ಹಣ್ಣಡಿಕೆ ಒಣಗಿಸುವ ತಂತ್ರಜ್ಞಾನದತ್ತ ಮುಖ ಮಾಡಿದ ವಿಟ್ಲದ ಪಿಂಗಾರ ಸಂಸ್ಥೆ | ಅಡಿಕೆ ದಾಸ್ತಾನಿಗೆ ನೈಟ್ರೋಜನ್‌ ಗ್ಯಾಸ್ ತಂತ್ರಜ್ಞಾನ ಬಳಕೆ |

January 9, 2024
4:45 PM
ಅಡಿಕೆ ದಾಸ್ತಾನು ಮಾಡುವ ಹಾಗೂ ಹಣ್ಣಡಿಕೆ ಒಣಗಿಸುವ ಹೊಸ ವಿಧಾನವನ್ನು ವಿಟ್ಲದ ಪಿಂಗಾರ ಸಂಸ್ಥೆ ಪರಿಚಯಿಸುತ್ತಿದೆ. ಕೃಷಿಕರಿಗೆ ಬಹು ಉಪಯೋಗಿ ಆಗುವ ತಂತ್ರಜ್ಞಾನ ಇದಾಗಿದೆ.

ವಿಟ್ಲದ ಪಿಂಗಾರ ರೈತ ಉತ್ಪಾದಕ ಕಂಪನಿ ಮತ್ತೊಂದು ಪ್ರಯತ್ನಕ್ಕೆ ಇಳಿದಿದೆ. ಈಗಾಗಲೇ ದೋಟಿ ಕೊಯ್ಲು ಮೂಲಕ ರೈತರ ಸಮಸ್ಯೆಯನ್ನು ಬಹುಪಾಲು ಕಡಿಮೆ ಮಾಡಿದ ಪಿಂಗಾರ ಈಗ ಅಡಿಕೆ ದಾಸ್ತಾನಿಗೆ ನೈಟ್ರೋಜನ್‌ ಗ್ಯಾಸ್‌ ಹಾಗೂ ಹಣ್ಣಡಿಕೆ ಒಣಗಿಸಲು ಹ್ಯುಮಿಡಿಪೈಯರ್‌ ಯಂತ್ರವನ್ನು ಬಳಸಿಕೊಳ್ಳು ನಿರ್ಧರಿಸಿದೆ. ಎರಡನೇ ದಿನದಲ್ಲಿ  ಹಣ್ಣಡಿಕೆ ಒಣಗಿಸುವ ವ್ಯವಸ್ಥೆಗೆ ಪಿಂಗಾರ ಮುಂದಾಗಿದೆ.

Advertisement

ವಿಟ್ಲದ ಪಿಂಗಾರ ಸಂಸ್ಥೆಯು ಅಡಿಕೆ ಹಾಗೂ ತೆಂಗು ಕೊಯ್ಲು ಮಾಡಲು ತಂಡವನ್ನು ರಚನೆ ಮಾಡಿ ಯಶಸ್ವಿಯಾಗಿದೆ. ಅನೇಕ ಕೃಷಿಕರ ಸಮಸ್ಯೆಗೆ ಪರಿಹಾರವನ್ನು ಕಂಡಿಕೊಂಡ ಸಂಸ್ಥೆ ಇದೀಗ ಅಡಿಕೆ ದಾಸ್ತಾನು ಮಾಡಲು ನೈಟ್ರೋಜನ್‌ ಗ್ಯಾಸ್‌ ಬಳಕೆ ಮಾಡುವುದು  ಹಾಗೂ ಹಣ್ಣಡಿಕೆ ಒಣಗಿಸಲು ಡ್ರೈಯರ್‌ ಬಳಕೆ ಮಾಡಲು ಮುಂದಾಗಿದೆ. ಆದರೆ ಸದ್ಯ ಹಣ್ಣಡಿಕೆಯನ್ನು ರೈತರಿಂದ ಖರೀದಿ ಮಾಡಿ ಒಣಗಿಸಿ ಬಳಿಕ ಮಾರಾಟ ಮಾಡುವ ಯೋಜನೆ ಇದೆ. ಅಡಿಕೆ ಒಣಗಿಸಿ ಕೊಡುವ ಬಗ್ಗೆ ಸದ್ಯ ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ.

