ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಣಿವೆ ಕೊಪ್ಪಲು ಅರಣ್ಯ ಪ್ರದೇಶದಲ್ಲಿಂದು ತಾಯಿಯ ಹೆಸರಿನಲ್ಲೊಂದು ಒಂದು ಗಿಡ ಎಂಬ ಅಭಿಯಾನಕ್ಕೆ ಉಪ ಅರಣ್ಯಾಧಿಕಾರಿ ಎಸ್.ಸೋಮ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿನಿ ಶ್ರಾವಣಿ, ತಾಯಿ ಮಗುವನ್ನು ಪೋಷಣೆ ಮಾಡುವ ರೀತಿಯಲ್ಲಿ ಭೂಮಿಯನ್ನು ನಾವು ಸಂರಕ್ಷಣೆ ಮಾಡಬೇಕಿದೆ. ತಾಯದಿಂದರ ಹೆಸರಿನಲ್ಲಿ ಒಂದೊಂದು ಗಿಡ ನೆಟ್ಟಿದ್ದು, ಪೋಷಣೆ ಮಾಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು. ಅಭಿಯಾನದಲ್ಲಿ ಉಪ ಅರಣ್ಯಾಧಿಕಾರಿ ಯೋಗೇಶ್, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ವೇಳೆ, ಗಿಡ ನೆಡುವ ಕುರಿತು ವಿದ್ಯಾರ್ಥಿಗಳಿಗೆ ಅರಣ್ಯಾಧಿಕಾರಿಗಳು ಪ್ರಾತ್ಯಕ್ಷಿಕೆ ನೀಡಿದರು. ವಿದ್ಯಾರ್ಥಿ ಮನೋಜ್, ಅಭಿಯಾನದ ಅಂಗವಾಗಿ ಒಂದು ಸಾವಿರ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಳಜಿ ವಹಿಸಲಾಗುತ್ತಿದೆ ಎಂದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel