ಸಿರಿಧಾನ್ಯ ಕೃಷಿಯಲ್ಲಿ ಯಶಸ್ಸು | ವಾಣಿಜ್ಯ ಬೆಳೆಯಿಂದ ಹೊರಬಂದ ರೈತರು | 5 ಹಳ್ಳಿಯಲ್ಲಿ ರೈತರಿಂದ ಪ್ರಯೋಗ |

October 23, 2024
10:50 AM
ವಾಣಿಜ್ಯ ಬೆಳೆಯಿಂದ ಹೊರಬಂದು ಸಿರಿಧಾನ್ಯ ಬೆಳೆದು ಧಾನ್ಯ ಸಂಗ್ರಹಿಸಿ, ಸಂಸ್ಕರಿಸಿ, ತಾವೇ ಬ್ರಾಂಡಿಂಗ್‌ ಮಾಡಿ ಮಾರಾಟ ಮಾಡುವ ಮೂಲಕ ಯಶಸ್ವಿಯಾದ ಕೃಷಿಕರು ಹಾಗೂ ಕೃಷಿಕ ಪರವಾದ ರೈತ ಉತ್ಪಾದಕ ಕಂಪನಿಯ ಯಶೋಗಾಥೆ ಇದು.

ಇಂದು ಎಲ್ಲೆಲ್ಲೂ ವಾಣಿಜ್ಯ ಬೆಳೆಯದ್ದೇ ಹವಾ. ಬೆಳೆ ಬೆಳೆದು ಹೆಚ್ಚಿನ ಆದಾಯ ಪಡೆಯಬೇಕು ಎನ್ನುವುದಷ್ಟೇ ಎಲ್ಲರ ಗುರಿ. ಆದರೆ ಇದೊಂದು ಹಳ್ಳಿಯ ಜನರು ಹಣ ಮಾತ್ರವಲ್ಲ ಆರೋಗ್ಯವೂ ಬೇಕು ಎಂದು ವಾಣಿಜ್ಯ ಬೆಳೆಯಿಂದ ಸಿರಿಧಾನ್ಯ ಕೃಷಿಯತ್ತ ಮುಖ ಮಾಡಿದ್ದಾರೆ. ಅದರ ಜೊತೆಗೆ ಸಾವಯವ ಮಾದರಿಯನ್ನೂ ಅನುಸರಿಸಿಕೊಂಡು ಈಗ ತಾವೇ ಮಾರುಕಟ್ಟೆ ವ್ಯವಸ್ಥೆಯನ್ನೂ ಕಂಡುಕೊಂಡಿದ್ದಾರೆ. ಬಹುತೇಕ ಯಶಸ್ಸೂ ಕಂಡಿದ್ದಾರೆ. ಈ ಸಾಹಸಗಾಥೆಯ ವರದಿ ಇಲ್ಲಿದೆ……..ಮುಂದೆ ಓದಿ….

Advertisement
Advertisement
Advertisement
Advertisement

ಮಣ್ಣಿನ ಸಾರ, ಜನರ ಆರೋಗ್ಯ ಮತ್ತು ಪರಿಸರದ ಹಿತ ರಕ್ಷಣೆಯ ಉದ್ದೇಶದಿಂದ ಕೆಲವೇ ಕೆಲವು ರೈತರು ಆರಂಭಿಸಿದ ಕನಸೊಂದು ಫಲಕೊಡುತ್ತಿದೆ. ಸಾವಯವ ಧಾನ್ಯಗಳನ್ನು ಸಂಗ್ರಹಿಸಿ ಸಂಸ್ಕರಿಸಿ, ತಾವೇ ಬ್ರಾಂಡಿಂಗ್‌ ಮಾಡಿ ಮಾರಾಟ ಮಾಡುವ ಈ  ಕನಸು ತೆರೆದುಕೊಂಡದ್ದು ರಾಯಚೂರು ಜಿಲ್ಲೆಯ ಚಕ್ಕಲದಿನ್ನಿ ಗ್ರಾಮದಲ್ಲಿ. ಬೆಟ್ಟದ ಬಸವೇಶ್ವರ ರೈತ ಉತ್ಪಾದಕ ಕಂಪನಿಯು ರೈತರಿಗೆ ಬೆಂಗಾವಲಾಗಿ ನಿಂತಿರುವ ಸಂಸ್ಥೆ.

