ನಮ್ಮ ಹಿರಿಯರು ಮಾಡುತ್ತಿದ್ದ ನೈಸರ್ಗಿಕ ಕೃಷಿಯನ್ನು #NaturalFarming ಬಿಟ್ಟು ಇಂದಿನ ಜನಾಂಗ ಬಹಳ ಮುಂದೆ ಸಾಗಿ ಬಂದಾಗಿದೆ. ಪ್ರಕೃತಿ, ಪ್ರಾಣಿ-ಪಕ್ಷಿಗಳು, ನಾವು ಎಲ್ಲರೂ ಇದರ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಮರಳಿ ಮತ್ತೆ ಹಿಂದಕ್ಕೆ ಸಾಗೋಣ ಅನ್ನುವ ಮಾತುಗಳು ಕೇಳಿ ಬರುತ್ತಿವೆ, ಹಾಗೆ ಕೆಲವರು ಮತ್ತೆ ನಮ್ಮ ಸಾಂಪ್ರದಾಯಿಕ ಕೃಷಿಯತ್ತ ಹೊರಳುತ್ತಿದ್ದಾರೆ ಕೂಡ. ನಮ್ಮ ಭೂಮಿ ಮಾನವನ ಅನುಕೂಲಕ್ಕೆ ಹೇಗೆ ಬೇಕೋ ಹಾಗೆ ರಚನೆಯಾಗಿದೆ. ಆದರೆ ಅದನ್ನು ಬದಲಿಸಲು ಹೊರಟವರು ನಾವು. ಈ ಬಗ್ಗೆ ಅನೇಕ ತಿಳಿದ ಮಹನೀಯರು ಎಚ್ಚರಿಕೆ ನೀಡುತ್ತಿದ್ದಾರೆ.
ನಮ್ಮ ಕೃಷಿ ಬೆಳೆಗಳಿಗೆ ನೈಸರ್ಗಿಕವಾಗಿ ಭೂಮಿಯಿಂದ ಅತೀ ಹೆಚ್ಚು ಸಿಗುವ ಪೋಷಕಾಂಶವೆಂದರೆ ಪೊಟ್ಯಾಶ್. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದ ಕೃಷಿ ಭೂಮಿಯಲ್ಲಿ ಪ್ರತಿ ಹೆಕ್ಟೇರ್ ನಲ್ಲಿ 40 ರಿಂದ 60 ಟನ್ ಪೊಟ್ಯಾಶ್ ಲಭ್ಯವಿದ್ದು, ಅದು ಬಳಸಿದಂತೆಲ್ಲಾ ಮತ್ತೆ ಮತ್ತೆ ಪೊಟ್ಯಾಶ್ ಉತ್ಪತ್ತಿಯಾಗುತ್ತದೆ. ಅಂದರೆ ಮುಂದಿನ ಸಾವಿರಾರು ವರ್ಷ ನಾವು ರಾಸಾಯನಿಕ ಪೊಟ್ಯಾಶ್ ಬಳಸದೆ ಸಾಕಷ್ಟು ಇಳುವರಿ ಪಡೆಯಬಹುದು. ಆದರೆ ಪ್ರತಿ ಹಂತಗಳಲ್ಲಿ ಕೇವಲ 0.002% ಪೊಟ್ಯಾಶ್ ಮಾತ್ರ ಕೆನೆಪದರಾಗಿ ಲಭ್ಯ ಪೊಟ್ಯಾಶ್ ರೂಪದಲ್ಲಿ(K2o) ಬೆಳೆಗಳಿಗೆ ಸಿಗುತ್ತದೆ. ಅದೂ ಭೂಮಿಯ ಭೌತಿಕ ರಚನೆ ಸರಿಯಾಗಿದ್ದು ತಟಸ್ಥ pH, ನಿಯಮಿತ ಪ್ರಮಾಣದ ಒಳಗೆ ಕ್ಲೋರೈಡ್ಸ ಇದ್ದರೆ ಮಾತ್ರ ಪೊಟ್ಯಾಶ್ ಲಭ್ಯ ರೂಪಕ್ಕೆ ಬರುತ್ತದೆ. ರಾಸಾಯನಿಕ ಗೊಬ್ಬರ ಬಳಕೆ ನಿಲ್ಲಿಸಿ ಕಲುಷಿತ ನೀರಿನ ಬದಲಾಗಿ ಸಾಧ್ಯವಾದಷ್ಟು ಮಳೆನೀರು ಸಂಗ್ರಹಿಸಿ ಬಳಸುವುದು.
ಸಸ್ಯ ತ್ಯಾಜ್ಯ, ಪಶುತ್ರ್ಯಾಜ್ಯ ಮುಂತಾದ ಸಾವಯವ ಗೊಬ್ಬರ (ಮಳ್ಳಿ ಗೊಬ್ಬರ ಅಲ್ಲಾ) ಬಳಸಿ ಪ್ರಾಚುರಿಯಿ ಅರಾಂಟ್ಸಾ ಎಂಬ ಪೊಟ್ಯಾಶ್ ಬಿಡುಗಡೆ ಮಾಡುವ ಅಣುಜೀವಿ ಸಂತತಿ ಹೆಚ್ಚಿಸಿ ಕೊರತೆಯಾಗಲಾರದಷ್ಟು ಪೊಟ್ಯಾಶ್ ಪಡೆಯಬಹುದು. ಈ ಪೊಟ್ಯಾಶ್ ಅಣುಜೀವಿಗಳ ಸಂಖ್ಯೆ ಹೆಚ್ಚಿದಂತೆ ಈ ಅಣುಜೀವಿಗಳ ಸ್ರವಿಸುವ ಗ್ಲೂಕೋನಿಕ್ ಆಸಿಡ್ ಕಠಿಣ ಪೊಟ್ಯಾಷನ್ನು ಲಭ್ಯ ಪೊಟ್ಯಾಷಾಗಿ ಪರಿವರ್ತಿಸುತ್ತದೆ.
ಇನ್ನು 150 ರಿಂದ 160 ಗ್ರಾಮ ತೂಕದ ಬಲಿತ ಬಾಳೆ ಹಣ್ಣಿನಲ್ಲಿ 280 ರಿಂದ 300 ಮಿಲಿ ಗ್ರಾಂ ನಷ್ಟು ಪೊಟ್ಯಾಶ್ ಸಿಗುತ್ತದೆ. ಹೂವು ಬೆಳವಣಿಯ ಹಂತದಲ್ಲಿಯೇ ಇರುವುದರಿಂದ ಇದರಲ್ಲಿ ಹೆಚ್ಚೆಂದರೆ 1 ಕೆಜಿಗೆ 85 mg ಪೊಟ್ಯಾಶ್ ಸಿಗುತ್ತದೆ. ಅದೇ ಕಂದುಗಳಲ್ಲಿ ಹೊಸ ಬೇರುಗಳ ಬೆಳವಣಿಗೆ ಅತಿ ಹೆಚ್ಚು ರಂಜಕವನ್ನು ಸಂಗ್ರಹಿಸುವುದರಿಂದ ಕಾಂಪೋಸ್ಚ ತಯಾರಿಸುವಾಗ ಕಂದುಗಳನ್ನು ಕತ್ತರಿಸಿ ಮಿಶ್ರಣ ಮಾಡುವುದರಿಂದ ಶಕ್ತಿಯುತ ಕಾಂಪೋಸ್ಚ ತಯಾರಿಸಿಕೊಳ್ಳಬಹುದು.
ನಾನಂತೂ ನಮ್ಮ ಭೂಮಿಯ ರಸಸಾರಕ್ಕೆ ಹೊಂದಿಕೊಳ್ಳುವಂತೆ ” ಫೋಟೊಮಿಕ್ ” ಹೆಸರಿನ ಪೊಟ್ಯಾಶ್ ಮೊಬಲೈಜರ ನ್ನು ನಮ್ಮದೇ ಲ್ಯಾಬನಲ್ಲಿ ಬೆಳೆಸಿ ಬಳಸುವುದರಿಂದ ಕಳೆದ 10 ವರ್ಷದಿಂದ ಹಿಡಿಯಷ್ಟೂ ರಾಸಾಯನಿಕ ರೂಪದ ಬಳಸಿಲ್ಲಾ. ಇದನ್ನು ನಿಮ್ಮಲ್ಲಿಯೇ ತಯಾರಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ: ಡಾ ಮಲ್ಲಪ್ಪ ವಾಯ್ ಕಟ್ಟಿ, ರೊಹಿಣಿ ಬಯೋಟೆಕ್, ಮಹಾಲಿಂಗಪೂರ, 9845553416
ಬೆಳ್ತಂಗಡಿಯ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವಿನೂತನ ಶೋರೂಮ್ ಉದ್ಘಾಟನೆ ಸಮಾರಂಭದ ಹಿನ್ನೆಲೆಯಲ್ಲಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಸಂಪಾಜೆ ಗ್ರಾಮ ಪಂಚಾಯತ್…
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 852.6 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದ್ದು,…
ಬೆಂಗಳೂರಿನಲ್ಲಿ ಈ ಹಿಂದೆ ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ…
ರಾಜ್ಯದ ಜೇನುತುಪ್ಪಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹಾಗೂ ಮಾರುಕಟ್ಟೆ ಒದಗಿಸಲು ತೋಟಗಾರಿಕಾ ಇಲಾಖೆಯಿಂದ…