Advertisement
ಸುದ್ದಿಗಳು

#SuccessStory | ಭತ್ತದ ಜೊತೆ ಸುಗಂಧರಾಜ ಹೂವಿನ ಬೆಳೆ | ಜೀವನಕ್ಕಾಗಿ ಅಪ್ಪನ ಕೃಷಿ, ಮಗನ ಗಾಣ |

Share

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕೃಷಿಯನ್ನು ಜೀವನಕ್ಕಾಗಿ ನಂಬಿದ್ದರು. ಅದರಲ್ಲಿ ಲಾಭ, ನಷ್ಟದ ಮಾತೇ ಇರಲಿಲ್ಲ. ಆದರೆ ಈಗ ಹಾಗಲ್ಲ. ತನಗೆ ಮಾತ್ರವಲ್ಲ, ಅದೊಂದು ಉದ್ಯಮವಾಗಬೇಕು, ಭರಪೂರ ಬೆಳೆ ಬರಬೇಕು ಅನ್ನೊದೊಂದೇ ಕೃಷಿ ಎನ್ನಿಸಿಕೊಂಡಿದೆ. ಅಂದುಕೊಂಡಂತೆ ಕೃಷಿ ಕೈ ಹಿಡಿಯದಿದ್ದರೆ ಆತ್ಮಹತ್ಯೆ, ಕೃಷಿ ಮೇಲೆ ಜಿಗುಪ್ಸೆ ಹುಟ್ಟುತ್ತದೆ. ಇಂದಿನ ಅಪ್ಡೇಟ್‌ ಯುಗದಲ್ಲಿ ಕೃಷಿಯೂ ಅಪ್ಡೇಟ್‌ ಆಗಿದೆ.

ಇಲ್ಲೊಂದು ಮೈಸೂರಿನ ಕುಟುಂಬ ಜೀವನಕ್ಕಾಗಿ ಕೃಷಿ #Agriculture ಮಾಡುತ್ತಿದೆ. ಹಾಗೆ ಉಳಿದವರ ಹಿತಾಸಕ್ತಿಯನ್ನು ನೋಡುತ್ತಿದೆ.  ಒಂದೆಡೆ ಸೊಂಪಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಭತ್ತದ ಹೊಲ, ಅದರ ಪಕ್ಕದಲ್ಲಿ ಮೊಗ್ಗು ಅರಳಿಸಿಕೊಂಡು ನಿಂತಿರೋ ಸುಗಂಧ ರಾಜ ಹೂಗಳು. ಇನ್ನೂ ಮನೆಯಲ್ಲಿ ನೈಸರ್ಗಿಕ ಗಾಣದ ಸದ್ದು. ಹೀಗೆ ಅಪ್ಪ-ಮಗನ ಜೋಡಿ  ಕೃಷಿ ಮಾಡಿ ಅದ್ಭುತ ಸಾಧನೆ ಮಾಡಿದ್ದಾರೆ

ಮೈಸೂರಿನ ಟಿ. ನರಸೀಪುರ ತಾಲೂಕಿನ ಕಯಂಬಳ್ಳಿಯ ರೈತ ಬಸಪ್ಪ ಅತೀ ಕಡಿಮೆ ಖರ್ಚಿನಲ್ಲಿ ಭತ್ತ ಬೆಳೆಯುತ್ತಾರೆ. ಇದಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ತರಬೇತಿ ಪಡೆದಿರುವ ಬಸಪ್ಪ ಅವರು ಊರಿನಲ್ಲಿ ಅದೇ ಪ್ರಕಾರ ನಾಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಧರ್ಮಸ್ಥಳ ಸಂಸ್ಥೆಯ ಮಷಿನ್​ನಿಂದ ನಾಟಿ ಮಾಡಿಸುವ ಬಸಪ್ಪ ಅವರು, ಕೇವಲ ಎರಡೂವರೆ ಸಾವಿರ ರೂಪಾಯಿಯಲ್ಲಿ 2 ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಇನ್ನು ಸುಗಂಧರಾಜವನ್ನು ಅರ್ಧ ಎಕರೆಯಲ್ಲಿ ಬೆಳೆದಿರುವ ಬಸಪ್ಪ ಅವರು, ಅದ್ರಿಂದಾಗಿ ದಿನಕ್ಕೆ 6 ರಿಂದ 7 ಸಾವಿರ ಆದಾಯವನ್ನು ಪಡೆಯುತ್ತಿರುವುದು ವಿಶೇಷ. ನೇರವಾಗಿ ತಾವು ಬೆಳೆದ ಹೂಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಬಸಪ್ಪನವರು ಅಲ್ಲಿ ಮಾರಾಟ ಮಾಡುತ್ತಾರೆ. ಹೀಗೆ 3 ಎಕರೆ ಜಮೀನಿನಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಗಾಣದಿಂದ ಎಣ್ಣೆ ತಯಾರಿ: ಬಸಪ್ಪ ಪುತ್ರ ಹರ್ಷ ಅವರು ಮನೆಯಲ್ಲಿಯೇ ಗಾಣದಿಂದ ಎಣ್ಣೆ ತಯಾರಿಸುತ್ತಾರೆ. ಎತ್ತುಗಳ ಸಹಾಯದಿಂದ ಮಾಡುವ ನೈಸರ್ಗಿಕ ಎಣ್ಣೆ ಗಾಣ ಇದಾಗಿದ್ದು, ಪಟ್ಟಣ ಪ್ರದೇಶದಿಂದಲೂ ಗ್ರಾಹಕರು ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ.ಕೊಬ್ಬರಿ, ಹರಳೆಣ್ಣೆ, ಕಡಲೆ ಎಣ್ಣೆ ಹೀಗೆ ಹಲವು ಬಗೆಯ ಎಣ್ಣೆಗಳನ್ನೂ ಇಲ್ಲಿ ತಯಾರಿಸಲಾಗುತ್ತೆ.  ಜನರು ಗುಣಮಟ್ಟ ನೋಡಿ ಎಣ್ಣೆ ಖರೀದಿಸುತ್ತಾರೆ. ಹೀಗೆ ಅಪ್ಪ, ಮಗನ ಜೋಡಿಯ ಈ ಕೃಷಿ ಸಾಧನೆ ಕಂಡು ಗ್ರಾಮದ ಹಲವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸೋ ಇವರು ಜೀವನಕ್ಕಾಗಿ ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.

(ಕೃಪೆ : ಅಂತರ್ಜಾಲ )
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

8 hours ago

ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ

ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…

9 hours ago

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ

ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…

9 hours ago

ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ

ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…

19 hours ago

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

1 day ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

1 day ago