Advertisement

ರಾಯಚೂರು ಜಿಲ್ಲೆಯ ತುಂಗಭದ್ರಾ ನದಿ ನೀರಿನ ಸಮೃದ್ಧ ಕೃಷಿಯಲ್ಲಿ ತೊಡಗಿರುವ ಗ್ರಾಮದ ಪ್ರಗತಿಪರ ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದರು. ಹೆಚ್ಚಿನ ಲಾಭದ ದೃಷ್ಟಿಯಿಂದ ರಾಸಾಯನಿಕ, ಕೀಟನಾಶಕ ಬಳಕೆಯೂ ಅನಿವಾರ್ಯವಾಗಿತ್ತು. ಹೀಗೇ ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಲು ಹಾಗೂ ಆರೋಗ್ಯವೂ ಅಗತ್ಯ ಎಂದು ಪರಿಗಣಿಸಿ ಕೆಲವು ರೈತರು  ರಾಸಾಯನಿಕ ಹಾಕುವುದನ್ನು ನಿಲ್ಲಿಸುವ ನಿರ್ಧಾರ ಕೈಗೊಂಡರು. ಪರ್ಯಾಯ ಬೆಳೆಯತ್ತ ಯೋಚಿಸಿದಾಗ ಸಿರಿಧಾನ್ಯ ಗಮನಕ್ಕೆ ಬಂತು. ಇದಕ್ಕಾಗಿ  ಜನರ ಆರೋಗ್ಯ, ಮಣ್ಣಿನ ಫಲವತ್ತತೆ, ಮಾಲಿನ್ಯ ರಹಿತ ಪರಿಸರ ನಿರ್ಮಾಣದ ಕನಸಿನೊಂದಿಗೆ ಸಿರಿಧಾನ್ಯಗಳ ಕೃಷಿಯಲ್ಲಿ ತೊಡಗಿಕೊಂಡರು. ಆದರೆ ಸಹಜವಾಗಿಯೇ ರೈತರಿಗೆ ಮಾರುಕಟ್ಟೆ ಸಮಸ್ಯೆಯಾಯಿತು. ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಕೇಳಲು ಆರಂಭಿಸಿದಾಗ , ಸೋತರು. ಆದರೆ ಛಲ ಬಿಡಲಿಲ್ಲ, ಈಗ ತಾವೇ ಬೆಳೆದ ಊದಲು, ಕೊರಲೆ, ಆರಕ ಇತ್ಯಾದಿ ಸಿರಿಧಾನ್ಯಗಳನ್ನು ಸಂಸ್ಕರಿಸಿ ತಾವೇ ನೆರೆ ರಾಜ್ಯಗಳಿಗೆ ಮಾರುಕಟ್ಟೆ ಮಾಡುವ ಮೂಲಕ ಲಾಭವನ್ನೂ ಗಳಿಸುತ್ತಿದ್ದಾರೆ.ಇವರ ಕನಸಿಗೆ ಭಾರತೀಯ ಕೃಷಿ ಸಂಶೋಧನಾ ಕೇಂದ್ರ, ರಾಯಚೂರು ಕೃಷಿ ವಿಶ್ವವಿದ್ಯಾಲಯಗಳು ಘಟಕ ಆರಂಭಿಸಲು ಪ್ರೋತ್ಸಾಹ ನೀಡಿವೆ.ಬಸವೇಶ್ವರ ರೈತ ಉತ್ಪಾದಕ ಕಂಪನಿಯು ಕೆಲಸ ಮಾಡುತ್ತಿದೆ.

