ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬೆಳೆಗಳಾದ(commercial crop) ಸಂಬಾರ ಬೆಳೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಾಳು ಮೆಣಸು ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಅದೇ ರೀತಿಯಲ್ಲಿ ಏಲಕ್ಕಿ, ಚಕ್ಕೆ ಲವಂಗ, ಜಾಯಿಕಾಯಿ ಸೇರದಂತೆ ಎಲ್ಲಾ ಸಾಂಬಾರ ಪದಾರ್ಥಗಳ(Spice crop) ಬೆಲೆ(Price) ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ರೈತರು(Farmers) ಪರ್ಯಾಯ ಬೆಲೆಯಾಗಿ ಸಂಬಾರ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಸಂಬಾರು ಬೆಳೆಗಾರರಿಗೆ ಸಹಾಯಧನಕ್ಕಾಗಿ(Subsidy) ಅರ್ಜಿ ಆಹ್ವಾನಿಸಲಾಗಿದೆ. 2024 – 25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವತಿಯಿಂದ(Karnataka State Commodity Development Board) ಸಂಬಾರು ಬೆಳೆಗಾರರಿಂದ(Cultivators) ಈ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ತೋಟಗಾರಿಕೆ ನಿಗಮ ಮತ್ತು ಮಂಡಳಿಗಳಿಗೆ ಸಹಾಯಧನ ಉಪಯೋಜನೆಯಡಿ ಯಾಂತ್ರೀಕರಣ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಅನುಮೋದಿತ ಸರಬರಾಜುದಾರರು, ಕಂಪನಿಗಳಿಂದ ರೈತರು ಖರೀದಿಸುವ ಅನುಮೋದಿತ ಯಂತ್ರೋಪಕರಣಗಳಿಗೆ ಹಾಗೂ ಸಂಬಾರು ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕ, ಸೌರ ಶಾಖ ಘಟಕಗಳಿಗೆ ಇಲಾಖಾ ಮಾರ್ಗಸೂಚಿಗಳನ್ವಯ ರಾಜ್ಯದ ಆಸಕ್ತ ಸಂಬಾರು ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ? : ರೈತರು ಮಂಡಳಿಯ ಜಾಲತಾಣದ ಮೂಲಕ ಅರ್ಜಿಗಳನ್ನು ಪಡೆಯಬಹುದು. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. ಆಸಕ್ತಿಯುಳ್ಳ ಸಂಬಾರು ಬೆಳೆಗಾರರು ಸಹಾಯಧನಕ್ಕಾಗಿ ಮಂಡಳಿಗೆ ಜುಲೈ 20 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮೊದಲು ಬಂದವರಿಗೆ ನಿಯಮಾನುಸಾರ ಮೊದಲ ಆದ್ಯತೆ ನೀಡುವ ಮೂಲಕ ನಿಗದಿಪಡಿಸಿದ ಆರ್ಥಿಕ ಹಾಗೂ ಭೌತಿಕ ಗುರಿಗಳ ಮಿತಿಯಲ್ಲಿ ಸಹಾಯಧನ ನೀಡಲಾಗುವುದು. http://kssdb.karnataka.gov.in
ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ : ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ನೇಕಾರ ಭವನ, ವಿದ್ಯಾನಗರ, ಹುಬ್ಬಳ್ಳಿ ಕಾರ್ಯಾಲಯ ಅಥವಾ ದೂರವಾಣಿ ಸಂಖ್ಯೆ 0836-2375030 ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.
- ಅಂತರ್ಜಾಲ ಮಾಹಿತಿ