ ವಿಚಾರವಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ. ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಮುಚ್ಚಿ ಹಾಕಲು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಕೈಲಾಗದವನು ಮೈ ಪರಚಿಕೊಂಡಂತೆ, ಕುಣಿಯಲಾರದವನು ನೆಲ ಡೊಂಕೆಂದಂತೆ, ಕೊಟ್ಟ ಕುದುರೆಯನ್ನು ಏರದವನು ಶೂರನೂ ಅಲ್ಲ, ಧೀರನೂ ಅಲ್ಲ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ ಕರ್ನಾಟಕ ಕಂಡ ಅತ್ಯಂತ ವೀಕ್‌ ಸಿಎಂ ಸಿದ್ಧರಾಮಯ್ಯ ಎಂದು ರಾಜ್ಯ ಬಿಜೆಪಿ ತನ್ನ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ. ಕೇಂದ್ರ ಸರ್ಕಾರದ ವಿರುದ್ದ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗಿರುವುದು ಕೇವಲ ಜನರ ಮುಂದೆ ತನ್ನ ದಯನೀಯ ಆಡಳಿತ ವೈಫಲ್ಯವನ್ನು ಮರೆಮಾಚುವ ಉದ್ದೇಶದಿಂದ ಹೊರತು, ಉಳಿದೆಲ್ಲವೂ ಬರೀ ಬೊಗಳೆ. ತಮ್ಮ ಎಡವಟ್ಟಣ್ಣಯ್ಯ ಸರ್ಕಾರದ ಎಲ್ಲಾ ಎಡವಟ್ಟುಗಳನ್ನು ಕೇಂದ್ರ ಸರ್ಕಾರದ ಮೇಲೆ ಹೊರೆಸುವುದೇ ಸಿಎಂ ಸಿದ್ದರಾಮಯ್ಯರವರ ದಿನನಿತ್ಯದ ಕಾಯಕ ಎಂದು ಟೀಕಿಸಿದೆ.
2019ರ ಬಿಜೆಪಿ ಸರ್ಕಾರದ ಆರಂಭದ ಅವಧಿಯಲ್ಲಿ ಉಂಟಾದ ಭಾರಿ ಪ್ರವಾಹದಿಂದ ರಾಜ್ಯದಲ್ಲಿ 9,72,517 ಹೆಕ್ಟೇರ್‌ ಬೆಳೆಹಾನಿಯಾದಾಗ ಯಾರ ಸಹಾಯವನ್ನೂ ಯಾಚಿಸದೆ 6,71,314 ಫಲಾನುಭವಿಗಳಿಗೆ ₹1232.20 ಕೋಟಿ ಪರಿಹಾರ ನೀಡಿದ್ದು ಬಿಜೆಪಿ ಸರ್ಕಾರ. ಅದೇ ರೀತಿ 2020 ರಲ್ಲಿ 19,68,247 ಹೆಕ್ಟೇರ್‌ ಬೆಳೆಹಾನಿಯಾದಾಗ ಸಹ 12,00,346 ಫಲಾನುಭವಿಗಳಿಗೆ 941.70 ಕೋಟಿ ರೂ. ಪರಿಹಾರ ನೀಡಿ, ರೈತರ ಮೊಗದಲ್ಲಿ ಮತ್ತೊಮ್ಮೆ ಬದುಕಿನ ಭರವಸೆಯನ್ನು ಹುಟ್ಟಿಸಿದ್ದು ಸಹ ಬಿಜೆಪಿ ಸರ್ಕಾರವೇ ಎಂದು ಟ್ವೀಟ್‌ ಮಾಡಿದೆ.

After the government of Kerala, it is now the turn of Karnataka to knock on the doors of Supreme Court seeking a direction to the Centre to release funds to the State under the National Disaster Relief Fund (NDRF). “We have been anxiously waiting for the Narendra Modi regime to release funds to the State for drought relief and are now forced to move the apex court to come to our rescue,’’ disclosed Chief Minister Siddaramaiah on Saturday.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |
April 27, 2024
3:21 PM
by: ಸಾಯಿಶೇಖರ್ ಕರಿಕಳ
ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |
April 27, 2024
2:15 PM
by: ದ ರೂರಲ್ ಮಿರರ್.ಕಾಂ
ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror