ಕುರಿಸಾಕಾಣಿಕೆ ಅದೇಷ್ಟೋ ಯುವಕರು ತಮ್ಮ ಸ್ವಂತ ಉದ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಗ್ರಾಮೀಣ ಭಾಗದತ್ತ ನೋಡುವುದಾರೆ ಕುರಿಸಾಕಾಣಿಕೆಯನ್ನು ಸ್ವಯಂ ಉದ್ಯೋಗವನ್ನಾಗಿಸಲು ಸಾಧ್ಯವಿಲ್ಲ. ಇದಕ್ಕಾಗಿ ಗ್ರಾಮೀಣ ಭಾಗದವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಜಾರಿಗೆ ತಂದಿದೆ.
ಯೋಜನೆಯ ಒಟ್ಟು ವೆಚ್ಚ ಮತ್ತು ಸಹಾಯಧನ: ಒಂದು ಕುರಿ ಸಾಕಾಣಿಕೆ ಘಟಕದ ಒಟ್ಟು ವೆಚ್ಚವನ್ನು ಸರ್ಕಾರ ರೂ, 1,75,000 ಎಂದು ನಿಗದಿಪಡಿಸಿದೆ. ಈ ಮೊತ್ತವನ್ನು ಕೆಳಕಂಡಂತೆ ಹಂಚಿಕೆ ಮಾಡಲಾಗುತ್ತದೆ:
• ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (NCDC) ಮೂಲಕ ಶೇ.50% ಸಾಲ (ರೂ 87,500)
• ಶೇ. 25% ಸರ್ಕಾರದ ಸಹಾಯಧನ ( ರೂ 43,750) ಮರುಪಾವತಿ ಅಗತ್ಯವಿಲ್ಲ
• ಶೇ. 25% ಫಲಾನುಭವಿಯ ವಂತಿಕೆ ರೂ43,750 ಅರ್ಜಿದಾರರು ಭರಿಸಬೇಕಾದ ಮೊತ್ತ
• 20 ಹೆಣ್ಣು ಕುರಿ ಅಥವಾ ಮೇಕೆಗಳು
• 1 ಗಂಡು ಟಗರರು ಅಥವಾ ಹೋತ
ಅಗತ್ಯ ದಾಖಲೆಗಳು :
* ಆಧಾರ್ ಕಾರ್ಡ್
• ಪಡಿತರ ಚೀಟಿ
• ಬ್ಯಾಂಕ್ ಪಾಸ್ ಬುಕ್ ಪ್ರತಿ
• ಭಾವಚಿತ್ರ
• ಜಾತಿ ಪ್ರಮಾಣ ಪತ್ರ
• ಸಹಕಾರಿ ಸಂಘದ ಸದಸ್ಯತ್ವದ ಪುರಾವೆ
ಅರ್ಜಿ ಸಲ್ಲಿಸುವ ವಿಧಾನ : ನಿಮ್ಮ ತಾಲೂಕಿನ ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿಗೆ ಭೇಟಿ ನೀಡಿ, ಅಧಿಕೃತ ಅರ್ಜಿ ಸಲ್ಲಿಸಿ.


