ವ್ಯಕ್ತಿಯ ಜೀವನದಲ್ಲಿ ಸಾಧನೆ ಒಂದು ಅತ್ಯುನ್ನತ ಗುರಿ. ಆದರೆ ಆ ಸಾಧನೆಯ ಮೂಲದಲ್ಲಿ ಯಾವ ಮಾರ್ಗವಿದೆ ಎಂಬುದೇ ಅದರ ಶ್ರೇಷ್ಠತೆಯನ್ನು ನಿರ್ಧರಿಸುತ್ತದೆ. ಸ್ವಧರ್ಮ, ಸ್ವಪರಿಶ್ರಮ, ಸತ್ಯ–ನೈತಿಕತೆಯ ಆಧಾರದಲ್ಲಿ ಬಂದ ಸಾಧನೆ ಶಾಶ್ವತವಾದ ಬೆಳಕಿನಂತೆ ಕಂಗೊಳಿಸುತ್ತದೆ. ಆದರೆ ಇತರರ ಪರಿಶ್ರಮ, ಬಲಿದಾನ, ಕಷ್ಟಗಳನ್ನು ಮೆಟ್ಟಿಲು ಮಾಡಿಕೊಂಡು ಬಂದ ಸಾಧನೆ ತಾತ್ಕಾಲಿಕ ಹೊಳಪನ್ನು ತರುವುದಷ್ಟೇ; ಅಂತಃಕರಣದಲ್ಲಿ ಅದು ಆತ್ಮವಂಚನೆಯ ಅಂಧಕಾರವನ್ನೇ ಉಂಟುಮಾಡುತ್ತದೆ. ಉಪನಿಷತ್ತುಗಳು, ಗೀತಾ ಮತ್ತು ಪುರಾಣಗಳು ಈ ಸತ್ಯವನ್ನು ಮರುಮರುವಾಗಿ ಪ್ರತಿಪಾದಿಸಿವೆ.
ಉಪನಿಷತ್ತುಗಳು “ಸತ್ಯಂ ವದ, ಧರ್ಮಂ ಚರ” ಎಂದು ಹೇಳುತ್ತವೆ. ಸತ್ಯ ಮತ್ತು ಧರ್ಮವನ್ನು ಬದಿಗೊತ್ತಿ, ಇತರರ ಕಷ್ಟವನ್ನು ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡುವುದು, ಉಪನಿಷತ್ತಿನ ಮೌಲ್ಯಗಳಿಗೆ ವಿರುದ್ಧ. ಕಠೋಪನಿಷತ್ತು ಯಲ್ಲಿ ನಚಿಕೆತನು ಯಮಧರ್ಮರಾಜರಿಂದ ಶ್ರೇಯಸ್ಸು–ಪ್ರೇಯಸ್ಸುಗಳ ನಡುವಿನ ವ್ಯತ್ಯಾಸವನ್ನು ಕಲಿಯುತ್ತಾನೆ. ಪ್ರೇಯಸ್ಸು ಅಂದರೆ ಸುಲಭವಾಗಿ ಕಾಣುವ ತಾತ್ಕಾಲಿಕ ಲಾಭ; ಶ್ರೇಯಸ್ಸು ಅಂದರೆ ನೈತಿಕತೆಯಿಂದ ಬಂದ ಶಾಶ್ವತ ಮಂಗಳ. ಇತರರ ಪರಿಶ್ರಮದಿಂದ ಬಂದ ಸಾಧನೆ ಪ್ರೇಯಸ್ಸಿನಂತದ್ದು – ಹೊಳೆಯುವಂತಿದ್ದರೂ ನಾಶವಾಗುತ್ತದೆ.
ಉಪನಿಷತ್ ನಲ್ಲಿ ಹೇಳಿದಂತೆ “ಶ್ರೇಯೋ ಹಿ ಜ್ಞಾನಮಭ್ಯಾಸಾಜ್ಜ್ಞಾನಾದ್ಧ್ಯಾನಂ ವಿಶೇಷ್ಯತೇ ।
ಧ್ಯಾನಾತ್ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್ ॥
ಅಭ್ಯಾಸಕ್ಕಿಂತ ಜ್ಞಾನ ಶ್ರೇಷ್ಠ, ಧ್ಯಾನ ಇನ್ನೂ ಶ್ರೇಷ್ಠ, ಆದರೆ ಕರ್ಮಫಲತ್ಯಾಗವೇ ಶಾಂತಿಯ ಮೂಲ.
ಇಲ್ಲಿ ಕರ್ಮಫಲತ್ಯಾಗ ಎಂದರೆ—ಇತರರ ಫಲವನ್ನು ಕಸಿದುಕೊಳ್ಳದೆ, ತಮ್ಮ ಪರಿಶ್ರಮದ ಫಲವನ್ನು ಶುದ್ಧವಾಗಿ ಅನುಭವಿಸುವುದು. ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆಗೆ ಶಾಂತಿ ದೊರೆಯುವುದಿಲ್ಲ.
ಮಹಾಭಾರತದಲ್ಲಿ ಕೌರವರು ಪಾಂಡವರ ಹಕ್ಕುಗಳನ್ನು ಕಸಿದುಕೊಂಡು ತಮ್ಮ ಸಾಮ್ರಾಜ್ಯ ಕಟ್ಟಲು ಪ್ರಯತ್ನಿಸಿದರು. ಅವರು ತಾತ್ಕಾಲಿಕವಾಗಿ ಎತ್ತರಕ್ಕೇರುತ್ತಿದ್ದಂತೆ ತೋರಾದರೂ, ಅವರ ಸಾಧನೆ ಆತ್ಮವಂಚನೆಯ ಫಲವಾಗಿದ್ದರಿಂದ ಕುರುಕ್ಷೇತ್ರದಲ್ಲಿ ಸಂಪೂರ್ಣವಾಗಿ ಕುಸಿದುಹೋಯಿತು.
ಭಾಗವತಪುರಾಣದಲ್ಲಿ ಕಂಸನು ದೇವಕಿಯ ಮಕ್ಕಳನ್ನು ಕೊಂದು, ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಯತ್ನಿಸಿದನು. ಆದರೆ ಅದು ಇತರರ ಕಷ್ಟವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ; ಕೊನೆಗೆ ಕೃಷ್ಣನ ಕೈಯಲ್ಲಿ ಅವನು ನಾಶವಾಯಿತು.
ಈ ಎಲ್ಲ ಪುರಾಣೋಕ್ತ ಉದಾಹರಣೆಗಳು ಒಂದು ಮಾತನ್ನು ಸಾರುತ್ತವೆ—ಇತರರ ಪರಿಶ್ರಮ, ಹಕ್ಕು, ಗೌರವವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆಗೆ ಶಾಶ್ವತತೆ ಇಲ್ಲ.
ನೈತಿಕ ದೃಷ್ಟಿಯಲ್ಲಿ ನೋಡುವುದಾದರೆ , ಇತರರ ಶ್ರಮವನ್ನು ಕಸಿದುಕೊಂಡವನು ತನ್ನ ಮನಸ್ಸಿನಲ್ಲಿ ಅಪರಾಧ ಭಾವದಿಂದ ನರಳುತ್ತಾನೆ. ಆತ್ಮವಂಚನೆ ಅಂದರೆ ತನ್ನ ಅಂತರಂಗದ ಸತ್ಯವನ್ನು ನಿರ್ಲಕ್ಷಿಸುವುದು. ಇದು ನೈತಿಕತೆಯ ಕುಸಿತ. ಇದರಿಂದಾಗಿ ಸಮಾಜದಲ್ಲಿ ವಿಶ್ವಾಸ ಕುಸಿಯುತ್ತದೆ. ಜನರಲ್ಲಿ ಅಸಮಾನತೆ ಬೆಳೆದು, ನ್ಯಾಯ–ಧರ್ಮಗಳ ಮೇಲೆ ನಂಬಿಕೆ ಕಡಿಮೆಯಾಗುತ್ತದೆ.
ಗೀತೆಯ ಪ್ರಕಾರ ಇತರರ ಪರಿಶ್ರಮದ ಫಲವನ್ನು ತಮ್ಮದಾಗಿ ಘೋಷಿಸಿಕೊಂಡವನು “ಅಸುರಿ ಸಂಪತ್ತು”ಯನ್ನು ಬೆಳೆಸುತ್ತಾನೆ. ಅಂತಹ ಸಂಪತ್ತು ಕೊನೆಗೆ ಅವನ ಪತನಕ್ಕೆ ಕಾರಣವಾಗುತ್ತದೆ.
ಇದಕ್ಕೆ ವಿರುದ್ಧವಾಗಿ, ನಿಜವಾದ ಸಾಧನೆ ಎಂದರೆ ಸ್ವಂತ ಪರಿಶ್ರಮದಿಂದಲೇ ಬಂದ ಎತ್ತರ. ಇತರರ ಶ್ರಮಕ್ಕೆ ಮಾನ್ಯತೆ ನೀಡಿ, ಅವರನ್ನು ಉತ್ತೇಜಿಸುವ ವ್ಯಕ್ತಿ ಶಾಶ್ವತ ಗೌರವ ಪಡೆಯುತ್ತಾನೆ. ಗಾಂಧೀಜಿಯವರು ತಮ್ಮ ಸಾಧನೆಯನ್ನು ಸದಾ ಜನಶಕ್ತಿಯ ಫಲವೆಂದು ಘೋಷಿಸಿದರು. ಆದ್ದರಿಂದ ಅವರ ಸಾಧನೆ ಕೇವಲ ರಾಜಕೀಯ ವಿಜಯವಲ್ಲ, ನೈತಿಕ ಜಯವೂ ಆಗಿತ್ತು.
ಇತರರ ಕಷ್ಟವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ಎಂದಿಗೂ ಶಾಶ್ವತವಲ್ಲ. ಅದು ಪ್ರೇಯಸ್ಸಿನಂತದ್ದು—ಆಕರ್ಷಕವಾದರೂ ನಾಶವಾಗುವದು. ನಿಜವಾದ ಶ್ರೇಯಸ್ಸು ಎಂದರೆ ಸ್ವಧರ್ಮ, ಸ್ವಪರಿಶ್ರಮ, ಸತ್ಯ–ನೈತಿಕತೆಗಳಿಂದ ಬಂದ ಸಾಧನೆ.
ಆದ್ದರಿಂದಲೇ “ಪರರನ್ನು ಸಾಧನೆಯ ಮೆಟ್ಟಿಲಾಗಿಸಿದವನು, ಆತ್ಮವಂಚನೆಯ ಅಂಧಕೂಪಕ್ಕೆ ಬೀಳುತ್ತಾನೆ” ಎಂಬ ವಾಕ್ಯ ಕೇವಲ ಒಂದು ನುಡಿಗಟ್ಟಲ್ಲ, ಅದು ಮಾನವ ಜೀವನಕ್ಕೆ ಶಾಶ್ವತ ಮಾರ್ಗದರ್ಶನ ನೀಡುವ ತತ್ತ್ವ.
ಆದರಿಂದಲೇ ಪರರನ್ನು ಮೆಟ್ಟಿಲು ಮಾಡಿಕೊಂಡ ಸಾಧನೆ ಉರಿಯುವ ಬೆಂಕಿಯಂತದ್ದು,ಸ್ವಲ್ಪ ಹೊತ್ತು ಪ್ರಕಾಶಿಸಿದರೂ,ಅಂತಃಕರಣವನ್ನು ಕರಕಲಾಗಿಸುತ್ತದೆ..
ಸ್ವಶ್ರಮದ ಸಾಧನೆ ಮಂದಾಕಿನಿಯ ನೀರಿನಂತದ್ದು ನಿಶ್ಶಬ್ದವಾಗಿ ಹರಿದರೂ,ಜನ -ಮನ ಮತ್ತು ಮನೆ ತಂಪು ಮಾಡುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
………………….
True success comes from self-effort, truth, and ethics, while success built on others’ struggles is temporary and leads to inner moral collapse. Teachings from the Upanishads, Bhagavad Gita, and epics emphasize that ethical effort brings lasting peace and honor, whereas unethical gain leads to eventual downfall.
ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…
ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …
ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…
ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…
ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಕಾಡು ಬೆಂಕಿ ತಡೆಯಲು 970 ಕಿ.ಮೀ. ಬೆಂಕಿ ಪಥ…
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಫೆಬ್ರವರಿ 20ರಿಂದ 28ರವರೆಗೆ ರಾಷ್ಟ್ರ ಮಟ್ಟದ ಮಹಿಳಾ…