ಪಿಂಗಾರ ಸಂಸ್ಥೆಯು ಹಣ್ಣಡಿಕೆ ಖರೀದಿ ಮಾಡಿ ಅದನ್ನು  ಹ್ಯುಮುಡಿಪೈಯರ್‌ ಯಂತ್ರದ ಮೂಲಕ ಒಣಗಿಸುವ ಯೋಜನೆ ಇದಾಗಿದೆ. ಅಂದರೆ ಪ್ರಿಜ್‌ ಬಳಕೆಯ ಸರಿಯಾದ ಉಲ್ಟಾ ಪ್ರಕ್ರಿಯೆ ಇದೆ. ಬಿಸಿ ಗಾಳಿ ಒಳಗೆ ತೆಗೆದುಕೊಂಡು ತಣ್ಣಗಿನ ಗಾಳಿ ಅಂದರೆ ತೇವಾಂಶವನ್ನು ಹೊರಹಾಕುತ್ತದೆ. ಯಂತ್ರ ಆವಿಷ್ಕಾರ ಮಾಡಿದವರು ಕೃಷಿ ಕುಟುಂಬದವರೇ ಆದ್ದರಿಂದ ಅಡಿಕೆ ಒಣಗಿಸುವ ಸಮಸ್ಯೆಯನ್ನು ಬಲ್ಲವರಾಗಿದ್ದರೆ. ಈ ತಂತ್ರಜ್ಞಾನದ ಮೂಲಕ ಯಂತ್ರದ ಒಳಗೆ 70 ಡಿಗ್ರಿ ಉಷ್ಣತೆ ಇರುತ್ತದೆ. ಹೀಗಾಗಿ ಹಣ್ಣಡಿಕೆ ಎರಡೇ ದಿನದಲ್ಲಿ  ಒಣಗಲು ಸಾಧ್ಯ ಇದೆ. ಅಡಿಕೆ ಮಾತ್ರವಲ್ಲ ಕಾಳುಮೆಣಸು, ಕೊಬ್ಬರಿ ಸಹಿತ ಎಲ್ಲಾ ಕೃಷಿ ವಸ್ತುಗಳೂ ಬೇಗನೆ ಒಣಗುತ್ತದೆ.

ಸದ್ಯ ಹಣ್ಣಡಿಕೆ ಖರೀದಿಯ ಬಗ್ಗೆ ಮಾತ್ರಾ ಯೋಜನೆ ರೂಪಿಸಿದ್ದು, ಅಡಿಕೆ ಒಣಗಿಸಿ ಮತ್ತೆ ರೈತರಿಗೆ ನೀಡುವ ಯೋಜನೆ ಮಾಡಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ ಹೇಳುತ್ತಾರೆ.

ಅಡಿಕೆ ದಾಸ್ತಾನು ಮಾಡಲು ಈಗಾಗಲೇ ಸಂಸ್ಥೆಯು ಕಟ್ಟಡಗಳನ್ನು ಸಿದ್ಧ ಮಾಡಲು ಯೋಜನೆ ಹಾಕಿಕೊಂಡಿದೆ. ನೈಟ್ರೋಜನ್‌ ಗ್ಯಾಸ್‌ ಬಳಸಿ ಅಡಿಕೆ ದಾಸ್ತಾನು ಮಾಡುವುದು ಈಗಾಗಲೇ ಯಶಸ್ವಿಯಾಗಿದೆ. ರೈತರ ಅಡಿಕೆಯನ್ನು ದಾಸ್ತಾನು ಮಾಡಿ ಮತ್ತೆ ಹಿಂದಿರುಗಿಸಿ ರೈತರಿಗೆ ನೀಡುವ ಅಥವಾ ಮಾರಾಟ ಮಾಡುವ ಯೋಜನೆಯೂ ಇದೆ ಎಂದು ರಾಮ ಕಿಶೋರ್‌ ಮಂಚಿ ಹೇಳುತ್ತಾರೆ.

ಮಳೆಗಾಲದಲ್ಲಿ ಹಣ್ಣಡಿಕೆ ಒಣಗಿಸಲು ಸಮಸ್ಯೆ ಅಡಿಕೆ ಬೆಳೆಗಾರರಿಗೆ ಇದೆ. ಇದಕ್ಕಾಗಿ ಹಣ್ಣಡಿಕೆಯನ್ನು ಉತ್ತಮ ಧಾರಣೆಗೆ ಪಿಂಗಾರ ಸಂಸ್ಥೆಗೆ ಮಾರಾಟ ಮಾಡುವ ಅವಕಾಶ ಇನ್ನು ಮುಂದೆ ಬೆಳೆಗಾರರಿಗೆ ಸಿಗಲಿದೆ. ಇದರ ಜೊತೆಗೆ ಅಡಿಕೆ ದಾಸ್ತಾನು ಮಾಡುವುದು ಕೂಡಾ ಅಡಿಕೆ ಬೆಳೆಗಾರರಿಗೆ ಬಹುದೊಡ್ಡ ಸಮಸ್ಯೆ ಇದಕ್ಕೂ ಕೂಡಾ ಪಿಂಗಾರ ಸಂಸ್ಥೆ  ಈಗ ಅವಕಾಶ ನೀಡುತ್ತಿದೆ.

Viitla Pingara Former Producer Company has decided to use nitrogen gas for Arecanut stock and humidifier machine for drying the Areca fruit. 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |
April 2, 2025
9:31 PM
by: The Rural Mirror ಸುದ್ದಿಜಾಲ
ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!
April 2, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಗುಜ್ಜೆ ಬೋಂಡಾ
April 2, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group