Advertisement
ಸುದ್ದಿಗಳು

ಗ್ರಾಮೀಣ ಭಾಗದಲ್ಲಿ ಉದ್ಯಮ ಸ್ಥಾಪಿಸಲು 15 ಲಕ್ಷ ರೂ.ಸಹಾಯಧನ

Share

ಗ್ರಾಮೀಣ ಭಾಗದಲ್ಲಿ ಸ್ವಂತ ಉದ್ಯಮಗಳನ್ನು ಆರಂಭಿಸುವವರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವ ಯೋಜನೆಯ ಅಡಿಯಲ್ಲಿ ರೂ 15 ಲಕ್ಷ ಸಹಾಯಧನ ನೀಡಲು ಮುಂದಾಗಿದೆ. ಈ ಯೋಜನೆಯು ರಾಗಿ ಹಿಟ್ಟು, ಗಾಣದ ಎಣ್ಣೆ, ಬೆಲ್ಲದ ಪಾಕ, ಮೆಣಸಿನ ಪುಡಿ, ಹಣ್ಣಿನ ಜಾಮ್, ಸಿರಿಧಾನ್ಯದ ಉತ್ಪನ್ನಗಳು ಇಂತಹ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವವರಿಗೆ ನೀಡಲಾಗುವುದು. ಇಂತಹ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಗರಿಷ್ಠ ₹15 ಲಕ್ಷ ಸಹಾಯಧನ ಲಭ್ಯವಿದೆ. ಈ ಯೋಜನೆಯು 2020ರಲ್ಲಿ ಆರಂಭವಾಗಿ 2026 ರವರೆಗೆ ವಿಸ್ತರಣೆಯಾಗಿದ್ದು, ಕರ್ನಾಟಕದಲ್ಲಿ ಈಗಾಗಲೇ ಸಾವಿರಾರು ಘಟಕಗಳು ಯಶಸ್ವಿಯಾಗಿ ನಡೆಯುತ್ತಿವೆ.

Advertisement
Advertisement

ಒಟ್ಟು ಸಹಾಯಧನ: ಯೋಜನಾ ವೆಚ್ಚದ 35% ಅಥವಾ ಗರಿಷ್ಠ ₹15 ಲಕ್ಷ ಆಗಿರುತ್ತದೆ. ಇದರಲ್ಲಿ ಕೇಂದ್ರ ಪಾಲು ₹10 ಲಕ್ಷದವರೆಗೆ 35% . ಉಳಿದಂತೆ ರಾಜ್ಯ ಪಾಲು ಹೆಚ್ಚುವರಿಯಾಗಿ ₹9 ಲಕ್ಷದವರೆಗೆ ಅಂದರೆ ಕರ್ನಾಟಕದ ವಿಶೇಷ ನೆರವು.
ಈ ಯೋಜನೆಗೆ  18 ವರ್ಷ ತುಂಬಿದ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಬಹುದು. ರೈತರು, ಮಹಿಳೆಯರು, ಯುವಕರು, ಸ್ವ-ಸಹಾಯ ಗುಂಪುಗಳು , ರೈತ ಉತ್ಪಾದಕ ಸಂಘಗಳು, ಸಹಕಾರಿ ಸಂಘಗಳು, ಖಾಸಗಿ ಸಂಸ್ಥೆಗಳು ,  ಈಗಾಗಲೇ ಬ್ಯಾಂಕ್ ಸಾಲ ಪಡೆದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ

ಸಿರಿಧಾನ್ಯ ಸಂಸ್ಕರಣಾ ಘಟಕಗಳು (ರಾಗಿ, ಜೋಳ, ನವಣೆ, ಸಾಮೆ), ಗಾಣದ ಎಣ್ಣೆ (ಕೋಲ್ಡ್ ಪ್ರೆಸ್ಡ್ ಆಯಿಲ್) ಘಟಕಗಳು, ಬೆಲ್ಲ ಮತ್ತು ಸಕ್ಕರೆ ಆಧಾರಿತ ಉತ್ಪನ್ನ ಘಟಕಗಳು, ಮಸಾಲಾ ಪುಡಿ ಘಟಕಗಳು, ಹಣ್ಣು-ತರಕಾರಿ ಸಂಸ್ಕರಣಾ ಘಟಕಗಳು , ಬೇಕರಿ ಮತ್ತು ಸ್ನ್ಯಾಕ್ಸ್ ಘಟಕಗಳು, ಮೀನು, ಕೋಳಿ ಸಂಸ್ಕರಣಾ ಘಟಕಗಳು, ಸಾವಯವ ಉತ್ಪನ್ನ ಘಟಕಗಳಿಗೆ  ಸಹಾಯಧನ ಸಿಗುತ್ತದೆ.

ಕರ್ನಾಟಕದಲ್ಲಿ ಸುಮಾರು 22,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದೆ. 7,000ಕ್ಕೂ ಹೆಚ್ಚು ಘಟಕಗಳಿಗೆ ಸಹಾಯಧನ ಮಂಜೂರಾತಿಯಾಗಿದೆ. ಇದರಲ್ಲಿ 1,800ಕ್ಕೂ ಹೆಚ್ಚು ಸಿರಿಧಾನ್ಯ ಘಟಕಗಳು, 800ಕ್ಕೂ ಹೆಚ್ಚು ಗಾಣದ ಎಣ್ಣೆ ಘಟಕಗಳು, 400ಕ್ಕೂ ಹೆಚ್ಚು ಬೆಲ್ಲ ಘಟಕಗಳು ಸೇರಿವೆ.

ಹೆಚ್ಚಿನ ಮಾಹಿತಿಗೆ  –  https://pmfme.mofpi.gov.in  ಅಥವಾ  ಕರ್ನಾಟಕ ಮಾಹಿತಿ: https://kappec.karnataka.gov.in

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

6 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

6 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

6 hours ago

ಮಾಯಾಮೃಗ ಮಾಯಾಮೃಗ….

ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…

6 hours ago

ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ  ಅಗತ್ಯ ಕ್ರಮ…

7 hours ago

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು…

16 hours ago