ಮಳೆ ಕೈಕೊಟ್ಟರೆ ಏನಾಗುತ್ತದೆ….?| ರಾಜ್ಯಾದ್ಯಂತ ಎಲ್ಲೆಲ್ಲಾ ಬರಗಾಲ ಛಾಯೆ…? | ಕೋಟ್ಯಂತರ ರೂಪಾಯಿ ವಹಿವಾಟಿಗೆ ಬ್ರೇಕ್ |

October 18, 2023
10:48 AM
ಮಳೆ ಕೈಕೊಟ್ಟರೆ ಬರಗಾಲ ಖಚಿತವೇ. ಆದರೆ ಇದು ಕೃಷಿಕರಿಗೆ ಮಾತ್ರವೇ ಬರಗಾಲ ಅಲ್ಲ. ರಾಜ್ಯದ ಎಲ್ಲಾ ವಾಣಿಜ್ಯ ವಹಿವಾಟಿನ ಮೇಲೂ ಪರಿಣಾಮ ಬೀರುತ್ತದೆ. ಈಗ ಬರಗಾಲದ ಮಾತುಗಳು ಶುರುವಾಗಿದೆ....

ರಾಜ್ಯದಲ್ಲಿ ಈ ಬಾರಿ ಮುಂಗಾರ ಮಳೆ(Mansoon Rain) ಕೈಕೊಟ್ಟಿದ್ದರಿಂದ, ಬೆಳೆ ಕೊರತೆ ಕಾಡಲಾರಂಭಿಸಿದೆ. ಇದು ರಾಜ್ಯದ ಬಹುತೇಕ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಮುಖ್ಯವಾಗಿ  ಲಾರಿಗಳಿಗೆ(Lorry) ಲೋಡ್ ಇಲ್ಲದೆ ಯಾರ್ಡ್ ಗಳಲ್ಲಿ ನಿಂತಲ್ಲೇ ನಿಂತಿವೆ ಲಾರಿಗಳು. ಒಂದೆಡೆ ಲಾರಿ ಮಾಲೀಕರಿಗೆ ಸಾಲಗಾರರ ಕಾಟ ಶುರುವಾಗಿದೆ. ಬಾಡಿಗೆ ಇಲ್ಲದೆ ಇಎಂಐ ಕಟ್ಟಲಾಗದೆ ರೈತರು(Farmer) ಕಂಗಲಾಗಿದ್ದಾರೆ. ಕೆಲವರ ಲಾರಿಗಳನ್ನು ಫೈನಾನ್ಸ್ ಕಂಪನಿಗಳು( Finance)ತೆಗೆದುಕೊಂಡು ಹೋಗುತ್ತಿವೆ. ಇನ್ನೊಂದೆಡೆ ರೈತರು ಹಾಕಿದ ಬಂಡವಾಳವೂ ಬರುತ್ತಿಲ್ಲ…ಇದು ಅನ್ನದಾತನ ಪರಿಸ್ಥಿತಿ. ಇತ್ತ ರೈತರ ಮೇಲೆ ಅವಲಂಭಿತವಾಗಿರುವ ಲಾರಿ ಮಾಲೀಕರ ಗೋಳು ಹೇಳತೀರದ್ದಾಗಿದೆ.

Advertisement

ರೈತರಿಗೂ, ಲಾರಿ ಮಾಲಿಕರಿಗೂ ನೇರ ಸಂಬಂಧವಿದ್ದು, ಒಬ್ಬರೊನ್ನೊಬ್ಬರು ಬಿಟ್ಟು ಇನ್ನೊಬ್ಬರು ಇರೋದಿಲ್ಲ. ದಾವಣಗೆರೆ ಮೆಕ್ಕೆಜೋಳ ಕಣಜವಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮೆಕ್ಕೆಜೋಳವನ್ನು ಇಲ್ಲಿ ಬೆಳೆಯುತ್ತಾರೆ..ಆದರೆ ಮಳೆ ಇಲ್ಲದ ಕಾರಣ ಮೆಕ್ಕೆಜೋಳ ಬೆಳೆ ಇಲ್ಲವಾಗಿದೆ. ಪರಿಣಾಮ ಲಾರಿ ಮಾಲೀಕರು ಸೇರಿದಂತೆ ಹಮಾಲಿಗಳು, ಡ್ರೈವರ್‌ಗಳು, ಕ್ಲೀನರ್‌ಗಳಿಗೆ ಕೆಲಸವಿಲ್ಲವಾಗಿದೆ. ಜತೆಗೆ ಲಾರಿಗಳನ್ನೇ ನಂಬಿರುವ ಟ್ರಾನ್ಸ್ ಪೋರ್ಟ್, ಗ್ಯಾರೇಜ್ ಹೀಗೆ ಹತ್ತಾರು ಜನಕ್ಕೆ ಕೆಲಸವಿಲ್ಲವಾಗಿದೆ.

ದಾವಣಗೆರೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ಲಾರಿಗಳು ಇದ್ದು, ಲೋಡ್ ಇಲ್ಲದೇ ನಿಂತಲ್ಲೇ ನಿಂತಿವೆ. ಪರಿಣಾಮ ಕೋಟ್ಯಂತರ ರೂಪಾಯಿ ವಹಿವಾಟು ನಿಂತಿದೆ.ಇನ್ನು ಸರಕಾರಕ್ಕೆ ಟ್ಯಾಕ್ಸ್ ಕಟ್ಟಬೇಕಾಗಿದೆ, ಸಂಸಾರ ನಡೆಸಬೇಕಿದೆ, ಸಾಲಗಾರರ ಕಾಟ ಹೆಚ್ಚಾಗಿದೆ. ಒಂದು ತಿಂಗಳು ಸಾಲ ಕಟ್ಟದೇ ಹೋದರೆ ಹಣ ನೀಡಿದ ವಸೂಲಿಗಾರರು ಲಾರಿಗಳನ್ನು ತೆಗೆದುಕೊಂಡು ಸ್ಟಾಕ್‌ಯಾರ್ಡ್ ಗಳಲ್ಲಿ ನಿಲ್ಲಿಸಿಕೊಳ್ಳುತ್ತಿದ್ದಾರೆ. ಲಾರಿ ಇಲ್ಲದೇ ಹೋದರೆ ಸಾಲ ತೀರಿಸುವುದಾದರೂ ಹೇಗೆ ಎಂದು ಲಾರಿ ಮಾಲೀಕರು ಪ್ರಶ್ನೆ ಮಾಡುತ್ತಿದ್ದಾರೆ.

ಮಳೆ ಬಂದಿದ್ದರೇ ನಾವು ಚೆನ್ನಾಗಿ ಇರಬಹುದಿತ್ತು..ರೈತರು ಕೂಡ ಚೆನ್ನಾಗಿ ಇರಬಹುದಿತ್ತು. ಬರಗಾಲವಾದ ಕಾರಣ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ರೈತರಿಗೆ ಬರಪೀಡಿತ ಹಣ ಬರುತ್ತದೆ. ಮಹಿಳೆಯರಿಗೆ ಸರಕಾರ ಹಣ ನೀಡುತ್ತದೆ..ಎಲ್ಲರಿಗೂ ಎಲ್ಲ ಭಾಗ್ಯ ನೀಡಿರುವ ಸರಕಾರ ಲಾರಿ ಮಾಲೀಕರಿಗೂ ಅವರಿಗೆ ಉಪಯೋಗವಾಗುವ ಭಾಗ್ಯ ನೀಡಲಿ. ಡ್ರೈವರ್‌ಗಳು ಅಥವಾ, ಕ್ಲೀನರ್‌ಗಳಿಗಾದರೂ ಸರಕಾರ ಸಹಾಯಮಾಡಲಿ. ಈಗ ಎಲ್ಲ ದರಗಳು ಹೆಚ್ಚಾಗಿದೆ. ಕೆಲಸವಿಲ್ಲದ ಕಾರಣ ಜೀವನ ಬರ್ಬಾತ್ ಆಗಿದೆ. ಅದರಲ್ಲೂ ಆರೋಗ್ಯ ಸಮಸ್ಯೆ ಬಂದರೆ ನಾವು ಎಲ್ಲಿಂದ ಹಣ ತರಬೇಕು…ನಾವು ಇಲ್ಲ ಅಂದ್ರೆ ಯಾವ ಸ್ಟಾಕ್ ಕೂಡ ಬರೋದಿಲ್ಲ. ಇರೋದರಲ್ಲಿ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ಸರಕಾರ ನಮ್ಮತ್ತ ಕಣ್ಣಾಯಿಸಲಿ ಎಂದು ಲಾರಿ ಮಾಲೀಕರು ಎಂದು ಮನವಿ ಮಾಡಿದ್ದಾರೆ. ಒಟ್ಟಾರೆ ರಾಜ್ಯಾದ್ಯಂತ ಲಾರಿ ಮಾಲೀಕರ ಸದ್ಯದ ಪರಿಸ್ಥಿತಿ ಹೇಳತೀರದ್ದಾಗಿದ್ದು, ಬರುವ ಸಂಕಷ್ಟಗಳನ್ನು ಮೆಟ್ಟಿ ಮುನ್ನಡೆಯುತ್ತಿದ್ದಾರೆ.

Farmers and lorry owners have a direct relationship and there is no one other than the other. Davanagere is a maize granary, the largest amount of maize is grown here in the state..but due to lack of rain, there is no maize crop. As a result porters, drivers, cleaners including lorry owners are out of work. In addition, tens of thousands of people who rely on lorries for transport, garage etc. are out of work.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ
May 9, 2025
7:51 AM
by: ದ ರೂರಲ್ ಮಿರರ್.ಕಾಂ
ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |
May 9, 2025
7:46 AM
by: ದ ರೂರಲ್ ಮಿರರ್.ಕಾಂ
ಧ್ರುವ ಯೋಗ ಯಾವುದರ ಸಂಕೇತ..? | ಯಾವ ರಾಶಿಯವರಿಗೆ ಸದ್ಯ ಈ ಯೋಗ..?
May 9, 2025
7:39 AM
by: ದ ರೂರಲ್ ಮಿರರ್.ಕಾಂ
ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ
May 8, 2025
8:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group