ನಮ್ಮ ದೇಶದ ಪುರಾತನ ವಸ್ತುಗಳು ಜನರ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಸಂಕೇತ. ಇಂತಹ ಅದೆಷ್ಟೋ ಬೆಲೆ ಬಾಳುವ ವಸ್ತುಗಳು ವಿದೇಶಿಗರ ಕೈ ಸೇರಿದೆ. ಕೆಲವು ನಮ್ಮ ದೇಶದಿಂದಲೇ ಕಳ್ಳ ಸಾಗಣಿಕೆ ಮೂಲಕ ಹೊರ ಹೋಗಿದೆ. ಈಗ ಅದನ್ನು ಮತ್ತೆ ಹಿಂದಕ್ಕೆ ಪಡೆಯುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸದ ನಂತರ, ಕಳ್ಳಸಾಗಾಣಿಕೆ ಮಾಡಲಾಗಿದ್ದ 105 ಸಾಂಸ್ಕೃತಿಕ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಲು ನಿರ್ಧರಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ದೊಡ್ಡ ಹೆಜ್ಜೆ ಇಟ್ಟಿದೆ.
ಯುನೈಟೆಡ್ ಸ್ಟೇಟ್ಸ್, ಭಾರತದಿಂದ ಕಳ್ಳಸಾಗಾಣಿಕೆ ಮಾಡಲಾಗಿದ್ದ 105 ಸಾಂಸ್ಕೃತಿಕ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಲಿದೆ ಮತ್ತು ಇದಕ್ಕಾಗಿ ವಾಪಸಾತಿ ಸಮಾರಂಭವನ್ನು ನಡೆದಿರುವ ಬಗ್ಗೆ ನ್ಯೂಯಾರ್ಕ್ ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ, USನ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು US ತಂಡಕ್ಕೆ, ವಿಶೇಷವಾಗಿ ಮ್ಯಾನ್‌ಹಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಮತ್ತು ಅವರ ಕಳ್ಳಸಾಗಣೆ ವಿರೋಧಿ ಘಟಕ ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿ ತನಿಖಾ ತಂಡಕ್ಕೆ ತಮ್ಮ ಸಹಕಾರ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಭಾರತದ ಜನರಿಗೆ ಇವು ಕೇವಲ ಕಲಾಕೃತಿಗಳಲ್ಲ, ಆದರೆ ಅವರ ಜೀವನ ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿದೆ ಎಂದು ತರಂಜಿತ್ ಹೇಳಿದರು. ಈ ಪುರಾತನ ವಸ್ತುಗಳನ್ನು ಶೀಘ್ರದಲ್ಲೇ ಭಾರತಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಸುಮಾರು 18 ಕಲಾಕೃತಿಗಳು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿವೆ (ಹಿಂದೂ ಧರ್ಮ, ಜೈನ ಧರ್ಮ ಮತ್ತು ಇಸ್ಲಾಂ) ಮತ್ತು ಉಳಿದವು ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ. ವಾಪಸಾತಿ ಸಮಾರಂಭದಲ್ಲಿ ಮ್ಯಾನ್‌ಹಟನ್ ಜಿಲ್ಲಾ ಅಟಾರ್ನಿ ಕಚೇರಿ ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಶನ್ಸ್ ಟೀಮ್‌ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು” ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿಯವರ ರಾಜ್ಯ ಪ್ರವಾಸದ ಸಂದರ್ಭದಲ್ಲಿ, ಭಾರತ ಮತ್ತು ಯುಎಸ್ ಸಾಂಸ್ಕೃತಿಕ ಆಸ್ತಿ ಒಪ್ಪಂದದಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿವೆ, ಇದು ಸಾಂಸ್ಕೃತಿಕ ಕಲಾಕೃತಿಗಳ ಅಕ್ರಮ ಸಾಗಾಣಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಧಿಕೃತ ಹೇಳಿಕೆಯ ಪ್ರಕಾರ, ಅಂತಹ ಒಪ್ಪಂದವು ಎರಡು ದೇಶಗಳ ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವಿನ ಕ್ರಿಯಾತ್ಮಕ ದ್ವಿಪಕ್ಷೀಯ ಸಹಕಾರಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ ಎಂದು ತಿಳಿದುಬಂದಿದೆ.
105 ಹೊಸ ವಸ್ತುವಿನ ಜೊತೆ 278 ಸಾಂಸ್ಕೃತಿಕ ಕಲಾಕೃತಿಗಳನ್ನು US ಭಾರತಕ್ಕೆ ಹಸ್ತಾಂತರಿಸಿದ ಯುಸ್ : ಕದ್ದ ಭಾರತೀಯ ಪುರಾತನ ವಸ್ತುಗಳು, ಶ್ರೀಮಂತ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕಗಳನ್ನು ವಿದೇಶದಿಂದ ಮರಳಿ ತರಲು ಭಾರತ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ, ಭಾರತ ಮತ್ತು ಯುಎಸ್ ನಡುವೆ ಪ್ರಾಚೀನ ವಸ್ತುಗಳ ಮರುಸ್ಥಾಪನೆಗೆ ನಿಕಟ ಸಹಕಾರವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನಿ ಮೋದಿಯವರ 2016ರ ಅಮೆರಿಕ ಭೇಟಿಯ ವೇಳೆ ಅಮೆರಿಕದಿಂದ 16 ಪುರಾತನ ವಸ್ತುಗಳನ್ನು ಹಸ್ತಾಂತರಿಸಲಾಗಿತ್ತು. ಅದೇ ರೀತಿ 2021ರಲ್ಲಿ ಅಮೆರಿಕ 157 ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಈ 105 ಪುರಾತನ ವಸ್ತುಗಳ ಜೊತೆಗೆ 278 ಸಾಂಸ್ಕೃತಿಕ ಕಲಾಕೃತಿಗಳನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದೆ.