ಓದು ಎಷ್ಟು ಮುಖ್ಯವೋ… ಛಲ, ಶ್ರಮ, ಪರಿಶ್ರಮ ಮುಖ್ಯವೂ ಅಷ್ಟೇ ಮುಖ್ಯ | ಕೋಳಿ ವ್ಯಾಪಾರದಿಂದ 2 ತಿಂಗಳಿಗೆ ₹4 ಲಕ್ಷ ಸಂಪಾದಿಸುವ ಯುವಕ

February 8, 2024
1:37 PM

ವಿದ್ಯೆ ಅತೀ ಅಗತ್ಯ. ಆದರೆ ವಿದ್ಯೆ(Education) ಇಲ್ಲದಿದ್ದರೇನು..? ಭೂಮಿ ತಾಯಿ, ನಂಬಿಕೆ, ಶ್ರದ್ಧೆ, ಶ್ರಮ ಎಂದೂ ಕೈಬಿಡುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಪರಿಶ್ರಮ ಒಂದಿದ್ದರೆ ಜೀವನದಲ್ಲಿ(Life) ಏನು ಬೇಕಾದರೂ ಸಾಧಿಸಬಹುದು. ನಮ್ಮ ದೇಶದಲ್ಲಿ ರೈತರು(Farmer)ಕೃಷಿಯ(Agriculture) ಜೊತೆಗೆ ಕೆಲವು ಪೂರಕ ವ್ಯಾಪಾರ ಮಾಡುತ್ತಾರೆ. ಅದರಲ್ಲಿ ಕೋಳಿ ಸಾಕಾಣಿಕೆಯೂ(poultry farming) ಒಂದು. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡವರು ಹೆಚ್ಚಿನ ಆದಾಯವನ್ನೂ ಪಡೆಯುತ್ತಾರೆ.

Advertisement
Advertisement

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಂದೀಪ್ ಮತ್ಸಾಗರ್ ಎಂಬಾತ ಕೋಳಿ ವ್ಯಾಪಾರ ಆರಂಭಿಸಿ ಇಂದು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಸಂದೀಪ್ ಮತ್ಸಾಗರ್ ಛತ್ರಪತಿ ಸಂಭಾಜಿನಗರ ಜಿಲ್ಲೆಯ ವೈಜಾಪುರ ತಾಲೂಕಿನ ಜರುಲ್ ಎಂಬ ಸಣ್ಣ ಹಳ್ಳಿಯವರು. ಸಂದೀಪ್ ತಂದೆ ತಾಯಿ ಇಬ್ಬರೂ ಕೃಷಿ ಕೆಲಸ ಮಾಡುತ್ತಾರೆ. ಸಂದೀಪ್ ಓದಿದ್ದು 12ನೇ ತರಗತಿವರೆಗೆ ಮಾತ್ರ. ಮುಂದೆ ಉದ್ಯೋಗದ ಗ್ಯಾರಂಟಿ ಇಲ್ಲದ ಕಾರಣ ಏನಾದರೂ ವ್ಯಾಪಾರ ಮಾಡಲು ನಿರ್ಧರಿಸಿದರು.ಅವರು ಆರಂಭದಲ್ಲಿ ಬಟ್ಟೆ ಅಂಗಡಿಯನ್ನು ಪ್ರಾರಂಭಿಸಿದರು. ಆದರೆ ಈ ಬಟ್ಟೆ ಅಂಗಡಿಯಲ್ಲಿ ಅವರು ಬಯಸಿದ ಯಶಸ್ಸು ಸಿಗಲಿಲ್ಲ. ಅಲ್ಲದೆ ಕೋವಿಡ್​ ಲಾಕ್‌ಡೌನ್‌ನಲ್ಲಿ ಅವರು ಅಂಗಡಿಯನ್ನು ಮುಚ್ಚಬೇಕಾಯಿತು. ಈ ಅಂಗಡಿ ಮುಚ್ಚಿರುವುದರಿಂದ ಈಗ ಏನು ವ್ಯಾಪಾರ ಮಾಡಬೇಕು ಎಂಬ ಪ್ರಶ್ನೆ ಅವರ ಮುಂದೆ ಎದ್ದಿತು.

Advertisement

ಸ್ನೇಹಿತರ, ಹಿತೈಷಿಗಳು, ತಮ್ಮ ಹಳ್ಳಿಯ ಜನರಲ್ಲಿ ಯಾವ ವ್ಯಾಪಾರ ಶುರುಮಾಡಬೇಕು ಎಂದು ಕೇಳಿದಾಗ ಎಲ್ಲರೂ ಕೋಳಿ ವ್ಯಾಪಾರ ಮಾಡುವಂತೆ ಸಲಹೆ ನೀಡಿದರು. ಸಂದೀಪ್‌ಗೆ ಕೋಳಿ ವ್ಯಾಪಾರವನ್ನು ಹೇಗೆ ಪ್ರಾರಂಭಿಸಬೇಕು ಎಂದು ತಿಳಿದಿರಲಿಲ್ಲ. ಇದಕ್ಕಾಗಿ ಅವರು ಎಲ್ಲಾ ಕಡೆ ಹೋಗಿ ವಿಚಾರಣೆಗಳನ್ನು ಮಾಡಿದರು. ಅವರು ಇತರ ಕೋಳಿ ಫಾರಂಗಳನ್ನು ನೋಡಿದರು ಮತ್ತು ನಂತರ ಅವರು ಕೋಳಿ ಫಾರ್ಮ್ ಅನ್ನು ಪ್ರಾರಂಭಿಸಬೇಕು ಎಂದು ನಿರ್ಧರಿಸಿದರು. ಸಂದೀಪ್ ತಮ್ಮ ಜಮೀನಿನಲ್ಲಿ ಎಸಿ ಪೌಲ್ಟ್ರಿ ಫಾರಂ ಆರಂಭಿಸಲು ನಿರ್ಧರಿಸಿದರು.

ಇದಕ್ಕಾಗಿ ಅವರು ತಮ್ಮ ಸಹೋದರ ಮತ್ತು ತಂದೆಯ ಸಹಾಯದಿಂದ ಈ ಕೋಳಿ ಫಾರ್ಮ್ ಅನ್ನು ಪ್ರಾರಂಭಿಸಿದರು. ಸಂದೀಪ್‌ಗೆ ಎರಡು ಶೆಡ್‌ಗಳ ನಿರ್ಮಿಸಿಕೊಂಡರು. ಈ ಸ್ಥಳವು 30 ರಿಂದ 32 ಸಾವಿರ ಕೋಳಿಗಳನ್ನು ಸಾಕುವ ಸಾಮರ್ಥ್ಯವನ್ನು ಹೊಂದಿದೆ. ಕುತೂಹಲಕಾರಿ ಎಂದರೆ ಈ ಕೋಳಿ ಫಾರ್ಮ್ ಎಸಿ ಯಿಂದ ಕೂಡಿದೆ. ಈ ಪಕ್ಷಿಗಳು ಎರಡು ತಿಂಗಳಲ್ಲಿ ಸಿದ್ಧವಾಗುತ್ತವೆ. ತದನಂತರ ಅವರು ಅದನ್ನು ಟೈ ಅಪ್ ಮಾಡಿಕೊಂಡಿರುವ ಕಂಪನಿಗೆ ಕಳುಹಿಸುತ್ತಾರೆ. ಇದರಿಂದ ಪ್ರತಿ 2 ತಿಂಗಳಿಗೆ 4ರಿಂದ 5 ಲಕ್ಷ ಆದಾಯ ಪಡೆಯುತ್ತಾರೆ.

Advertisement

ನಾನು ಈ ವ್ಯವಹಾರವನ್ನು ಪ್ರಾರಂಭಿಸಿದಾಗ, ಆರಂಭದಲ್ಲಿ ನಾನು ದೊಡ್ಡ ನಷ್ಟವನ್ನು ಅನುಭವಿಸಿದ್ದೆ. ಆದರೆ ಕ್ರಮೇಣ ಈ ಇಡೀ ವ್ಯವಹಾರದ ಬಗ್ಗೆ ತಿಳಿದುಕೊಂಡು ಈಗ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದೇನೆ ಎಂದು ರೈತ ಸಂದೀಪ್​ ಮತ್ಸಾಗರ ತಿಳಿಸಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ

You cannot copy content of this page - Copyright -The Rural Mirror