ಕಾಫಿ ಬೆಳೆಗಾರರಿಗೆ(Coffee planters) ಸಿಹಿ ಸುದ್ದಿ. 2024-25 ನೆ ಸಾಲಿಗೆ ಕಾಫಿ ಮಂಡಳಿವತಿಯಿಂದ(coffee board) ಒಟ್ಟಾರೆ ಕಾಫಿ ತೋಟದ ಅಭಿವೃದಿ(development) ಪಡಿಸುವ ದೃಷ್ಟಿಯಿಂದ ಈ ಕೆಳಕಂಡ ಕಾರ್ಯಚಟುವಟಿಗಳಿಗಾಗಿ ಸಹಾಯಧನದ(subsidy) ಅನುಮೋದನೆ ದೊರೆತಿರುತ್ತದೆ.
1. ಕಾಫಿ ಮರುನಾಟಿ (Replantation)
2. ನೀರಾವರಿ ಯೋಜನೆಯಡಿ – ಕೆರೆ/ತೆರೆದಬಾವಿ/ರಿಂಗ್ ಬಾವಿ/ಸ್ಪ್ರಿಂಕ್ಲರ್ ಇರ್ರಿಗೇಷನ್ / ಹನಿ ನೀರಾವರಿಗೆ
3. ಕಾಫಿಗೋಡೌನ್ / ಕಾಫಿ ಕಣ /ಪಲ್ಪರ್ ಯುನಿಟ್ /Eco-pulper ಮೆಕಾನಿಕಲ್ ಡ್ರೈಯರ್/ಸೋಲಾರ್ ಟನೆಲ್ ಡ್ರೈಯರ್
4. ಬಿಳಿಕೊಂಡ ಕೊರಕದ ಹತೋಟಿ ಗಾಗಿ- Non-woven Fabric wraping material
5. ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಇತ್ಯಾದಿ.
ಈ ಮೇಲ್ಕಂಡ ಚಟುವಟಿಕೆಗಳನ್ನು ತಮ್ಮ ತೋಟದಲ್ಲಿ ಅಬಿವೃದ್ದಿ ಪಡಿಸಲಿಚ್ಚಿಸುವ ಆರ್ಹ ಕಾಫಿ ಬೆಳೆಗಾರರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ . ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/09/2024.
ಆರ್ಹತೆ : 25 Ha (62 ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಜಿ ಸಲ್ಲಿಸಬಹುದು. ದಾಖಲಾತಿಗಳ ವಿವರ :
- ಅರ್ಜಿದಾರರ ಫೋಟೋ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
- 2024-25 ನೇ ಸಾಲಿನ ಪಹಣಿಗಳು
- ಖಾತಾ ನಕಲು (katha extract)
- ತೋಟದ ಅಂದಾಜು ನಕ್ಷೆ (Estate boundary sketch)
- ಕ್ವೇಟೇಷನ್/ ಪ್ಲಾನ್ & ಎಸ್ಟಿಮೇಷನ್.
- ಜಾತಿ ಪ್ರಮಾಣ ಪತ್ರ (SC/ST ಕಾಫಿ ಬೆಳೆಗಾರರಿಗೆ ) ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.