The Rural Mirror ವಾರದ ವಿಶೇಷ

ಮೈಕ್ರೋಪ್ಲಾಸ್ಟಿಕ್‌ಗಳು ಕೃಷಿಗೆ ಅಡ್ಡಿ-ಇಳುವರಿಯ ಮೇಲೆ ಪರಿಣಾಮ | ವಿಜ್ಞಾನಿಗಳಿಂದ ಎಚ್ಚರಿಕೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮೈಕ್ರೋಪ್ಲಾಸ್ಟಿಕ್‌ಗಳ ಮಾಲಿನ್ಯವು ಸಸ್ಯಗಳ ದ್ಯುತಿಸಂಶ್ಲೇಷಣೆಯ ಸಾಮರ್ಥ್ಯವನ್ನುಕಡಿಮೆಗೊಳಿಸುತ್ತದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ. ಪ್ಲಾಸ್ಟಿಕ್ ಕಣಗಳು ಗಿಡಗಳ ಮೇಲೆ ಪರಿಣಾಮ ಬೀರುವ ಕಾರಣದಿಂದ ಪ್ರಪಂಚದ ಪ್ರಮುಖ ಬೆಳೆಗಳಾದ ಗೋಧಿ, ಅಕ್ಕಿ ಮತ್ತು ಮೆಕ್ಕೆಜೋಳಗಳಲ್ಲಿ 4% ರಿಂದ 14% ರಷ್ಟು ನಷ್ಟವಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಹೆಚ್ಚಿನ ಮೈಕ್ರೋಪ್ಲಾಸ್ಟಿಕ್‌ಗಳು ಪರಿಸರಕ್ಕೇ ಸುರಿಯುವುದರಿಂದ ಮುಂದೆ ಇನ್ನಷ್ಟು ಹದಗೆಡಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.……..ಮುಂದೆ ಓದಿ…..

Advertisement

ಮೈಕ್ರೋಪ್ಲಾಸ್ಟಿಕ್‌ಗಳು ಸಸ್ಯ ದ್ಯುತಿಸಂಶ್ಲೇಷಣೆಗೆ ಅಡ್ಡಿಯಾಗುವ ಕಾರಣದಿಂದ ಗಿಡಗಳಿಗೆ ಆಹಾರ ಸರಬರಾಜನ್ನು ಗಮನಾರ್ಹವಾಗಿ ಕಡಿತಗೊಳಿಸುತ್ತಿದೆ ಎಂದು ಅಧ್ಯಯನದಲ್ಲಿ ಕಂಡುಹಿಡಿಯಲಾಗಿದೆ. ಗಿಡಗಳಿಗೆ ಆಹಾರ ಸರಬರಾಜು ಕಡಿಮೆಯಾಗುವ ಕಾರಣದಿಂದ ಇಳುವರಿಯ ಮೇಲೂ ಗಂಭೀರವಾದ ಹೊಡೆತ ಬೀಳುತ್ತಿದೆ. ಗೋಧಿ, ಅಕ್ಕಿ, ಜೋಳ ಇತ್ಯಾದಿ ಬೆಳೆಗಳಲ್ಲಿ ಇದು ಶೀಘ್ರ ಪರಿಣಾಮ ಕಂಡುಬಂದರೆ, ದೀರ್ಘಾವಧಿ ಬೆಳೆಗಳಲ್ಲೂ ನಿಧಾನವಾದ ಪರಿಣಾಮ ಗೋಚರಿಸಲಿದೆ.  ಈಗಾಗಲೇ  ವ್ಯಾಪಕವಾದ ಪ್ಲಾಸ್ಟಿಕ್ ಕಣಗಳಿಂದಾಗಿ ಪ್ರಪಂಚದ ಪ್ರಮುಖ ಬೆಳೆಗಳಾದ ಗೋಧಿ, ಅಕ್ಕಿ ಮತ್ತು ಮೆಕ್ಕೆಜೋಳಗಳಲ್ಲಿ 4% ರಿಂದ 14% ರಷ್ಟು ನಷ್ಟವಾಗುತ್ತಿದೆ ಎಂದು  ಅಂದಾಜಿಸಿದೆ. 2022 ರಲ್ಲಿ ಸುಮಾರು 700 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದರು. ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವು ಮುಂದಿನ ಎರಡು ದಶಕಗಳಲ್ಲಿ ಹಸಿವಿನ ಅಪಾಯದಲ್ಲಿರುವ ಸಂಖ್ಯೆಯನ್ನು ಇನ್ನೂ 400 ಮಿಲಿಯನ್ ಹೆಚ್ಚಿಸಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ, ಇದನ್ನು ಜಾಗತಿಕ ಆಹಾರ ಭದ್ರತೆಗೆ “ಆತಂಕಕಾರಿ ಸನ್ನಿವೇಶ” ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

“ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌”ನಲ್ಲಿ ಪ್ರಕಟವಾದ ಈ ಅಧ್ಯಯನ ವರದಿಯಲ್ಲಿ ಸಸ್ಯಗಳ ಮೇಲೆ ಮೈಕ್ರೋಪ್ಲಾಸ್ಟಿಕ್‌ಗಳ 157 ಅಧ್ಯಯನಗಳ ಸುಮಾರು 3,000 ಕ್ಕೂ ಹೆಚ್ಚು ಅವಲೋಕನಗಳನ್ನು ದಾಖಲಿಸಲಾಗಿದೆ.

ಮೈಕ್ರೋಪ್ಲಾಸ್ಟಿಕ್‌ಗಳಿಂದ ಉಂಟಾಗುವ ವಾರ್ಷಿಕ ಬೆಳೆ ನಷ್ಟವು ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ  ಉಂಟಾಗುವ ಬೆಳೆ ನಷ್ಟಗಳಿಗೆ ಹೋಲುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಜಗತ್ತು ಈಗಾಗಲೇ ಸಾಕಷ್ಟು ಸುಸ್ಥಿರ ಆಹಾರವನ್ನು ಉತ್ಪಾದಿಸುವ ಸವಾಲನ್ನು ಎದುರಿಸುತ್ತಿದೆ, ಜಾಗತಿಕ ಜನಸಂಖ್ಯೆಯು 2058 ರ ಸುಮಾರಿಗೆ 10 ಬಿಲಿಯನ್‌ಗೆ ಏರುವ ನಿರೀಕ್ಷೆಯಿದೆ.ಹೀಗಾಗಿ ಮುಂದಿನ ದಿನಗಳಲ್ಲಿ ತಾಪಮಾನದ ಜೊತೆಗೆ ಮೈಕ್ರೋಪ್ಲಾಸ್ಟಿಕ್‌ ಕೂಡಾ ಸವಾಲಾಗಲಿದೆ. ಈ ಮೈಕ್ರೋಪ್ಲಾಸ್ಟಿಕ್‌ ಈಗಾಗಲೇ ಕೃಷಿಯೊಳಗೆ ಇಳಿದಾಗಿದೆ. ಪರಿಸರಕ್ಕೆ-ಕೃಷಿಗೆ ಸುರಿಯಲಾಗುವ ಅಪಾರ ಪ್ರಮಾಣದ ತ್ಯಾಜ್ಯದಿಂದ ಮೈಕ್ರೋಪ್ಲಾಸ್ಟಿಕ್‌ಗಳು ವಿಭಜನೆಯಾಗುತ್ತವೆ. ಅವುಗಳು ಸೂರ್ಯನ ಬೆಳಕನ್ನು ಬಹುವಿಧಗಳಲ್ಲಿ ಪಡೆಯಲು ಸಸ್ಯಗಳಿಗೆ ಅಡ್ಡಿಯಾಗುತ್ತವೆ.

ಜನರ ದೇಹವು ಕೂಡಾ ಈಗಾಗಲೇ ಆಹಾರ ಮತ್ತು ನೀರಿನ ಮೂಲಕ ಸೇವಿಸಲ್ಪಡುವ ಮೈಕ್ರೋಪ್ಲಾಸ್ಟಿಕ್‌ಗಳಿಂದ ಕಲುಷಿತಗೊಂಡಿದೆ. ಅವು ರಕ್ತ, ಮಿದುಳು, ಮೂಳೆ ಮಜ್ಜೆಯಲ್ಲಿ ಕಂಡುಬಂದಿವೆ. ಮಾನವನ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ಈಗ ಹೆಚ್ಚಾಗಿ ತಿಳಿದಿಲ್ಲ, ಆದರೆ ಅವು ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತವೆ ಎಂದು ಅಧ್ಯಯನ ಹೇಳಿದೆ.

ಮಾಲಿನ್ಯಕಾರಕ ಪ್ಲಾಸ್ಟಿಕ್ ಕಣಗಳು ಎಲೆಗಳನ್ನು‌ ತಲಪಿದಾಗ ಸೂರ್ಯನ ಬೆಳಕನ್ನು ಹೀರಲು ಅಡ್ಡಿಯಾದರೆ,  ಮಣ್ಣಿನ ಮೂಲಕ ಗಿಡದ ಆರೋಗ್ಯಕ್ಕೂ ಹಾನಿಯಾಗುತ್ತದೆ. ಸಸ್ಯಗಳು ಸೂಕ್ಷ್ಮ ಪ್ಲಾಸ್ಟಿಕ್‌ಗಳನ್ನು ಹೀರಿದಾಗ, ಅವು ಗಿಡಗಳ ಒಳಗಿರುವ ಪೋಷಕಾಂಶಗಳು ಮತ್ತು ನೀರಿನ ದಾರಿಗಳನ್ನು ತಡೆಯುತ್ತವೆ, ಜೀವಕೋಶಗಳಿಗೆ ಹಾನಿಯಾಗುತ್ತದೆ.  ಹೀಗಾಗಿ ದ್ಯುತಿಸಂಶ್ಲೇಷಕ ದ್ರವ್ಯ ಕ್ಲೋರೊಫಿಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.  ಮೈಕ್ರೋಪ್ಲಾಸ್ಟಿಕ್‌ಗಳು ಭೂಮಿಯ ಮೇಲಿನ ಸಸ್ಯಗಳ ದ್ಯುತಿಸಂಶ್ಲೇಷಣೆಯನ್ನು ಸುಮಾರು 12% ಮತ್ತು ಸಾಗರ ತಳದಲ್ಲಿರುವ ಸಮುದ್ರ ಪಾಚಿಗಳಲ್ಲಿ ಸುಮಾರು 7% ರಷ್ಟು ಕಡಿಮೆ ಮಾಡಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಗಿಡಗಳ ಇಳುವರಿ ನಷ್ಟದಿಂದ ಆಹಾರ ಉತ್ಪಾದನೆಯ ಮೇಲೂ ಸಮುದ್ರ ಪಾಚಿಯಲ್ಲಿನ ಬೆಳವಣಿಗೆ ಕುಂಠಿತದಿಂದ ಮೀನು ಹಾಗೂ ಇತರ ಜಲಚರಗಳ ಮೇಲೆ ಪರಿಣಾಮ ಬೀರುತ್ತದೆ.

ಪರಿಸರದ ಅಲ್ಲಲ್ಲಿ ಎಸೆಯುವ ಪ್ಲಾಸ್ಟಿಕ್‌ ಗಳು ಹಾಗೂ ಮೈಕ್ರೋ ಪ್ಲಾಸ್ಟಿಕ್‌ಗಳ ಮೇಲ್ನೋಟಕ್ಕೆ ಯಾವುದೇ ಪರಿಣಾಮ ಕಂಡುಬಾರದೇ ಇದ್ದರೂ ಪರಿಸರದಲ್ಲಿ ಅತಿ ಸೂಕ್ಷ್ಮ ಬದಲಾವಣೆಗಳು ನಡೆಯುತ್ತಿರುತ್ತದೆ. ಇದರ ಪರಿಣಾಮ ಕೃಷಿಯ ಮೇಲೆಯೂ ನಡೆಯುತ್ತಿರುತ್ತದೆ. ದೀರ್ಘಾವಧಿ ಬೆಳೆಯಲ್ಲಿ ನಿಧಾನವಾಗಿ ಗೋಚರವಾದರೆ, ಅಲ್ಪಾವಧಿ ಬೆಳೆಯಲ್ಲಿ ಬಹುಬೇಗನೆ ಪರಿಣಾಮಗಳು ಗೋಚರಿಸುತ್ತವೆ. ಹೀಗಾಗಿ ಪ್ಲಾಸ್ಟಿಕ್‌ ಬಳಕೆಯಲ್ಲಿ ಇನ್ನಷ್ಟು ಎಚ್ಚರಿಕೆ ಅಗತ್ಯ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …

ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…

60 minutes ago

ಅಡಿಕೆ ಧಾರಣೆ ಏರುಪೇರು ಯಾಕಾಗಿ?

ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…

8 hours ago

ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ

ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…

11 hours ago

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

11 hours ago

ಕೇತುವಿನಿಂದ 18 ತಿಂಗಳು ಈ ರಾಶಿಯವರಿಗೆಲ್ಲಾ ಉತ್ತಮವಾಗಲಿದೆ |

ಹೆಚ್ಚಿನ ವೈಯಕ್ತಿಕ ಸಲಹೆಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

15 hours ago