ದೇಶದಲ್ಲಿ ರಸಗೊಬ್ಬರಗಳ ಬೆಲೆ ಇಳಿಕೆ ಕುರಿತಂತೆ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ, ಕೇಂದ್ರ ಸರ್ಕಾರ ರೈತರು ಬಳಸುವ ರಸಗೊಬ್ಬರಗಳ ಬೆಲೆಗಳನ್ನು ಸ್ಥಿರವಾಗಿರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಸಗೊಬ್ಬರಗಳ ಬೆಲೆಗಳು ಜಾಗತಿಕ ಮಟ್ಟದಲ್ಲಿ ಏರುಪೇರು ಉಂಟಾದರೂ ಅವುಗಳ ಬೆಲೆಗಳನ್ನು ಸ್ಥಿರವಾಗಿರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಸರ್ಕಾರ 45 ಕೆ.ಜಿ. ಯೂರಿಯಾ ಬೆಲೆಯನ್ನು 242 ರೂಪಾಯಿಗೆ ನಿಗದಿಪಡಿಸಿದೆ. D A P ಬೆಲೆಯನ್ನು 50 ಕೆ.ಜಿ. ಚೀಲಕ್ಕೆ 1 ಸಾವಿರದ 350 ರೂಪಾಯಿಗೆ ನಿಗದಿಪಡಿಸಿದೆ. D A P ಬೆಲೆ ಚೀಲವೊಂದಕ್ಕೆ 2 ಸಾವಿರದ 433 ರೂಪಾಯಿ ಇದ್ದು, ಸರ್ಕಾರ 1 ಸಾವಿರದ 43 ರೂಪಾಯಿ ಸಬ್ಸಿಡಿ ಕಲ್ಪಿಸುವ ಮೂಲಕ ರೈತರಿಗೆ ಒದಗಿಸುತ್ತಿದೆ ಎಂದು ಉತ್ತರಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel