ಕ್ಯಾಂಪ್ಕೊ ನಿರಂತರ ಪ್ರಯತ್ನ | ಅಡಿಕೆಯ ಸಂಶೋಧನೆಗೆ ಕೇಂದ್ರ ಕೃಷಿ ಸಚಿವಾಲಯ ನಿರ್ಧಾರ |

December 4, 2024
7:34 PM
ಅಡಿಕೆ ಮತ್ತು ಮಾನವರ ಆರೋಗ್ಯದ ಕುರಿತು ಪುರಾವೆ ಆಧಾರಿತ ಸಂಶೋಧನೆ” ನಡೆಸಲು ನಿರ್ಧರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಕ್ಯಾಂಪ್ಕೊ ಶ್ಲಾಘಿಸಿದೆ.

ಅಡಿಕೆ ಕ್ಯಾನ್ಸರ್‌ಕಾರಕವೆಂದು ವರ್ಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾದವನ್ನು ಪುರಾವೆ ಸಮೇತ ಸಂಸದರಿಗೆ ಮನವರಿಕೆ ಮಾಡಿಸಿದ ಕ್ಯಾಂಪ್ಕೊದ ಪ್ರಯತ್ನಕ್ಕೆ ಯಶಸ್ಸು ಲಭಿಸಿದೆ.  ಸಂಸತ್ ಅಧಿವೇಶನದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಪ್ರಯತ್ನದಿಂದಾಗಿ , “ಅಡಿಕೆ ಮತ್ತು ಮಾನವರ ಆರೋಗ್ಯದ ಕುರಿತು ಪುರಾವೆ ಆಧಾರಿತ ಸಂಶೋಧನೆ” ನಡೆಸಲು ನಿರ್ಧರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಕ್ಯಾಂಪ್ಕೊ ಶ್ಲಾಘಿಸಿದೆ. ಇದಕ್ಕೆ ಶ್ರಮಿಸಿದ ಅಡಿಕೆ ಬೆಳೆಯುವ ಪ್ರದೇಶದ ಎಲ್ಲಾ ಸಂಸದರಿಗೆ ಹಾಗೂ ಭಾರತೀಯ ಜೀವನ ಕ್ರಮದಲ್ಲಿ ಅಡಿಕೆಯ ಪಾತ್ರವನ್ನು ಗುರುತಿಸಿರುವ ಕೇಂದ್ರ ಕೃಷಿಸಚಿವರಿಗೆ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್‌ ಕೊಡ್ಗಿ ಅಡಿಕೆ ಬೆಳೆಗಾರರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement
Advertisement
Advertisement

ವಿಶ್ವಆರೋಗ್ಯಸಂಸ್ಥೆ , ತಪ್ಪುಗ್ರಹಿಕೆಯಿಂದ ಅಡಿಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಿರುವ ಕ್ರಮದ ವಿರುದ್ಧ ಕ್ಯಾಂಪ್ಕೊ ಮಾಧ್ಯಮಗಳು ಮತ್ತು ಜನಪ್ರತಿನಿಧಿಗಳ ಮೂಲಕ ನಿರಂತರ ಅಭಿಯಾನವನ್ನು ಮಾಡುತ್ತಲೇ ಬಂದಿದ್ದು, ಕೊನೆಗೂ ಸರಕಾರಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ಸನ್ನು ಪಡೆದಿದೆ. ಎಐಐಎಮ್ಎಸ್, ಸಿಎಸ್ಐಆರ್-ಸಿಸಿಎಮ್ಬಿ, ಐಐಎಸ್ಸಿ ಮುಂತಾದ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಸಹಕಾರದ ಮೂಲಕ “ಅಡಿಕೆ ಮತ್ತು ಮಾನವನ ಆರೋಗ್ಯ ಬಗ್ಗೆ ಪುರಾವೆ ಆಧಾರಿತ ಸಂಶೋಧನೆ” ನಡೆಸಲು ಕೇಂದ್ರ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ. ಇದರಿಂದ ಅಡಿಕೆಯ ಕುರಿತು ಇರುವ ತಪ್ಪು ಗ್ರಹಿಕೆ ಹೋಗಲಾಡಿಸಿ ,ಅದರ ಆರೋಗ್ಯಕರ ಉಪಯೋಗಗಳ ವೈಜ್ಞಾನಿಕ ದಾಖಲೆ ಸಿಗಲು ಸಾಧ್ಯವಾಗಲಿದೆ.

Advertisement

ಕೇಂದ್ರ ಸರಕಾರದ ನಿರ್ಧಾರವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಆದಷ್ಟು ಬೇಗ ಸಂಶೋಧನೆ ಪ್ರಾರಂಭಿಸುವಂತೆ ಅಡಿಕೆ ಬೆಳೆಯುವ ಪ್ರದೇಶಗಳ ಸಂಸದರು ಸರಕಾರವನ್ನು ಒತ್ತಾಯಿಸಲು ಕ್ಯಾಂಪ್ಕೊ ಎಲ್ಲಾ ಸಂಸದರಲ್ಲಿ ಮನವಿ ಮಾಡಿದೆ.