Advertisement

ತುಂಗಭದ್ರಾ ಆಸುಪಾಸಿನಲ್ಲಿ ನೀರು ಇರುವುದರಿಂದ ಹೆಚ್ಚು ಆದಾಯವೂ ಬರುತ್ತಿರುವುದರಿಂದ ವಾಣಿಜ್ಯ ಬೆಳೆಯತ್ತ ಆಸಕ್ತರಾಗಿದ್ದರು. ಸಿರಿಧಾನ್ಯ ಬೆಳೆದರೆ  ಮಾರುಕಟೆಯದ್ದೇ ಸಮಸ್ಯೆಯಾಗಿತ್ತು. ಯಾವಾಗ ರೈತ ಉತ್ಪಾದಕ ಕಂಪನಿಯು ರೈತರ ನೆರವಿಗೆ ಬಂದಿತೋ ಆಗ ಸಮಸ್ಯೆಗಳೂ ಬಗೆಹರಿದವು. ಸಂಸ್ಥೆಯಲ್ಲಿ ಸುಮಾರು 700 ಮಂದಿ ರೈತರು ಸದಸ್ಯರಾದರು, ಸುಮಾರು 5 ಗ್ರಾಮಗಳ ರೈತರು ಸಂಸ್ಥೆಯ ಜೊತೆ ಕೈಜೋಡಿಸಿದರು. ತಾವೇ ಸಿರಿಧಾನ್ಯ ಬೆಳೆಯಲು ಆರಂಭಿಸಿದರು. ಬ್ರಾಂಡಿಂಗ್‌ ಮಾಡಿ ಮಾರುಕಟ್ಟೆ ಮಾಡಲು ರೈತ ಉತ್ಪಾದಕ ಕಂಪನಿಯು ಪ್ರೊಸೆಸಿಂಗ್‌ ಯುನಿಟ್‌ ಸ್ಥಾಪಿಸಿ ರೈತರಿಗೂ ಉತ್ತಮ ಧಾರಣೆ ನೀಡಿ ಖರೀದಿ ಮಾಡಿತು. ಬಳಿಕ ತಮಿಳುನಾಡು, ಆಂಧ್ರಪ್ರದೇಶ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆಗೆ ಸರಬರಾಜು ಕೂಡಾ ಮಾಡಿತು ಈ ಸಂಸ್ಥೆ. ಈಗ ಉತ್ತಮ ಮಾರುಕಟ್ಟೆಯೂ ಸೃಷ್ಟಿಯಾಗಿದೆ. ರೈತರೂ ಆಸಕ್ತಿಯಿಂದ ಬೆಳೆಯುತ್ತಿದ್ದಾರೆ. ಈಗಾಗಲೇ 500 ಎಕ್ರೆ  ಪ್ರದೇಶದಲ್ಲಿ ರೈತರು ಸಿರಿಧಾನ್ಯ ಬೆಳೆಯುತ್ತಿದ್ದಾರೆ, ಮುಂದೆ ಇನ್ನೂ 200 ಎಕ್ರೆಯಷ್ಟು ಪ್ರದೇಶದಲ್ಲಿ ರೈತರು ಬೆಳೆಯುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಉತ್ಪಾದಕ ಕಂಪನಿಯ ರೈತ ಶರಣಗೌಡ.

Advertisement
ವಾಣಿಜ್ಯ ಬೆಳೆಗಳಿಗಿಂತಲೂ ಹೆಚ್ಚಿನ ಆದಾಯ ಇದೆ ಎಂದು ರೈತರು ಈಗ ಅನುಭವದಿಂದ ಹೇಳಲು ತೊಡಗಿದ್ದಾರೆ. ರಾಸಾಯನಿಕದ ಬಳಕೆಯೂ ಅಗತ್ಯ ಇಲ್ಲ ಎನ್ನುತ್ತಾರೆ ಯುವ ರೈತ ಅರುಣ್‌ ಕುಮಾರ್.

ಒಟ್ಟಿನಲ್ಲಿ ವಾಣಿಜ್ಯ ಬೆಳೆಗಳಿಂದ ಹೊರಬರಲು ಹಾಗೂ ರೈತರು ಬೆಳೆದ ಉತ್ಪನ್ನಗಳ ಮಾರುಕಟ್ಟೆ ಹಾಗೂ ಸಂಸ್ಕರಣೆಯ ಮೂಲಕ ಬ್ರಾಂಡಿಂಗ್‌ ಮಾಡುವ ರೈತ ಉತ್ಪಾದಕ ಕಂಪನಿಯ ಪ್ರಯತ್ನ ಮಾದರಿಯಾಗಿದೆ.

The objective of everyone is to cultivate commercial crops and increase their income. However, the residents of this village have shifted their focus to millet cultivation from commercial crops, as they prioritize not only financial gain but also health. They have now established a market system and many have achieved success. report on this development…..

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-10-2024 | ಸಾಮಾನ್ಯ ಮಳೆ ಮುಂದುವರಿಕೆ | ಅ.28 ರಿಂದ ತಾಪಮಾನದ ಕಾರಣದಿಂದ ಮಳೆ ಸಾಧ್ಯತೆ |
October 23, 2024
12:05 PM
by: ಸಾಯಿಶೇಖರ್ ಕರಿಕಳ
ಶರಾವತಿ ಮುಳುಗಡೆ ಸಂತ್ರಸ್ತರ ಹಕ್ಕುಪತ್ರ ನೀಡಲು ಒತ್ತಾಯಿಸಿ ಧರಣಿ
October 23, 2024
9:20 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಸ್ವಾತಂತ್ರ್ಯ ಹೋರಾಟಗಾರರು | ತಾಲೂಕು ಮಟ್ಟದ ಭಾಷಣ ಸ್ಪರ್ಧೆ
October 23, 2024
8:44 AM
by: ದ ರೂರಲ್ ಮಿರರ್.ಕಾಂ
ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |
October 23, 2024
8:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror