Advertisement
MIRROR FOCUS

ಅಡಿಕೆ ಸಿಪ್ಪೆಯ ಅಂಶಗಳು ಬ್ಯಾಟರಿ ತಂತ್ರಜ್ಞಾನಕ್ಕೆ ಬಳಕೆ | ಅಡಿಕೆ ಸಿಪ್ಪೆಯ ಪರ್ಯಾಯ ಬಳಕೆಯ ಹೆಜ್ಜೆ |

Share

ಅಡಿಕೆ ಸಿಪ್ಪೆಯ ಹೊಸ ಬಳಕೆಯ ಬಗ್ಗೆ ಕೆಲವು ವರ್ಷಗಳಿಂದ ಅಧ್ಯಯನ ನಡೆಯುತ್ತಿತ್ತು. ಇದೀಗ ಸಂಶೋಧಕರ ತಂಡವು ಅಡಿಕೆ ಸಿಪ್ಪೆಯ ಅಂಶಗಳನ್ನು ಬ್ಯಾಟರಿ ತಂತ್ರಜ್ಞಾನದಲ್ಲಿ ಬಳಕೆ ಮಾಡುವ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇದು ಹೊಸ ಸಾಧ್ಯತೆಯನ್ನು ತೆರೆದಿರಿಸಿದೆ.

ಹೊಸ ಬೆಳೆವಣಿಗೆಯೊಂದರಲ್ಲಿ ಅಡಿಕೆ ಸಿಪ್ಪೆಯೂ ಈಗ ಬಳಕೆಯ ಕಡೆಗೆ ಹೆಜ್ಜೆ ಹಾಕುತ್ತಿದೆ. ಭವಿಷ್ಯದಲ್ಲಿ ಅಡಿಕೆ ಸಿಪ್ಪೆಯ ಬೇಡಿಕೆಯ ಸಾಧ್ಯತೆಯನ್ನು ತೆರೆದಿರಿಸಿದೆ. ಸಂಶೋಧಕರ ತಂಡವು ಅಡಿಕೆಯ ಸಿಪ್ಪೆಯಿಂದ ನ್ಯಾನೊ ಸಂಯುಕ್ತಗಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿ, ಬ್ಯಾಟರಿ ತಂತ್ರಜ್ಞಾನದಲ್ಲಿ ಪ್ರಗತಿಗೆ ದಾರಿ ಮಾಡಿಕೊಟ್ಟಿದೆ. ತಂಡವು ಲಿಥಿಯಂ-ಐಯಾನ್ ಬ್ಯಾಟರಿಗಳಲ್ಲಿ ಬಳಸಲು ನ್ಯಾನೊ ಸಿಲಿಕಾನ್ ಅನ್ನು ಅಡಿಕೆ ಸಿಪ್ಪೆಯಿಂದ ಉತ್ಪಾದಿಸಿದೆ. ಅಡಿಕೆ ಸಿಪ್ಪೆಯಿಂದ ಬೇರ್ಪಟ್ಟ ಸಿಲಿಕಾನ್ ನ್ಯಾನೊಕಾಂಪೊಸಿಟ್‌ಗಳ ವಿಶಿಷ್ಟ ಆಕಾರ ಮತ್ತು ರಚನೆಯು ಬ್ಯಾಟರಿಯು ಬಹು ಕಾಲದ ಚಾರ್ಜ್ ಮತ್ತು ಡಿಸ್ಚಾರ್ಜ್ ಗಳಿಗೆ ಒಳಗಾಗಲು ಅನುವು ಮಾಡಿಕೊಡುತ್ತದೆ ಎನ್ನುವುದು ಸಂಶೋಧನೆಯಿಂದ ತಿಳಿದಿದೆ.

ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದ ಸ್ವಾಮಿ ಅನಂತ ತೀರ್ಥ ಕ್ಯಾಂಪಸ್‌ನ ಸ್ಕೂಲ್ ಆಫ್ ಕೆಮಿಕಲ್ ಸೈನ್ಸಸ್‌ನ ಪ್ರಮುಖ ಸಂಶೋಧಕರಾದ ಅಂಜಲಿ ಪರವನ್ನೂರ್ ಮತ್ತು ಬೈಜು ವಿಜಯನ್ ಅವರ ಪ್ರಕಾರ, ಈ ಸಿಲಿಕಾನ್ ಆಧಾರಿತ ಲಿಥಿಯಂ ಬ್ಯಾಟರಿಗಳು ಪ್ರಸ್ತುತ ಪ್ರಚಲಿತದಲ್ಲಿರುವ ಗ್ರ್ಯಾಫೈಟ್ ಆಧಾರಿತ ಎಲೆಕ್ಟ್ರೋಡ್‌ಗಳಿಗೆ ಹೋಲಿಸಿದರೆ ನಾಲ್ಕು ಪಟ್ಟು ಶೇಖರಣಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ.

ಅಡಿಕೆ ಸಿಪ್ಪೆಯನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸುವ ಮೂಲಕ, ಈ ತಂಡವು ಕೃಷಿ ತ್ಯಾಜ್ಯವನ್ನು ನಿರ್ವಹಿಸಲು ಪ್ರಾಯೋಗಿಕ ಪರಿಹಾರವನ್ನು ನೀಡಿದೆ, ಮಾತ್ರವಲ್ಲ ಪರಿಸರ ಸ್ನೇಹಿಯಾದ ಮಹತ್ತರವಾದ ಹೆಜ್ಜೆಯೂ ಆಗಿದೆ.

A new use for Arecanut husks has been under study for a few years. Now a team of researchers has studied the use of Arecanut shell components in battery technology. This opens up new possibilities.

Source : The Hindu

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…

5 hours ago

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

18 hours ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

1 day ago

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…

2 days ago

ಗುಜ್ಜೆ-ಕಡಲೆ ಗಸಿ – ಸರಳ ಪದಾರ್ಥಗಳಿಂದ ಸೊಗಸಾದ ಸಾಂಪ್ರದಾಯಿಕ ಸವಿರುಚಿ!

ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…

3 days ago