ಅಡಿಕೆಯನ್ನು ಗುಟ್ಕಾ ಮತ್ತು ತಂಬಾಕಿನ ಜೊತೆ ಮಿಶ್ರಣ ಮಾಡಿದ ಉತ್ಪನ್ನಗಳ ಸಂಶೋಧನಾ ವರದಿಗಳನ್ನು ಗಣನೆಗೆ ತೆಗೆದುಕೊಂಡು ವಿಶ್ವಆರೋಗ್ಯಸಂಸ್ಥೆಯು ಅಡಿಕೆಯನ್ನು ಕ್ಯಾನ್ಸರ್‌ಕಾರಕವೆಂದು ವರ್ಗೀಕರಣಮಾಡಿತ್ತು. ಆದರೆ ಕ್ಯಾಂಪ್ಕೊ ಮೊದಲಿನಿಂದಲೂ ಅಡಿಕೆಯ ಮೂಲರೂಪದಲ್ಲಿನ ಉಪಯೋಗವನ್ನು ಸಂಶೋಧಿಸಿ ವರ್ಗೀಕರಿಸಬೇಕೆಂದು ಪ್ರತಿಪಾದಿಸುತ್ತಲೇ ಬಂದಿದೆ. ಆ ರೀತಿಯಲ್ಲಿ ಮಾಡಿದ ಪ್ರತೀಯೊಂದು ಸಂಶೋಧನಾ ವರದಿಗಳು ಅಡಿಕೆ ಕ್ಯಾನ್ಸರ್‌ ರೋಗವನ್ನು ಪ್ರತಿಬಂಧಿಸುವ ಔಷಧೀಯ ಗುಣಗಳ ಬಗ್ಗೆ ಸಾಕ್ಷೀಕರಿಸಿದ ದಾಖಲೆಗಳಿವೆ.

Advertisement

ಕೇಂದ್ರ ಸರಕಾರದ ಅನುಮೋದನೆಯಿಂದ ಲಕ್ಷಾಂತರ ಅಡಿಕೆಬೆಳೆಗಾರರ ಹಿತಕಾಪಾಡಲು ಶ್ರಮಿಸುತ್ತಿರುವ ಕ್ಯಾಂಪ್ಕೊದ ಪ್ರಯತ್ನಕ್ಕೆ ನೈತಿಕ ಬಲಸಿಕ್ಕಿದೆ. ಈ ಯಶಸ್ಸಿಗೆ ಕಾರಣಕರ್ತರಾದ ಕೇಂದ್ರ ಕೃಷಿಸಚಿವರಿಗೆ ಹಾಗೂ ಎಲ್ಲಾ ಸಂಸದರಿಗೆ ಸಮಸ್ತ ಅಡಿಕೆ ಬೆಳೆಗಾರರ ಪರವಾಗಿ ಕ್ಯಾಂಪ್ಕೊ ಕೃತಜ್ಞತೆ ಸಲ್ಲಿಸುತ್ತದೆ.

The CAMPCO Ltd., (The Central Arecanut and Cocoa Marketing and Processing Cooperative Limited) expresses its heartfelt gratitude to all the Members of Parliamentof Areca Growing areas and the Union Ministry of Agriculture and Farmers Welfare for their unwavering support and recognition of the vital role of Arecanut in India’s socio-cultural, religious, and economic landscape.

Advertisement

The Ministry has positively responded to CAMPCO’s persistent efforts and longstanding requests to address the contentious classification of Arecanut as carcinogenic by the World Health Organization (WHO). After thorough deliberation and advocacy by CAMPCO, the Ministry has approved a groundbreaking, collaborative research initiative involving premier institutes of India, including AIIMS, CSIR-CCMB, IISc, and others. This comprehensive study, titled “Evidence-Based Research on Arecanut and Human Health”, aims to clarify the misconceptions surrounding Arecanut and provide conclusive scientific evidence about its health effects.

In this regard, CAMPCO has also urged the Members of Parliament from areca-growing regions to impress upon the concerned Ministry to commence the research work at the earliest, ensuring swift action on the research initiative.

Advertisement

The WHO’s classification of Arecanut was primarily based on research that examined its consumption as part of mixtures like betel quid and gutka, which include harmful additives. CAMPCO has consistently pointed out the flaws in this approach, emphasizing the need to differentiate the health impact of pure Arecanut from those of such mixtures. Furthermore, emerging studies have highlighted potential anticancer properties of Arecanut’s active compounds, which require further exploration. This new research initiative is a significant step toward filling these knowledge gaps.

CAMPCO extends its gratitude to the Union Ministry of Agriculture for acknowledging these concerns and initiating research that safeguards the interests of lakhs of Arecanut farmers. This development reinforces CAMPCO’s dedication to protecting farmers’ livelihoods and advocating for scientific clarity on Arecanut’s role in human health.

Advertisement

CAMPCO also thanks the MPs from Arecanut-growing regions of Karnataka and Kerala for their consistent advocacy and support in addressing this major issue. This milestone highlights the power of collective efforts for the welfare of farmers.

As always, CAMPCO remains steadfast in its commitment to advocating for the well-being of farmers and protecting the legacy of Arecanut, a crop that is deeply intertwined with India’s heritage and rural livelihoods.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror